ದೇವಿ ಸನ್ನಿಧಿಯಲ್ಲಿ ವಾಮಾಚಾರ, ನವರಾತ್ರಿ ಪೂಜೆ ಮಾಡದಿರಲು ಗ್ರಾಮಸ್ಥರ ನಿರ್ಧಾರ

ಬೆಳಗಾವಿ: ನಿನ್ನೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂದೆ ಕೋಳಿ ಬಲಿ ಕೊಟ್ಟು ಪೂಜೆ ಮಾಡಿರುವ ಘಟನೆ ಖಾನಾಪುರ ತಾಲೂಕಿನ ಕಾಮಸಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗಿರಿಜಾದೇವಿ ದೇವರಿಗೆ ಕಿರಾತಕರು ವಾಮಾಚಾರ ಮಾಡಿದ್ದಾರೆ. ಹೀಗಾಗಿ ನವರಾತ್ರಿ ಪೂಜೆ ಮಾಡಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನಿನ್ನೆ ಅಮಾವಾಸ್ಯೆ ಇದ್ದರಿಂದ ಕೆಲ ಕಿರಾತಕರು ಕೋಳಿ ಬಲಿ ಕೊಟ್ಟು ಗಿರಿಜಾದೇವಿ ದೇವಸ್ಥಾನದ ಮುಂದೆ ಪೂಜೆ ಮಾಡಿದ್ದಾರೆ. ಮಧ್ಯರಾತ್ರಿ ದೇವಸ್ಥಾನದ ಮುಂಭಾಗದಲ್ಲಿ ಮಾಟ ಮಂತ್ರ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಹುಂಜ ಕೊಯ್ದು ದೇವಸ್ಥಾನದ ಬಾಗಿಲಿಗೆ ರಕ್ತ ಸಿಂಪಡಣೆ ಮಾಡಲಾಗಿದೆ.

ನಿಂಬೆಹಣ್ಣು ಸೇರಿದಂತೆ ವಿವಿಧ ಪದಾರ್ಥಗಳನ್ನ ಇಟ್ಟು ದೇವಸ್ಥಾನ ಸುತ್ತಲು ನಿಂಬೆಹಣ್ಣು ಹಾಕಿ ಮಾಟ ಮಂತ್ರ ಮಾಡಲಾಗಿದೆ. ಬೆಳಗ್ಗೆ ದೇವರ ದರ್ಶನಕ್ಕೆ ಬಂದಾಗ ಈ ದೃಶ್ಯಗಳನ್ನು ಕಂಡ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಮನಸಲ್ಲಿ ಆತಂಕ ಮೂಡಿದೆ. ದೇವಿಗೆ ವಾಮಾಚಾರವಾಗಿದೆ ಈ ಹಿನ್ನೆಲೆಯಲ್ಲಿ ನವರಾತ್ರಿ ಪೂಜೆ ಮಾಡದಿರಲು ಗ್ರಾಮಸ್ಥರ ನಿರ್ಧರಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Tags:

Related Posts :

Category:

error: Content is protected !!