BREAKING NEWS
India vs Australia, 2nd ODI, LIVE Score: ಗೆಲ್ಲುವ ಒತ್ತಡದಲ್ಲಿ ಟೀಂ ಇಂಡಿಯಾ

ಲಾಕ್​ಡೌನ್ ಬಳಿಕ ಮೊದಲ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ, ಆಸ್ಟ್ರೇಲಿಯಾ ವಿರುದ್ಧ ಇಂದು ಎರಡನೇ ಏಕದಿನ ಪಂದ್ಯವನ್ನು ಆಡುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 50 ಓವರ್​ಗಳಲ್ಲಿ, 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತ್ತು. ಈ ಮೂಲಕ ಭಾರತಕ್ಕೆ 390 ರನ್​ಗಳ ಟಾರ್ಗೆಟ್ ನೀಡಿತ್ತು. ಆಸಿಸ್ ಆಟಗಾರರನ್ನು ಕಟ್ಟಿಹಾಕುವಲ್ಲಿ ವಿಫಲರಾದ ಭಾರತೀಯ ಬೌಲರ್​ಗಳು ದುಬಾರಿ ಅನಿಸಿಕೊಂಡಿದ್ದರು. ಇದೀಗ ಟಾರ್ಗೆಟ್ ಬೆನ್ನತ್ತಿರುವ ಭಾರತಕ್ಕೆ ದೊಡ್ಡ ಮೊತ್ತವನ್ನು ಪೇರಿಸುವ ಜವಾಬ್ದಾರಿ

x

ಕೊವಾಕ್ಸಿನ್ ಲಸಿಕೆಯ ಪ್ರಯೋಗಕ್ಕೆ Volunteers ಬೇಕಾಗಿದ್ದಾರೆ.. ಯಾರೆಲ್ಲಾ ಪಾಲ್ಗೊಳ್ಳಬಹುದು?

  • pruthvi Shankar
  • Published On - 15:49 PM, 21 Nov 2020

ಕೋವಿಡ್-19 ಲಸಿಕೆಗಳನ್ನು ಜನ ಬಳಕೆಗೆ ಶೀಘ್ರವಾಗಿ ಲಭ್ಯವಾಗುವಂತೆ ಮಾಡಬೇಕೆನ್ನುವ ಪ್ರಯತ್ನಕ್ಕೆ ಹೊಸ ವೇಗ ದೊರೆತಿದೆ. ಯೂರೋಪಿನ ಹಲವು ದೇಶಗಳಲ್ಲಿ ಕೊರೊನಾ ವೈರಸ್​ನ 2ನೇ ಅಲೆ ಪ್ರಬಲವಾಗುತ್ತಿರುವ ಭೀತಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯೋಗದ ಅಂತಿಮ ಹಂತಕ್ಕೆ ಬಂದಿರುವ ಲಸಿಕೆಗಳು ಹೊಸ ಭರವಸೆ ಮೂಡಿಸಿವೆ.

ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಕೊಲ್ಕತ್ತಾ ಮಹಾನಗರಗಳಲ್ಲಿ ಬೇಕಾಗಿದ್ದಾರೆ.. 
ಲಸಿಕೆ ತಯಾರಿಕೆ ಪ್ರಯತ್ನದಲ್ಲಿ ಮುಂಚೂಣಿಯಲ್ಲಿರುವ ಭಾರತ್ ಬಯೋಟೆಕ್ ಕಂಪನಿಯು ಕೊವಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಕೊಲ್ಕತ್ತಾ ಮಹಾನಗರಗಳಲ್ಲಿ ತಲಾ 2000 ಆಸಕ್ತರನ್ನು ನೋಂದಾಯಿಸಲು ಮುಂದಾಗಿದೆ.

ಅಮೆರಿಕದ ಫೈಜರ್ ಮತ್ತು ಜರ್ಮನಿಯ ಬಯೋಎನ್ಟೆಕ್ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ BNT162b2 ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅಮೆರಿಕ ಸರ್ಕಾರಕ್ಕೆ ಅರ್ಜಿ ಸಲ್ಲಿಸಿವೆ.

ಕೋವಿಡ್-19 ಲಸಿಕೆಗೆ ಸಂಬಂಧಿಸಿದಂತೆ ನಡೆದಿರುವ ಬೆಳವಣಿಗೆಗಳು
1. ಕೋವಿಡ್-19 ನಿಯಂತ್ರಣಕ್ಕೆ ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು, ಲಸಿಕೆಯ ಪ್ರಯೋಗದಲ್ಲಿ ಪಾಲ್ಗೊಳ್ಳಲು ಆಸಕ್ತರನ್ನು ಸ್ವಾಗತಿಸಿದೆ. 18 ವರ್ಷಕ್ಕಿಂತ ಕಡಿಮೆ ಇರುವವರು ಮತ್ತು ಈ ಹಿಂದೆ ಕೋವಿಡ್-19 ಪಾಸಿಟಿವ್ ಆಗಿದ್ದವರು ಪ್ರಯೋಗದಲ್ಲಿ ಪಾಲ್ಗೊಳ್ಳುವಂತಿಲ್ಲ.

ಇದು ಭಾರತದಲ್ಲಿ ಈವರೆಗಿನ ಅತಿದೊಡ್ಡ ಲಸಿಕೆ ಪ್ರಯೋಗ ಎನಿಸಿಕೊಂಡಿದೆ. ‘ಬ್ರೆಜಿಲ್ ದೇಶದ ಸರ್ಕಾರದೊಂದಿಗೂ ಕಂಪನಿ ಸಂಪರ್ಕದಲ್ಲಿದ್ದು, ಅಲ್ಲಿಯೂ ಪ್ರಯೋಗ ನಡೆಸಲು ಮುಂದಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಾಯಿ ಪ್ರಸಾದ್ ಅವರು ತಿಳಿಸಿದ್ದಾರೆ.

2. ಫೈಜರ್ ಮತ್ತು ಬಯೊಎನ್ಟೆಕ್ ಕಂಪನಿಗಳು ಅಭಿವೃದ್ಧಿಪಡಿಸಿರುವ BNT162b2 ಲಸಿಕೆ ಕೊರೊನಾ ನಿಯಂತ್ರಣಕ್ಕೆ ಶೇ 95ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಸುರಕ್ಷೆಗೆ ಸಂಬಂಧಿಸಿದಂತೆಯೂ ಯಾವುದೇ ಗಣನೀಯ ಆತಂಕಗಳು ವರದಿಯಾಗಿಲ್ಲ. ಔಷಧಿಯ ತುರ್ತು ಬಳಕೆಗೆ ಅನುಮತಿ ಕೋರಿ ‘ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾ ಸಂಸ್ಥೆ‘ಗೆ (FDA – United States Food and Drug Administration) ಅರ್ಜಿ ಸಲ್ಲಿಸಿರುವುದಾಗಿ ಫೈಜರ್ ಸಿಇಒ ಆಲ್ಬರ್ಟ್ ಬೌರ್ಲಾ ತಿಳಿಸಿದ್ದಾರೆ.

3. ದೀರ್ಘಕಾಲ ಸಕ್ರಿಯವಾಗಿರುವ ಮೊನೊಕ್ಲೋನಲ್ ಪ್ರತಿಕಾಯದ (ಆ್ಯಂಟಿಬಾಡಿ) ಸಂಯೋಜನೆಯಿಂದ AZD7442 ಔಷಧಿಯನ್ನು ಅಭಿವೃದ್ಧಿಪಡಿಸಿರುವ ಬ್ರಿಟನ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ಇಂದಿನಿಂದ (ನ.21) ಅಂತಿಮ ಹಂತದ ಪ್ರಯೋಗ ಆರಂಭಿಸಿದೆ. ನಿರ್ದಿಷ್ಟ ಬಿಳಿ ರಕ್ತಕಣಗಳಿಂದ ಪ್ರತ್ಯೇಕಿಸಿರುವ ಪ್ರತಿಕಾಯದಿಂದ ಅಭಿವೃದ್ಧಿಪಡಿಸಿರುವ ಈ ಔಷಧಿಯನ್ನು ತೆಗೆದುಕೊಂಡ ನಂತರದ 12 ತಿಂಗಳು ಕೊರೊನಾ ಸೋಂಕಿನ ಭೀತಿ ಇರುವುದಿಲ್ಲ.

ಯೂರೋಪಿನ ವಿವಿಧ ದೇಶಗಳು ಮತ್ತು ಅಮೆರಿಕದಿಂದ ಒಟ್ಟು 5000 ಮಂದಿಯನ್ನು ಪ್ರಯೋಗ ನಡೆಸಲು ಸಂಸ್ಥೆ ಆಯ್ಕೆ ಮಾಡಿದೆ. ಲಸಿಕೆಗೂ ಈ ಔಷಧಿಯ ಕಾರ್ಯವೈಖರಿಗೂ ಬಹಳ ವ್ಯತ್ಯಾಸವಿದೆ. ಲಸಿಕೆಗಳು ದೇಹದಲ್ಲಿ ಪ್ರತಿಕಾಯಗಳನ್ನು ಬೆಳೆಸುವ ಮೂಲಕ ಸೋಂಕು ತಡೆಗಟ್ಟುತ್ತದೆ, ಈ ಔಷಧಿಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಸೋಂಕಿನಿಂದ ರಕ್ಷಿಸುತ್ತದೆ.