ಹಕ್ಕಿಜ್ವರ ಭೀತಿ: ಧೋನಿ ಫಾರಂನಿಂದ ಬಂದಿದ್ದ 2,500 ಕಡಕ್‌ನಾಥ್ ಕೋಳಿಗಳ ಹತ್ಯೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲ್ಲಿಂಗ್ ಆಪರೇಷನ್ ಮಾಡಲಾಗುತ್ತಿದ್ದು ಧೋನಿ ಫಾರಂನಿಂದ ಬಂದಿದ್ದ 2,500 ಕಡಕ್‌ನಾಥ್ ಕೋಳಿಗಳ ಹತ್ಯೆ ಮಾಡಲಾಗಿದೆ.

  • TV9 Web Team
  • Published On - 11:23 AM, 13 Jan 2021
ಕಡಕ್‌ನಾಥ್ ಕೋಳಿಗಳು

ಇಂದೋರ್‌: ಕೊರೊನಾ ನಡುವೆಯೇ ಈಗ ದೇಶದಲ್ಲಿ ಹಕ್ಕಿಜ್ವರದ ಭೀತಿ ಹೆಚ್ಚಾಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲ್ಲಿಂಗ್ ಆಪರೇಷನ್ ಮಾಡಲಾಗುತ್ತಿದ್ದು ಧೋನಿ ಫಾರಂನಿಂದ ಬಂದಿದ್ದ 2,500 ಕಡಕ್‌ನಾಥ್ ಕೋಳಿಗಳ ಹತ್ಯೆ ಮಾಡಲಾಗಿದೆ.

ರಾಂಚಿಯಲ್ಲಿರುವ ಧೋನಿ ಫಾರ್ಮ್ ಹೌಸ್​ಗೆ ಪೂರೈಸಬೇಕಾಗಿದ್ದ ಸುಮಾರು 2,500 ಕಡಕ್ ನಾಥ್ ಕೋಳಿಗಳನ್ನು ಕೊಲ್ಲಲಾಗಿದೆ. ಮಧ್ಯಪ್ರದೇಶದಿಂದ ಈ ಕೋಳಿಗಳ ಪೂರೈಕೆಗೆ ತೀರ್ಮಾನಿಸಲಾಗಿತ್ತು. ಆದರೆ ಕೋಳಿ ಜ್ವರದ ಹಿನ್ನೆಲೆಯಲ್ಲಿ ಆ ಕೋಳಿಗಳನ್ನು ಕೊಳ್ಳಲಾಗಿದೆ.

2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ!