ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಲ್ಲಿಂದು ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು: ನಗರದಲ್ಲಿಂದು ಬಿಸಿಯೂಟ ಕಾರ್ಯಕರ್ತೆಯರಿಂದ ಧರಣಿ ನಡೆಯಲಿದೆ. ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಮತ್ತು ಸಿಐಟಿಯುಸಿ ಸಂಘಟನೆಯಿಂದ 2 ದಿನಗಳ ಕಾಲ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಕನಿಷ್ಠ ವೇತನ ಜಾರಿ ಮಾಡಬೇಕು, ಕೆಲಸದ ಭದ್ರತೆ ನೀಡಬೇಕು. ಬಿಸಿಯೂಟ ಪೂರೈಕೆ ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ತಮ್ಮನ್ನು ಕಾರ್ಮಿಕ ಕಾಯ್ದೆಯಡಿ ಸೇರಿಸಲು ಆಗ್ರಹಿಸಿ ಧರಣಿ ನಡೆಸಲು ಮುಂದಾಗಿದ್ದಾರೆ.

ಇಗಾಗಲೇ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಕಾರ್ಯಕರ್ತೆಯರು ವಿವಿಧ ಜಿಲ್ಲೆಗಳಿಂದ ಬಂದು ಸೇರುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‌ವರೆಗೆ ಱಲಿ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಲಿದ್ದಾರೆ. ಹೀಗಾಗಿ ಫ್ರೀಡಂಪಾರ್ಕ್‌ನಲ್ಲಿ ಇಂದು ಮತ್ತು ನಾಳೆ 2 ದಿನಗಳ ಕಾಲ ಧರಣಿ ನಡೆಯಲಿದ್ದು, ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಇಂದು, ನಾಳೆ‌ ಶಾಲಾ ಮಕ್ಕಳಿಗೆ ಬಿಸಿ ಊಟ ಸಿಗುವುದಿಲ್ಲ.

ಬಿಸಿಯೂಟ ಕಾರ್ಯಕರ್ತೆಯರ ಮುಖ್ಯ ಬೇಡಿಕೆಗಳು:
-ಕನಿಷ್ಠ ವೇತನ ಜಾರಿಯಾಗ ಬೇಕು
-ಬಿಸಿಯೂಟ ಪೂರೈಕೆ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ಕೈ ಬಿಡಬೇಕು
-ಕೆಲಸದ ಭದ್ರತೆ ಕೊಡಬೇಕು
-ಪ್ರತಿ ತಿಂಗಳು ಐದನೇ ತಾರೀಖು ಸಂಬಳ ಕೊಡಬೇಕು
-ನಮ್ಮನ್ನು ಕಾರ್ಮಿಕರು ಅಂತ ಪರಿಗಣಿಸಿ ಕಾರ್ಮಿಕ ಕಾಯ್ದೆ ಅಡಿಯಲ್ಲಿ ತರಬೇಕು ಈ ರೀತಿ ವಿವಿಧ ಬೇಡಿಕೆಗಳನ್ನು ಮುಂದೆ ಇಟ್ಟು ಇಂದು ಧರಣಿ ನಡೆಸಲಿದ್ದಾರೆ. ಅಲ್ಲದೆ ಕಳೆದ ಹದಿನೇಳು ವರ್ಷಗಳಿಂದ ಬಿಸಿ ಊಟ ತಯಾರು ಮಾಡುತ್ತಿದ್ದರು ಮುಖ್ಯ ಅಡಿಗೆಯವರಿಗೆ 2700 ರೂಪಾಯಿ ಹಾಗೂ ಸಹಾಯಕ ಅಡುಗೆ ಮಾಡುವವರಿಗೆ 2600 ನೀಡಲಾಗ್ತಿದೆ. ರಾಜ್ಯ ಸರ್ಕಾರ 75% ರಷ್ಟು ಕೇಂದ್ರ ‌ಸರ್ಕಾರ 25 ರಷ್ಟು ಹಣ ಪಾವತಿ ಮಾಡ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಿಸಿ ಊಟ ತಯಾರು ಮಾಡ್ತಾರೆ. ಶಾಲೆಗಳಲ್ಲಿ ಹೆಚ್ಚುವರಿ ಮೆನು ಜಾರಿಗೆ ತಂದಿದ್ದಾರೆ ಇದರಿಂದ‌ ಕೆಲಸ ಮಾಡಲು ಆಗುತ್ತಿಲ್ಲ ಎಂಬ ಅಳಲು ಕಾರ್ಯಕರ್ತೆಯರದ್ದಾಗಿದೆ. ರಾಜ್ಯದಲ್ಲಿ ಒಟ್ಟು 1 ಲಕ್ಷದ 18 ಸಾವಿರ ಮಹಿಳೆಯರು ಕೆಲಸ ಮಾಡ್ತಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more