ಪರಿಸರದ ಮಡಿಲಲ್ಲಿ ಮಕ್ಕಳ ಶಿಕ್ಷಣ, ಕನ್ನಡ ಉಳಿಸಿ ಹಸಿರು ಬೆಳೆಸುವ ಮಾದರಿ ಶಾಲೆ

ಬೀದರ್: ಆ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳೆಂದರೆ ಮೂಗು ಮುರಿಯೋ ಜನರೆ ಜಾಸ್ತಿ. ಎಲ್ಲರೂ ಖಾಸಗಿ ಶಾಲೆಗೆ ಮಾರು ಹೋಗಿದ್ದಾರೆ. ಆದ್ರೆ ಆ ಶಾಲೆ ಮಾತ್ರ ನಾವು ಖಾಸಗಿ ಶಾಲೆಗೇನು ಕಮ್ಮಿ ಇಲ್ಲ ಅನ್ನೋ ರೇಂಜ್‌ಗೆ ಬೆಳೆದಿದೆ. ಹಚ್ಚ ಹಸಿರಿನಿಂದಲೇ ಸದ್ದು ಮಾಡುತ್ತಿದೆ.

ಬೀದರ್‌ ತಾಲೂಕಿನ ಫತ್ತೆಪುರ ಗ್ರಾಮದಲ್ಲಿ ಒಂದು ಶಾಲೆ ಇದೆ. ಅದು ಎಲ್ಲಾ ಶಾಲೆಗಳಿಗೂ ಮಾದರಿ ಶಾಲೆಯಾಗಿ ಬೆಳೆದಿದೆ. ಇದರ ಸುತ್ತಾ ಹಚ್ಚ ಹಸಿರು ಶಾಲೆಯ ವಾತಾವರಣವನ್ನು ಕಂಗೊಳಿಸುವಂತೆ ಮಾಡಿದೆ. ಈ ಶಾಲೆ ಸರ್ಕಾರಿ ಶಾಲೆ ಖಾಸಗಿ ಸ್ಕೂಲ್‌ಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.

ಶಾಲೆಯಲ್ಲಿ ಪ್ರಸಕ್ತ 163 ಮಕ್ಕಳು ಓದುತ್ತಿದ್ದು, ಶೇ.100 ಹಾಜರಿ ಇದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಈ ಶಾಲೆ ಹೆಸರು ಮಾಡಿದ್ದು ಹಸಿರಿನಿಂದ. ಉತ್ತಮ ಪರಿಸರ ಪ್ರಜ್ಞೆ ಮೂಡಿಸಲು ನೂರಾರು ವಿವಿಧ ತರಹದ ಸಸಿಗಳನ್ನು ಶಾಲಾ ಆವರಣದಲ್ಲಿ ನೆಡಲಾಗಿದೆ. ಇಲ್ಲಿ ಗಿಡ, ಮರಗಳನ್ನು ಮಕ್ಕಳಂತೆ ಆರೈಕೆ ಮಾಡಲಾಗುತ್ತಿದೆ. ಶಾಲೆಯ ವಾತಾವರಣ ಹಸಿರಿನಿಂದ ಕಂಗೊಳಿಸುತ್ತಿದ್ದು, ನಮಗೆ ಶಾಲೆಗೆ ಬಂದರೆ ಖುಷಿಯಾಗುತ್ತೆ ಅಂತಾರೆ ಪುಟಾಣಿ ಮಕ್ಕಳು.

ಇನ್ನು ಶಾಲೆಯಲ್ಲಿ ಸೋಲಾರ ಅಳವಡಿಸಲಾಗಿದ್ದ ವಿದ್ಯುತ್ ಕೈ ಕೊಟ್ಟಾಗ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲಿ ಆಗುವುದಿಲ್ಲ. ಜೊತೆಗೆ ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನ ಈ ಶಾಲೆಯಲ್ಲಿ ಕಲ್ಪಿಸಲಾಗಿದೆ. ಶಾಲಾ ಆವರಣವಂತೂ ಪ್ಪಪ್ಪಾಯಿ, ಮಾವು, ನೇರಳೆ ಹಾಗೂ ಜೌಷಧ ಗಿಡಗಳು ಸೇರಿದಂತೆ ಸುಮಾರು 300 ಗಿಡಮರಗಳಿಂದ ತುಂಬಿ ನಂದನವನದಂತೆ ಕಂಗೊಳಿಸುತ್ತಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more