ಬೆಂಗಳೂರಿನಲ್ಲಿ ಆಂಬುಲೆನ್ಸ್‌ ಕೊರತೆ, ಟಿಟಿ ವಾಹನಗಳಲ್ಲಿ ರೋಗಿಗಳ ಸಾಗಾಟ!

ಬೆಂಗಳೂರು: ಬೆಂಗಳೂರಿನಲ್ಲಿ ಆಂಬುಲೆನ್ಸ್‌ ಕೊರತೆಯಿಂದಾಗಿ ಕೊರೊನಾ ಪೀಡಿತರು ತೊಂದರೆಗೊಳಗಾಗುತ್ತಿದ್ದಾರೆ. ಪರಿಣಾಮ ಆಂಬುಲೆನ್ಸ್‌ಗಳ ಕೊರತೆಯಿಂದಾಗಿ ಸರ್ಕಾರ ಈಗ ಟಿಟಿ ವಾಹನಗಳನ್ನ ಉಪಯೋಗಿಸಲು ಸೂಚಿಸಿದೆ.

ಹೌದು ಬೆಂಗಳೂರಿನಲ್ಲಿ ಈಗ ಟಿಟಿ ವಾಹನವೇ ಕೊರೊನಾ ಪೇಷಂಟ್ಸ್‌ಗೆ ಅಂಬ್ಯುಲೆನ್ಸ್ ಆಗಿದೆ. ಕಾರಣ  ಆಂಬ್ಯುಲೆನ್ಸ್ ಕೊರತೆ. ಪರಿಣಾಮ ಬೆಂಗಳೂರಿನಲ್ಲಿ ಕೊರೊನಾ ಪೇಷಂಟ್‌ಗಳನ್ನ ಟಿಟಿ ವಾಹನದಲ್ಲಿ ಶಿಫ್ಟ್ ಮಾಡ್ತಿದ್ದಾರೆ. ಬೆಂಗಳೂರಿನ ಆರ್ ಆರ್ ನಗರದಿಂದ ದೇವನಹಳ್ಳಿ ಆಕಾಶ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಬದಲು ಟಿಟಿ ವಾಹನವನ್ನ ಉಪಯೋಗಿಸಿರುವ ಘಟನೆ ವರದಿಯಾಗಿದೆ.

ಆದ್ರೆ ಇದು ಎಷ್ಟು ಸೇಫ್ ಅನ್ನೋ ಕುರಿತು ತಜ್ಞರಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಇಂಥದ್ರಲ್ಲಿ ಟಿಟಿ ಡ್ರೈವರ್‌ಗೆ ಪಿಪಿಇ ಕಿಟ್ ಹಾಕಿ ಕಳ್ತಿಸ್ತಿರೋದು ಎಷ್ಟು ಸರಿ ಅನ್ನೋ ಮಾತು ಕೇಳಿ ಬರ್ತಿದೆ. ಹಾಗೇನೇ ಇದು ಸರ್ಕಾರದ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

Related Tags:

Related Posts :

Category:

error: Content is protected !!