ಆರತಿ ಬೆಳಗಿ ಕೇಕ್ ಕತ್ತರಿಸಿ ಬರ್ತಡೆ ಆಚರಿಸಿದ ನಾಯಿ, ಗಿಫ್ಟ್ ಆಗಿ 50 ಗ್ರಾಂ ಚಿನ್ನದ ಸರ

ವಿಜಯಪುರ: ಎಲ್ಲಾ ಮನುಷ್ಯರು ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳುವುದು ಸಾಮಾನ್ಯ ಆದರೆ ಇಲ್ಲಿ ವಿಶಿಷ್ಟವಾಗಿ ಸಾಕು ನಾಯಿಯ ಹುಟ್ಟು ಹಬ್ಬವನ್ನ ಆಚರಿಸಲಾಗಿದೆ. ನಿಡಗುಂದಿ ಪಟ್ಟಣದ ಬಿಎಂಟಿಸಿ ನೌಕರ ಶರಣು ಪತ್ರಿ ಹಾಗೂ ಶರಣು ಮಾವ ಸಂಗಯ್ಯ ಎಂಬುವವರು ತಮ್ಮ ಮುದ್ದಿನ ಸಾಕು ನಾಯಿ ಟೈಗರ್​ನ ಎರಡನೇ ವರ್ಷದ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಕಳೆದ ಡಿಸೆಂಬರ್ 28 ರಂದು ಶ್ವಾನದ ಹುಟ್ಟು ಹಬ್ಬವನ್ನು ಹಲವಾರು ಸ್ನೇಹಿತರಿಗೆ ಸ್ಥಳೀಯರಿಗೆ ಊಟ ಹಾಕಿ ಬರ್ತಡೇ ಆಚರಿಸಿದ್ದಾರೆ. ಬರ್ತಡೆ ಗಿಫ್ಟ್ ಆಗಿ ಮಾಲೀಕ ನಾಯಿಗೆ 50 ಗ್ರಾಂ ಚಿನ್ನದ ಸರ ಹಾಕಿದ್ದಾರೆ. ನಾಯಿಗೆ ಆರತಿ ಬೆಳಗಿ, ಐದು ಕೇಜಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 500 ಜನರಿಗೆ ಭೋಜನ ವ್ಯವಸ್ಥೆ ಮಾಡಿದ್ದರು. ಪಾಯಸ, ಪೂರಿ, ಬಾಜಿ, ರೈಸ್, ಪಾಪಡ್ ಸೇರಿದಂತೆ ವಿವಿಧ ಖ್ಯಾದ್ಯಗಳಿದ್ದ ಭಾರಿ ಭೋಜನ ಸವಿದು ಜನ ಶ್ವಾನಕ್ಕೆ ಆಶೀರ್ವದಿಸಿದರು. ಅಲ್ಲದೆ ಕಾರ್ಯಕ್ರಮದಲ್ಲಿ ಪಟಾಕಿ‌ ಸಿಡಿಸಿ ಯುವಕರು ಸಂಭ್ರಮಿಸಿದರು.

Related Posts :

Category:

error: Content is protected !!

This website uses cookies to ensure you get the best experience on our website. Learn more