ಸಾವಿರಾರು ಕಾರ್ಮಿಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬಿಎಂಟಿಸಿ ಸಂಸ್ಥೆ..?

ಬೆಂಗಳೂರು: ತನ್ನ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಹಾಗೂ ವಿಮೆ ಹಣಕ್ಕೆ ಬಿಎಂಟಿಸಿ ಕನ್ನ ಹಾಕಿದೆಯಾ..? ಚಾಲಕ, ನಿರ್ವಾಹಕ ಸೇರಿ ಸಿಬ್ಬಂದಿ ಕಷ್ಟಪಟ್ಟಿದ್ದ ಹಣ ಖೋತಾ ಆಗಿದೆಯಾ..? ಎಂಬ ಅನುಮಾನಗಳು ಸಿಬ್ಬಂದಿಗೆ ಕಾಡತೊಡಗಿವೆ.

ಏಕೆಂದ್ರೆ ಪಿಎಫ್ ಬಾಬತ್ತಿಗೆಂದು ಸಂಬಳದಲ್ಲಿ ಕಟ್​ ಮಾಡಿದ ಹಣವನ್ನು ಬಿಎಂಟಿಸಿ ಪಿಎಫ್​​ ಸಂಸ್ಥೆಗೆ ಕಟ್ಟಿಲ್ಲ ಎನ್ನಲಾಗಿದೆ. ಮಾಹಿತಿ ಹಕ್ಕು ಮೂಲಕ ಬಿಎಂಟಿಸಿ ಸಂಸ್ಥೆಯ ಈ ವಂಚನೆ ಬಯಲಿಗೆ ಬಂದಿದೆ.

ಸುಮಾರು 200 ಕೋಟಿ ರೂಪಾಯಿ ಹಣ ಪಾವತಿಸದೆ, ಬಿಎಂಟಿಸಿ ಸಂಸ್ಥೆ ಸಿಬ್ಬಂದಿಯ ಪಿಎಫ್​, ವಿಮೆ ಹಣ ಬಳಸಿಕೊಂಡಿದೆ. ಕಳೆದ ಫೆಬ್ರವರಿ ತಿಂಗಳಿನಿಂದ ಕಾರ್ಮಿಕರ ಎಲ್​ಐಸಿ ಹಣ ಪಾವತಿಸಿಲ್ಲ. ಎಲ್ಐಸಿಯಿಂದ 35 ಸಾವಿರ ಕಾರ್ಮಿಕರಿಗೆ ಮೊಬೈಲ್ ಸಂದೇಶ ರವಾನೆಯಾಗಿದ್ದು, ಎಲ್ಐಸಿ ಪ್ರೀಮಿಯಂ ಲ್ಯಾಪ್ಸ್ ಆಗಿದೆ ಎಂದು ಕಾರ್ಮಿಕರಿಗೆ ತಿಳಿಸಿದೆ. ನಿಮ್ಮ ಸಂಸ್ಥೆಗೆ ಹಣ ಪಾವತಿಸಲು ಸೂಚಿಸಿ ಎಂದು ಎಲ್​​ಐಸಿ ಮಾಹಿತಿ ನೀಡಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more