ಮರಕ್ಕೆ ಡಿಕ್ಕಿ ಹೊಡೆದ ಬೈಕ್, ಸ್ಥಳದಲ್ಲೇ ಸವಾರ ಸಾವು

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ಚಿಕ್ಕಜೋಗಿಹಳ್ಳಿ ಬಳಿ ನಡೆದಿದೆ. ರಮೇಶ್ (27) ಮೃತ ದುರ್ದೈವಿ.

ಜಗಳೂರು ತಾಲೂಕಿನ ಓಬಲಾಪುರ ಗ್ರಾಮದ ನಿವಾಸಿ ರಮೇಶ್ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದಾರೆ. ಈ ಪರಿಣಾಮ ಸ್ಥಳದಲ್ಲೇ ಅವರ ಪ್ರಾಣ ಯಮನ ಪಾದ ಸೇರಿದೆ. ಘಟನೆ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags:

Related Posts :

Category:

error: Content is protected !!