ಭಾರತ್ ಬಂದ್​: ಹೃದಯಾಘಾತದಿಂದ ಕರ್ತವ್ಯನಿರತ ಮುಖ್ಯಪೇದೆ ಸಾವು

ಶಿವಮೊಗ್ಗ: ಭಾರತ್ ಬಂದ್​ನ ಬಂದೋಬಸ್ತ್​ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದಲ್ಲಿ ನಡೆದಿದೆ. ಹೊಳೆಹೊನ್ನೂರು ಠಾಣೆಯ ಮುಖ್ಯಪೇದೆ ರವಿ ಶೇಟ್ ಮೃತ ದುರ್ದೈವಿ.

ಇಂದು ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಬಂದೋಬಸ್ತ್​ಗೆ ನಿಯೋಜನೆ ಮಾಡಲಾಗಿತ್ತು. ಕರ್ತವ್ಯ ನಿರ್ವಹಣೆ ವೇಳೆ ರವಿ ಶೇಟ್​ಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮುಖ್ಯಪೇದೆ ರವಿ ಶೇಟ್ ಮೃತಪಟ್ಟಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!