ರಾಜ್ಯದಲ್ಲೂ ಮೊದಲ ಕೊರೊನಾ ಸೋಂಕು ಪತ್ತೆ!

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್​ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಅಮೆರಿಕದಿಂದ ರಾಜ್ಯಕ್ಕೆ ಬಂದ ಟೆಕ್ಕಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಮಾರ್ಚ್‌ 1ರಂದು ಅಮೆರಿಕದಿಂದ ರಾಜ್ಯಕ್ಕೆ ಬೆಳಗ್ಗೆ 8.30ಕ್ಕೆ ಇಂಜಿನಿಯರ್ ಆಗಮಿಸಿದ್ದ. ಈತನಿಗೆ ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೊವಿಡ್ 19 ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ವೈರಸ್‌ ಸೋಂಕಿತ ವ್ಯಕ್ತಿ, ಆತನ ಪತ್ನಿ, ಒಂದು ಮಗು ಹಾಗೂ ಚಾಲಕನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಚಾಲಕನ ಪತ್ನಿ, ಮಕ್ಕಳಿಬ್ಬರನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಚ್​ 1ರಂದು ಬೆಂಗಳೂರು ಮೂಲದ ಟೆಕ್ಕಿ ವಿಮಾನದಲ್ಲಿ ಆಗಮಿಸಿದ್ದ. ಇವರ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೂ ನಿಗಾ ವಹಿಸಲಾಗಿದೆ ಎಂದು ಡಾ.ಕೆ.ಸುಧಾಕರ್‌ ತಿಳಿಸಿದರು.

ಕರ್ನಾಟಕದಲ್ಲೂ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಆತ ಫೆ.27ರಂದು ಆಸ್ಟಿನ್​ನಿಂದ ನ್ಯೂಯಾರ್ಕ್​ಗೆ ಪ್ರಯಾಣಿಸಿದ್ದ, ನಂತರ ಫೆ.28ರಂದು ನ್ಯೂಯಾರ್ಕ್​ನಿಂದ ದುಬೈಗೆ ಬಂದಿದ್ದ. ಬಳಿಕ ಮಾರ್ಚ್​ 1ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾನೆ. ನಾಲ್ಕು ದಿನದ ನಂತರ ಆ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದೆ. ಮಾರ್ಚ್​ 5ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ನಿನ್ನೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಐಪಿಎಲ್​ಗೂ ಕೊರೊನಾ ​​ಭೀತಿ:
ಐಪಿಎಲ್​ಗೂ ಕೊರೊನಾ ವೈರಸ್​​ ಭೀತಿ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಂದ್ರದ ನಾಯಕರಿಗೆ ಪತ್ರ ಬರೆದಿದ್ದೇನೆ. ಮಹಾರಾಷ್ಟ್ರದಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲೂ ಯಾವ ತೀರ್ಮಾನ ಕೈಗೊಳ್ಳಬೇಕೆಂದು ಶೀಘ್ರದಲ್ಲೇ ನಿರ್ಧಾರ ಮಾಡಲಾಗುವುದು ಎಂದರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!