ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಡಿಸೆಂಬರ್ ನಲ್ಲಿ ರಚಿಸಿದ್ದ ಕೃಷಿ ಕಾಯ್ದೆ ಪರ ಸಮಿತಿಯಲ್ಲಿ ಭೂಪೇಂದರ್ ಸಿಂಗ್ ಮನ್ ಅವರು ಸಹ ಸದಸ್ಯರಾಗಿದ್ದರು. ಹೀಗಾಗಿ, ಭೂಪೇಂದರ್ ಸಿಂಗ್ ಮನ್ ಅವರನ್ನೂ ಸೇರಿ ಸಮಿತಿ ಸದಸ್ಯರ ಬಗ್ಗೆ ರೈತ ಒಕ್ಕೂಟಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಬೆನ್ನಲ್ಲೇ ಭೂಪೇಂದರ್ ಸಿಂಗ್ ಮನ್ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿ: ಕೃಷಿ ಕಾಯ್ದೆಗಳ ಪರ ಒಲವು ವ್ಯಕ್ತಪಡಿಸಿದ್ದ ಮಾಜಿ ಸಂಸದ ಮತ್ತು ಭಾರತೀಯ ಕಿಸಾನ್ ಯೂನಿಯನ್ನ ಅಧ್ಯಕ್ಷರೂ ಆಗಿರುವ ಭೂಪೇಂದರ್ ಸಿಂಗ್ ಮನ್ , ಸುಪ್ರೀಂ ಕೋರ್ಟ್ ನೇಮಿಸಿರುವ ತಜ್ಞರ ಸಮಿತಿಯ ಸದಸ್ಯತ್ವ ನಿರಾಕರಿಸಿದ್ದಾರೆ. ತಮ್ಮನ್ನು ಆಯ್ಕೆಮಾಡಿರುವ ಸುಪ್ರೀಂಕೋರ್ಟ್ಗೆ ಧನ್ಯವಾದ ತಿಳಿಸಿರುವ ಅವರು, ಈ ಸಮಿತಿಯಿಂದ ನಿರ್ಗಮಿಸುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ದೆಹಲಿ ಚಲೋ ಚಳುವಳಿಕಾರರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಜ್ಞರ ಸಮಿತಿ ರಚಿಸಿತ್ತು. ರೈತ ಒಕ್ಕೂಟಗಳು ಮತ್ತು ಕೇಂದ್ರ ಸರ್ಕಾರ ತಜ್ಞರ ಸಮಿತಿಯಿಂದ ಒಮ್ಮತ ಪಡೆಯಲಿ ಎಂದು ನ್ಯಾಯಪೀಠ ತಿಳಿಸಿತ್ತು. ರೈತನೂ ಆಗಿರುವ ನಾನು, ಸಾರ್ವಜನಿಕರ ಭಾವನೆ ಮತ್ತು ಆತಂಕಗಳನ್ನು ಗಮನಿಸಿ ಪಂಜಾಬ್ ಮತ್ತು ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಯಾವುದೇ ಸ್ಥಾನವನ್ನು ತ್ಯಾಗಮಾಡಲು ಸಿದ್ಧನಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭೂಪೇಂದರ್ ಸಿಂಗ್ ಮನ್ ಬರೆದ ಪತ್ರ
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಡಿಸೆಂಬರ್ ನಲ್ಲಿ ರಚಿಸಿದ್ದ ಕೃಷಿ ಕಾಯ್ದೆ ಪರ ಸಮಿತಿಯಲ್ಲಿ ಭೂಪೇಂದರ್ ಸಿಂಗ್ ಮನ್ ಅವರು ಸಹ ಸದಸ್ಯರಾಗಿದ್ದರು. ಹೀಗಾಗಿ, ಭೂಪೇಂದರ್ ಸಿಂಗ್ ಮನ್ ಅವರನ್ನೂ ಸೇರಿ ಸಮಿತಿ ಸದಸ್ಯರ ಬಗ್ಗೆ ರೈತ ಒಕ್ಕೂಟಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಬೆನ್ನಲ್ಲೇ ಭೂಪೇಂದರ್ ಸಿಂಗ್ ಮನ್ ಪ್ರತಿಕ್ರಿಯೆ ನೀಡಿದ್ದಾರೆ.
1990 ರಿಂದ 96 ರ ಅವಧಿಗೆ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದ ಭೂಪೇಂದರ್ ಸಿಂಗ್ ಮನ್, 2012, 2017 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಅಲ್ಲದೇ, ಕೃಷಿ ಕಾಯ್ದೆಗಳ ಪರ ಒಲವು ವ್ಯಕ್ತಪಡಿಸಿದ್ದರು. 81 ರ ವಯೋಮಾನದ ಅವರು, 1980 ರ ದಶಕದಲ್ಲಿ ಆಲ್ ಇಂಡಿಯಾ ಕಿಸಾನ್ ಕೋರ್ಡಿನೇಶನ್ ಕಮಿಟಿಯ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಜತೆಗೆ ಹಾಲಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.