ಮಾಸ್ಕ್ ಕಿರಿಕ್: ನೀವು ನಮ್ಮಂಥ ಹಣವಿಲ್ಲದವರನ್ನೇ ಟಾರ್ಗೆಟ್ ಮಾಡ್ತೀರಿ.. ಪೊಲೀಸರ ಜತೆ ಸವಾರನ ವಾಗ್ವಾದ

  • Ayesh Banu
  • Published On - 14:00 PM, 22 Nov 2020

ಮೈಸೂರು: ಮಹಾಮಾರಿ ಕೊರೊನಾ ಪರಿಚಯವಿದ್ದರೂ ನಮ್ಮ ಜನ ಮಾಸ್ಕ್ ಹಾಕೋಕೆ ಹಿಂದೇಟು ಹಾಕುತ್ತಿದ್ದಾರೆ. ಮಾಸ್ಕ್ ಧರಿಸದೆ ಸಾರ್ವಜನಿಕರು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ಮಾಸ್ಕ್ ದಂಡ ವಸೂಲಿಗೆ ಇಳಿದಿದ್ದಾರೆ.

ಮೈಸೂರಿನ ಪ್ರಮುಖ ಸಿಗ್ನಲ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಗಲ್ಲಿ ಗಲ್ಲಿಯಲ್ಲೂ ಮಾಸ್ಕ್ ಹಾಕದವರ ಭೇಟೆಗೆ ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಮಾಸ್ಕ್ ಧರಿಸದ ಸವಾರನಿಗೆ ಪೊಲೀಸರು ದಂಡ ವಿಧಿಸಿದ್ರು. ಆದರೆ ಬೈಕ್ ಸವಾರ ಪೊಲೀಸರ ಜತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ಬೈಕ್‌ನಲ್ಲಿ ಒಬ್ಬನೇ ಹೋಗುತ್ತಿದ್ದೇನೆ, ಮಾಸ್ಕ್ ಏಕೆ ಬೇಕು.

ನನ್ನ ಬಳಿ ಮಾಸ್ಕ್ ಫೈನ್ ಕಟ್ಟುವುದಕ್ಕೆ ಹಣವೇ ಇಲ್ಲ. ನೀವು ನಮ್ಮಂಥ ಹಣವಿಲ್ಲದವರನ್ನೇ ಟಾರ್ಗೆಟ್ ಮಾಡ್ತೀರಿ. ನನ್ನ ಬಳಿ ಊಟಕ್ಕೂ ಹಣವಿಲ್ಲ, ನಾನು ಫೈನ್ ಕಟ್ಟೋದಿಲ್ಲ ಎಂದು ಮಾಸ್ಕ್ ಫೈನ್ ಕಟ್ಟುವುದಕ್ಕೆ ಬೈಕ್ ಸವಾರ ನಿರಾಕರಿಸಿದ. ಬಳಿಕ ಬಹಳಷ್ಟು ವಾದ-ವಿವಾದಗಳಾಗಿ ಕೊನೆಗೂ ವಿಧಿಯಿಲ್ಲದೆ ಮಾಸ್ಕ್ ದಂಡ ಪಾವತಿಸಿ ಹಿಂತಿರುಗಿದ್ದಾನೆ.