ಶಾಸಕ ಜಮೀರ್ ಚಿಲ್ರೆ ಗಿರಾಕಿ, ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿ ಜೋಕರ್ ಅಂತೆ!

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಒಬ್ಬ ಚಿಲ್ಲರೆ ಗಿರಾಕಿ, ಫುಟ್‌ಪಾತ್‌ನಲ್ಲಿದ್ದವನು. ಚಾಮರಾಜಪೇಟೆಯಲ್ಲಿ ದಂಧೆ ಮಾಡಿಕೊಂಡಿದ್ದವನನ್ನು ಕರೆತಂದು ದೇವೇಗೌಡರು ಮಂತ್ರಿ ಮಾಡಿದ್ರು. ಆದ್ರೆ ದೇವೇಗೌಡರಿಗೆ ಜಮೀರ್ ಏನು ಮಾಡಿದ ಅಂತಾ ಗೊತ್ತಿದೆ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಈ ಹಿಂದೆ ಅಣ್ಣ ಕುಮಾರಣ್ಣ ಅಂತಾ ಹೇಳಿಕೊಂಡು ಜಮೀರ್ ತಿರುಗುತ್ತಿದ್ದ. ಈಗ ಹೆಚ್​.ಡಿ.ಕುಮಾರಸ್ವಾಮಿಗೆ ಏನು ಮಾಡಿದ್ರು ಎಂದು ಎಲ್ಲವೂ ಗೊತ್ತಿದೆ. ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಜಮೀರ್ ಮಾತನಾಡಿದ್ರೆ ನನಗೂ ಅದೇ ಭಾಷೆಯಲ್ಲಿ ಮಾತನಾಡುವುದು ಗೊತ್ತಿದೆ ಎಂದು ಜಮೀರ್​ಗೆ, ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿ ಜೋಕರ್ ಇದ್ದಂತೆ:
ಇತ್ತ ಬಿಜೆಪಿ ಶಾಸಕ ಎಂ.ಟಿ.ರೇಣುಕಾಚಾರ್ಯ ವಾಗ್ದಾಳಿ ನಡೆಸುತ್ತಿದ್ದಂತೆ ಅತ್ತ ಮಾಜಿ ಸಚಿವ ಜಮೀರ್ ಅಹ್ಮದ್ ಸಹ ಟಾಂಗ್ ನೀಡಿದ್ದಾರೆ. ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿ ಜೋಕರ್ ಇದ್ದಂತೆ. ಜೋಕರ್​ ಅನ್ನು ಯಾರಾದ್ರೂ ಮಂತ್ರಿ ಮಾಡುತ್ತಾರಾ? ಎಂದು ವ್ಯಂಗ್ಯವಾಡಿದ್ದಾರೆ.

ಖೋಟಾ ನೋಟು ಪ್ರಿಂಟ್ ಮಾಡಿದ್ರಾ?:
ಸೋಮಶೇಖರ್, ಅನಂತ್ ಕುಮಾರ್ ಹೆಗಡೆ ನಡುವೆ ಇರುವ ಜೋಕರ್ ತರಹ ರೇಣುಕಾಚಾರ್ಯ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗೋವಾದಲ್ಲಿ ಹೋಗಿ ಕುಳಿತುಕೊಂಡಿದ್ದು ಯಾರು? ನಾನು ಖೋಟಾ ನೋಟು ಪ್ರಿಂಟ್ ಮಾಡ್ತಿದೀನಿ ಅಂತಾರೆ. ಗೋವಾದಲ್ಲಿ ಇದ್ದಾಗ ಅದೇ ಖೋಟಾ ನೋಟು ನಿಮಗೆ ನಾನು ಕೊಟ್ಟಿರಬಹುದು ಅಲ್ವಾ? ಈಗ ಯಡಿಯೂರಪ್ಪ ಚುನಾವಣೆ ಮಾಡಿದ್ರಲ್ಲ, ನಿಮಗೆ 30-40 ಕೋಟಿ ದುಡ್ಡು ಎಲ್ಲಿಂದ ಬಂತು? ನೀವು ಖೋಟಾ ನೋಟು ಪ್ರಿಂಟ್ ಮಾಡಿದ್ರಾ? ಎಂದು ಜಮೀರ್ ಅಹಮದ್ ವಾಗ್ದಾಳಿ ನಡೆಸಿದ್ದಾರೆ.

ನಾವು ಅಣ್ಣ ತಮ್ಮಂದಿರ ರೀತಿ ಬದುಕ್ತಾ ಇದ್ದೀವಿ. ಆದ್ರೆ ರೇಣುಕಾಚಾರ್ಯ ಅದಕ್ಕೆಲ್ಲ ವಿಷ ಬಿತ್ತಬಾರದು. ರೇಣುಕಾಚಾರ್ಯ ಎಂಥವನು ಅಂತ ನರ್ಸ್ ಜಯಲಕ್ಷ್ಮೀಗೆ ಬಹಳ ಚೆನ್ನಾಗಿ ಗೊತ್ತಿದೆ. ಯಾಕೆಂದರೆ ಚುಮ್ಮಾ ಚುಮ್ಮಾ ಅಂತ ಬಹಳ ಹತ್ತಿರದಿಂದ ನೋಡಿದ್ದಾರೆ. ಇದನ್ನೆಲ್ಲ ಇಲ್ಲಿಗೇ ಬಿಟ್ಟು ಬಿಡಬೇಕು ಎಂದು ಹರಿಹಾಯ್ದರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!