ಕೊರೊನಾ ಕಾಲದಲ್ಲಿ BJP ಸುಳ್ಳಿನ ಖಾದ್ಯ ತಯಾರಿ ಮಾಡಿತ್ತು: ರಾಹುಲ್ ಟ್ವೀಟ್

ದೆಹಲಿ: ಮಹಾಮಾರಿ ಕೊರೊನಾದಿಂದ ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಿತ್ತು. ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಈ ನಡುವೆ ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಂಡಿತ್ತು. ಇದನ್ನು ಸುಧಾರಿಸುವ ಪ್ರಯತ್ನವನ್ನು ಮಾಡಿತ್ತು. ಈ ಬಗ್ಗೆ ಟೀಕೆ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೊನಾ ಕಾಲದಲ್ಲಿ ಬಿಜೆಪಿ ಸುಳ್ಳಿನ ಖಾದ್ಯ ತಯಾರಿ ಮಾಡಿತ್ತು ಎಂದು ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.

ಕೊರೊನಾ ಕಾಲದಲ್ಲಿ ಬಿಜೆಪಿ ಸುಳ್ಳಿನ ಖಾದ್ಯ ತಯಾರಿ ಮಾಡಿತ್ತು. 21 ದಿನದಲ್ಲಿ ಕೊರೊನಾವನ್ನು ಓಡಿಸಲಾಗುವುದು. ಆರೋಗ್ಯ ಸೇತು ಆ್ಯಪ್ ಮೂಲಕ ನಿಮ್ಮ ರಕ್ಷಣೆ. 20 ಲಕ್ಷ ಕೋಟಿ ಪ್ಯಾಕೇಜ್. ಭಾರತ ಗಡಿಯ ಒಳಗೆ ಯಾರೂ ಪ್ರವೇಶ ಮಾಡಿಲ್ಲ. ಪರಿಸ್ಥಿತಿ ನಮ್ಮ ಕೈಯಲ್ಲಿದೆ ಎಂದು ಭರವಸೆ ನೀಡಿದ್ದರು. ಈ ರೀತಿ ಬಿಜೆಪಿ ಸುಳ್ಳಿನ ಖಾದ್ಯ ತಯಾರಿ ಮಾಡಿತ್ತು ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಪ್ರಹಾರ ಬೀಸಿದ್ದಾರೆ.

Related Tags:

Related Posts :

Category: