ನಟ ಸುಶಾಂತ್​ ಆತ್ಮಹತ್ಯೆ ಕೇಸ್​: ಮುಂಬೈನಲ್ಲಿ IPS ತನಿಖಾಧಿಕಾರಿಗೆ ‘ಬಲವಂತದ’ ಕ್ವಾರಂಟೈನ್​!

ಮುಂಬೈ: ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದ ತನಿಖೆಗಿಂತ ಅದರಲ್ಲಿ ಭಾಗಿಯಾಗಿರುವ ಪೊಲೀಸ್​ ಅಧಿಕಾರಿಗಳ ಕಚ್ಚಾಟವೇ ಹೆಚ್ಚು ಸುದ್ದಿ ಮಾಡುತ್ತಿದೆ. ಇದೀಗ, ಸುಶಾಂತ್​ ಆತ್ಮಹತ್ಯೆಯ ತನಿಖೆ ನಡೆಸಲು ಬಿಹಾರದ ಪಾಟ್ನಾದಿಂದ ಆಗಮಿಸಿದ್ದ IPS ಅಧಿಕಾರಿಯನ್ನ ಮುಂಬೈ ಆರೋಗ್ಯಾಧಿಕಾರಿಗಳು ‘ಬಲವಂತವಾಗಿ’ ಕ್ವಾರಂಟೈನ್​ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪವನ್ನ ಖುದ್ದು ಬಿಹಾರದ DGP ಗುಪ್ತೇಶ್ವರ ಪಾಂಡೆ ತಮ್ಮ ಟ್ವಿಟರ್​ ಖಾತೆಯಲ್ಲಿ ಹೇಳಿದ್ದಾರೆ.

ನಟ ಸುಶಾಂತ್​ನ ತಂದೆ ಪಾಟ್ನಾ ಪೊಲೀಸರಿಗೆ ನೀಡಿದ ದೂರಿನನ್ವಯ IPS ಅಧಿಕಾರಿ ವಿನಯ್​ ತಿವಾರಿ ಹೆಚ್ಚಿನ ತನಿಖೆ ನಡೆಸಲು ತಮ್ಮ ತಂಡದೊಂದಿಗೆ ಮುಂಬೈಗೆ ನಿನ್ನೆ ಆಗಮಿಸಿದ್ದರು. ತಿವಾರಿ ಮುಂಬೈಗೆ ಬಂದ ಕೂಡಲೇ ಇಡೀ ತಂಡವನ್ನ ಮುಂಬೈ ಆರೋಗ್ಯಾಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್​ ಮಾಡಿದ್ದಾರೆ ಎಂದು ಗುಪ್ತೇಶ್ವರ ಪಾಂಡೆ ಆರೋಪಿಸಿದ್ದಾರೆ.

ಜೊತೆಗೆ, ತಿವಾರಿ ಎಷ್ಟೇ ಕೇಳಿಕೊಂಡರೂ IPS ಅಧಿಕಾರಿಗಳ ಗೆಸ್ಟ್​ ಹೌಸ್​ನಲ್ಲಿ ವಿನಯ್​ರನ್ನ ಇರಿಸಿಲ್ಲ ಎಂದು ತಿಳಿದುಬಂದಿದೆ. ಸುಶಾಂತ್​ನ ಸ್ನೇಹಿತೆ ರಿಯಾ ಚಕ್ರವರ್ತಿಯ ವಿರುದ್ಧ ನಟನ ತಂದೆ ಪಾಟ್ನಾದಲ್ಲಿ ದೂರು ದಾಖಲಿಸಿದ್ದಾರೆ.

Related Tags:

Related Posts :

Category: