ಪೊಲೀಸ್ ಆಯುಕ್ತರ ಪಿಎ ಎಂದು ವಂಚನೆ ಮಾಡ್ತಿದ್ದ ಆರೋಪಿ ಅರೆಸ್ಟ್

  • TV9 Web Team
  • Published On - 13:42 PM, 30 Jul 2020

ಬೆಂಗಳೂರು: ನಗರದ ಪೊಲೀಸ್ ಆಯುಕ್ತರ ಪಿಎ ಎಂದು ಹೇಳಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್ ಅಲಿಯಾಸ್‌ ಕಿರಣ್ ಗೌಡ ಬಂಧಿತ ಆರೋಪಿ.

ಆರೋಪಿ ಶ್ರೀನಿವಾಸ್, ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಪಿಎ ಎಂದು ಸುಳ್ಳು ಹೇಳಿ ಸರ್ಕಾರಿ ನೌಕರರಿಗೆ ನಂಬಿಸಿ ಮೋಸ ಮಾಡುತ್ತಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿರೋದಾಗಿ ಹೇಳಿ, ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಬೇಕು ಅಂತ ಯುವತಿಯರ ಸಂಪರ್ಕ ಬೆಳಸಿ ಬಳಿಕ ಅವರಿಂದ ಬಯೋಡೇಟಾ ಮತ್ತು ಫೋಟೋಗಳನ್ನು ಪಡ್ಕೋತಿದ್ದ.

ಹೀಗೆ ಒಮ್ಮೆ ಸರ್ಕಾರಿ ನೌಕರರೊಬ್ಬರಿಗೆ ಕರೆ ಮಾಡಿ ನಿಮ್ಮ ಮೇಲೆ ಆರೋಪ ಇದೆ. ಅರ್ಜಿ ಕ್ಲೋಸ್‌ ಮಾಡಲು 2 ಲಕ್ಷ ರೂಪಾಯಿ ಕೊಡ ಬೇಕು ಎಂದು ಹಣಕ್ಕಾಗಿ 1 ವಾರದಿಂದ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ತನಿಖೆ ಬೆನ್ನಟ್ಟಿದ ಸಿಸಿಬಿ ಪೊಲೀಸರು ಆರೋಪಿ ಶ್ರೀನಿವಾಸ್ ಅಲಿಯಾಸ್‌ ಕಿರಣ್ ಗೌಡನನ್ನು ಬಂಧಿಸಿದ್ದಾರೆ.