ಬೆವಿವಿ ಅಂತಿಮ ವರ್ಷದ ಪಿಜಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಯ್ತು!

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ತನ್ನ ಸ್ನಾತಕೋತ್ತರ ವಿದ್ಯಾರ್ಥಿಗಳ ಕ್ಯಾಲೆಂಡರ್ ಆಫ್ ಈವೆಂಟ್ಸ್ ಅನ್ನು ರಿಲೀಸ್ ಮಾಡಿದೆ.

ಇದರ ಪ್ರಕಾರ ಆಗಸ್ಟ್ 3ರಿಂದ 21ರವರೆಗೆ ಅಂತಿಮ ವರ್ಷದ ಪಿಜಿ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯಲಿವೆ. ಈ ಸಮಯದಲ್ಲಿ ಎರಡನೇ ಹಾಗೂ ನಾಲ್ಕನೆ ಸೆಮಿಸ್ಟರ್ ಪಿಜಿ ವಿದ್ಯಾರ್ಥಿಗಳ ಇಂಟರ್ನಲ್ ಅಸೆಸ್ಮೆಂಟ್ ನಡೆಸಲಾಗುವುದು. ಇದಾದ ನಂತರ ಸೆ. 1ರಿಂದ ಸೆ. 14ರವರೆಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿವೆ.

ಹಾಗೆಯೇ, ಸೆ. 5ರೊಳಗೆ ಇಂಟರ್ನಲ್ ಅಸೆಸ್ಮೆಂಟ್ ಅನ್ನು ಸಲ್ಲಿಸಬೇಕು. ಸೆ. 15ರಿಂದ ಸೆ. 21ರವರೆಗೆ ಪ್ರಾಕ್ಟಿಕಲ್ ಹಾಗೂ ವೈವಾ ಪರೀಕ್ಷೆಗಳು ನಡೆಯುತ್ತವೆ. ಇದಾದ ನಂತರ ಸೆ. 22ರಿಂದ ಬ್ಯಾಕ್ ಲಾಗ್ ಪರೀಕ್ಷೆ ಆರಂಭವಾಗಲಿದೆ.

ಆದ್ರೆ ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳಿಗೆ ಇನ್ನೂ ವೇಳಾಪಟ್ಟಿಯನ್ನ ನಿಗದಿ ಪಡಿಸಿಲ್ಲ. ಹೀಗಾಗಿ ಈ ಕೋರ್ಸ್‌ಗಳ ವಿದ್ಯಾರ್ಥಿಗಳನ್ನು ಹೊರೆತುಪಡಿಸಿ ಉಳಿದ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.

Related Tags:

Related Posts :

Category:

error: Content is protected !!