ಮತ್ತೆ ಬೆಂಗಳೂರಿನಲ್ಲಿ ಪೊಲೀಸರ ಫೈರಿಂಗ್​: ಇಬ್ಬರು ಕೊಲೆ ಆರೋಪಿಗಳು ಅರೆಸ್ಟ್​

ಬೆಂಗಳೂರು: ಮತ್ತೆ ಬೆಂಗಳೂರಿನಲ್ಲಿ ಪೊಲೀಸರ ಗನ್ ಸೌಂಡ್ ಮಾಡಿದೆ. ಜ.13ರಂದು ಸಿಸಿಬಿ ಪೊಲೀಸರು ಬಿಟಿಎಂ ಲೇಔಟ್​ ಬಳಿ ಗುಂಡಿನ ದಾಳಿ ನಡೆಸಿ ಇಬ್ಬರು ರೌಡಿಶೀಟರ್​ಗಳನ್ನು ಬಂಧಿಸಿದ್ದರು. ಇದೀಗ ಭಾರತಿನಗರ ಪೊಲೀಸರು ಗುಂಡಿನ ಮೊರೆತ ನಡೆಸಿ ಇಬ್ಬರು ಕೊಲೆ ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ.

ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರು, ಕಲಪಲ್ಲಿ ಸ್ಮಶಾನದ ಬಳಿ ಆರೋಪಿಗಳಾದ ಮೊಹಮ್ಮದ್ ರಿಜ್ವಾನ್, ಪರ್ವೇಜ್ ಅಹ್ಮದ್ ಮೇಲೆ ಭಾರತಿನಗರ ಠಾಣೆ ಇನ್ಸ್‌ಪೆಕ್ಟರ್ ರಮೇಶ್‌ ಫೈರಿಂಗ್ ನಡೆಸಿ ಬಂಧಿಸಿದ್ದಾರೆ.

ರಿಜ್ವಾನ್ ಅತ್ತಿಗೆಯೊಂದಿಗೆ ಅಬ್ದೂಲ್ ಮತೀನ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಶಿವಾಜಿನಗರದಿಂದ ಅಬ್ದೂಲ್ ಮತೀನ್ ಎಂಬುವನನ್ನು ಕಿಡ್ನಾಪ್ ಮಾಡಿ ಬಾಗಲೂರಿನಲ್ಲಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮತೀನ್​ಗೆ ಸಹಾಯ ಮಾಡಿದ್ದ ಅಬು ಸೂಫಿಯಾನ್ ಮೇಲೆ ಜನವರಿ 16ರ ರಾತ್ರಿ ಆರೋಪಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದರು.

ಸೂಫಿಯಾನ್ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿದ ವೇಳೆ ಮತೀನ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇದುವರೆಗೂ ಒಟ್ಟು ಏಳು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


Related Posts :

Category:

error: Content is protected !!

This website uses cookies to ensure you get the best experience on our website. Learn more