ಆ ಅಧಿಕಾರಿ ನನಗೇ 1 ಕೋಟಿ ರೂ. ಲಂಚದ ಆಮಿಷ ನೀಡಿದ್ದರು: HD ಕುಮಾರಸ್ವಾಮಿ

ತುಮಕೂರು: ತಹಶೀಲ್ದಾರ್​ ರಘುಮೂರ್ತಿ ಅಮಾನತಿಗೆ ಶಿಫಾರಸು ವಿಚಾರ ಸಂಬಂಧಿಸಿ ತಹಶೀಲ್ದಾರ್ ಪೋಸ್ಟಿಂಗ್​ಗಾಗಿ ಬಿಜೆಪಿಗೆ 1.5 ಕೋಟಿ ಪೇಮೆಂಟ್​ ಆಗಿದೆ ಎಂದು ಶಿರಾದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತಹಶೀಲ್ದಾರ್ ಪೋಸ್ಟಿಂಗ್​ಗಾಗಿ BJPಗೆ 1.5 ಕೋಟಿ ಪೇಮೆಂಟ್​ ಆಗಿದೆ:
ನಾನು ಸಿಎಂ ಆಗಿದ್ದಾಗ ರಘುಮೂರ್ತಿಗೆ ಯಲಹಂಕದಲ್ಲಿ ಪೋಸ್ಟಿಂಗ್​ ಮಾಡಲು ನನ್ನನ್ನು ಭೇಟಿಯಾಗಿ ಮನವಿ ಮಾಡಿದ್ದರು. ಒಂದು ಕೋಟಿ ರೂ. ಲಂಚ ನೀಡುವುದಾಗಿ ಆಮಿಷವೊಡ್ಡಿದ್ದರು. ರಘುಮೂರ್ತಿ ಕಡೆಯವರ ಆಮಿಷವನ್ನು ನಾನು ತಿರಸ್ಕರಿಸಿದ್ದೆ. ಸಮ್ಮಿಶ್ರ ಸರ್ಕಾರ ಪತನ ನಂತರ ಬಿಜೆಪಿ ಅಧಿಕಾರಕ್ಕೆ ಬಂತು. ಬಿಜೆಪಿ ಸರ್ಕಾರ ರಘುಮೂರ್ತಿಗೆ ಬೆಂಗಳೂರಿನ ಯಲಹಂಕ ತಹಶೀಲ್ದಾರ್ ಆಗಿ​ ಪೋಸ್ಟಿಂಗ್ ನೀಡಿತ್ತು.

ಯಲಹಂಕ ಶಾಸಕರಿಗೂ 50 ಲಕ್ಷ ಹಣ ಹೋಗಿದೆ
ಪೋಸ್ಟಿಂಗ್​ಗಾಗಿ ಬಿಜೆಪಿಗೆ 1.5 ಕೋಟಿ ಪೇಮೆಂಟ್​ ಆಗಿದೆ. ಯಲಹಂಕ ಕ್ಷೇತ್ರದ ಶಾಸಕರಿಗೂ 50 ಲಕ್ಷ ಹಣ ಹೋಗಿದೆ. ಇಂಥ ತಹಶೀಲ್ದಾರ್​ ಸಸ್ಪೆಂಡ್​ಗೆ ಈಗ ಶಿಫಾರಸು ಮಾಡಿದ್ದಾರೆ ಎಂದು ತುಮಕೂರು ಜಿಲ್ಲೆ ಶಿರಾದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Related Tags:

Related Posts :

Category:

error: Content is protected !!