ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು: ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ‌ ಸಿಕ್ಕಿದೆ. ಅದ್ಧೂರಿ ವೇದಿಯಲ್ಲಿ ನಡೆದ ಕಾರ್ಯಮಕ್ಕೆ ರಾಷ್ಟ್ರ, ಅಂತರಾಷ್ಟ್ರೀಯ ಸಿನಿಮಾ ತಂತ್ರಜ್ಞಾನರು ಸಾಕ್ಷಿ ಆದ್ರು.

ತೆರೆಯ ಮೇಲೆ ಕನಸಿನ ಲೋಕ.. ಬೆಳಕು ಕತ್ತಲ ಮಧ್ಯೆ ಮಾಯಾಲೋಕ.. ಜಗತ್ತಿನ ವಿಶ್ವವಿಖ್ಯಾತ ಸಿನಿಮಾಗಳು ಅನಾವರಣ.. ಕನ್ನಡ ಚಿತ್ರಗಳನ್ನ ವಿಶ್ವಕ್ಕೇ ತೆರೆದಿಡುವ ವೇದಿಕೆ.. ಪ್ರಪಂಚದ ನಾನಾ ಭಾಷೆ, ನಾನಾ ಶೈಲಿಯ ಸಿನಿಮಾಗಳನ್ನ ಒಂದೆಡೆ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಬಂದೇ ಬಿಟ್ಟಿದೆ.. ಹೌದು, ಅದುವೇ ಬೆಂಗಳೂರಿನಲ್ಲಿ ಆರಂಭವಾಗಿರೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ.

ಬೆಂಗಳೂರು ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ನ 12ನೇ ಆವೃತ್ತಿಗೆ ಕಾಲಿಟ್ಟಿದ್ದು, ವಿಶ್ವದ ಹೆಸರಾಂತ ಚಲನಚಿತ್ರೋತ್ಸವಗಳಲ್ಲಿ ಒಂದಾದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದೆ. ಕಂಠೀರವ ಒಳಗಾಂಣ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ರಂಗು ರಂಗಿನಿಂದ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಆರಂಭವಾದ ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು ಸಿನಿಮಾದ ಪ್ರಸಿದ್ಧ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿದ್ರು.

ಚಿತ್ರೋತ್ಸವಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದು, ಬಾಲಿವುಡ್ ‌ನಿರ್ಮಾಪಕ ಬೋನಿ ಕಪೂರ್, ಗಾಯಕ ಸೋನು ನಿಗಂ, ಜಯಪ್ರದ, ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅಥಿತಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ರು. ಈ ವೇಳೆ ಮಾತನಾಡಿದ ಸಿಎಂ ಬಿಎಸ್​ವೈ ಭಾರತೀಯ ಚಿತ್ರರಂಗದ ಭವಿಷ್ಯ, ಕನ್ನಡದ ಸಿನಿಮಾಗಳಲ್ಲಿ ಕಾಣುವಂತಾಗಲಿ ಅಂದ್ರು.

ಇನ್ನು ನಟಿ ಜಯಪ್ರದ ರಾಜ್​ಕುಮಾರ್, ವಿಷ್ಣು ವರ್ಧನ್, ಅಂಬರೀಶ್​ರನ್ನ ನೆನೆದ್ರು. ಪ್ರಪಂಚದ ಯಾವುದೇ ಮೂಲೆಗೆ ಹೋದ್ರೂ, ಕನ್ನಡ ಅನ್ನೋ ಶಬ್ಧ ಕೇಳುತ್ತೆ ಎಂದ ಸೋನು ನಿಗಂ, ಅನಿಸುತಿದೆ ಯಾಕೋ ಇಂದು ಹಾಡನ್ನ ಹಾಡಿದ್ರು.

ಕನ್ನಡಕ್ಕೆ ಸ್ಟುಡಿಯೋ ಕಟ್ಟಿಸಿ ಕೊಡುವಂತೆ ಸಿಎಂ ಬಿಎಸ್​ವೈ ಬಳಿ ರಾಕಿಂಗ್ ಸ್ಟಾರ್ ಯಶ್ ಮನವಿ ಮಾಡಿದ್ರು. ಕನ್ನಡದವರೇ ಭಾರತೀಯ ಚಿತ್ರರಂಗವನ್ನ ಆಳ್ತಾರೆ ಅಂದ್ರು.

ಒಟ್ನಲ್ಲಿ ಮಾರ್ಚ್​4 ರವರೆಗೂ ಚಿತ್ರಗಳ ಹಬ್ಬ ನಡೆಯಲಿದ್ದು, ಬೆಂಗಳೂರಿನ ನಾಲ್ಕು ಕಡೆ ಚಿತ್ರೋತ್ಸವ ನಡೆಯಲಿದೆ. ಒಟ್ಟು 60 ರಾಷ್ಟ್ರದ 200 ಸಿನಿಮಾಗಳು ಈ ಬಾರಿಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಡಾಂಚಿ ಅನ್ನೋ ಚಿತ್ರದೊಂದಿಗೆ ಚಲನಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more