ಸರ್ಕಾರಿ ಸಿಬ್ಬಂದಿಗೆ ಮಂಡೆ ಬ್ಲೂಸ್, ಕೈಗೆ ಪೊರಕೆ ತೆಗೆದುಕೊಂಡ DC

ನೆಲಮಂಗಲ: ಇಂದು ವಾರದ ಆರಂಭ. ಸರ್ಕಾರಿ ಸಿಬ್ಬಂದಿಗೆ ಮಂಡೆ ಬ್ಲೂಸ್​. ಅದ್ರೆ ಸಂಡೆ ರಜೆ ನಂತ್ರ.. ಅಯ್ಯೋ ಮತ್ತೆ ಕೆಲ್ಸಕ್ಕೆ ಹೋಗಬೇಕಲ್ಲಪ್ಪಾ ಅನ್ನೋ ನಿರಾಸಕ್ತಿ ಮನಸ್ಥಿತಿ. ಹಾಗೆಂದೇ ಬಹಳಷ್ಟು ನೌಕರರು ಕಚೇರಿಗಳಗೆ ತಡವಾಗಿ ಕೆಲಸಕ್ಕೆ ತೆರಳುವುದುಂಟು. ಆದ್ರೆ ಅವರನ್ನ ಕಾಯುವ ಮೇಲಾಧಿಕಾರಿ ಅದೂ ಸಾಕ್ಷಾತ್​ ಜಿಲ್ಲಾಧಿಕಾರಿ ಸುಮ್ಮನಿರಬೇಕಲ್ಲಾ!?

ಲೇಟ್​ ಲತೀಫ್ಸ್​: ಇಂದೂ ಹೀಗೆ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಇಂದು ಬೆಳಗ್ಗೆ ಸಮಯಕ್ಕೆ ಸರಿಯಾಗಿ ನೆಲಮಂಗಲ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿಬಿಟ್ಟಿದ್ದಾರೆ. ಕಚೇರಿಯಲ್ಲಿ ಕಸ ಕಂಡು, ಪೊರಕೆ ಹಿಡಿದು ಸ್ವಚ್ಛತಾ ಕೆಲಸ ಶುರು ಹಚ್ಚಿಕೊಂಡಿದ್ದಾರೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ.

ಈ ಮಧ್ಯೆ, ತಹಶೀಲ್ದಾರ್​ ಸೇರಿದಂತೆ ಸಿಬ್ಬಂದಿ ವಿರುದ್ಧ ಡಿಸಿ ಗರಂ ಆಗಿದ್ದಾರೆ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆದೇಶಿಸುವ ಮೂಲಕ ಮತ್ತೊಂದು ರೀತಿಯ ಸ್ವಚ್ಛತಾ ಕಾರ್ಯಕ್ಕೆ ಕೈಹಾಕಿದ್ದಾರೆ.

Related Posts :

Category:

error: Content is protected !!