ನಾಳೆಯಿಂದ ರಸ್ತೆಗಿಳಿಯಲಿವೆ BMTC ಎಸಿ ಬಸ್‌ಗಳು..

ಬೆಂಗಳೂರು: ನಾಳೆಯಿಂದ BMTC ಎಸಿ ವೋಲ್ವೋ ಬಸ್‌ಗಳು ರಸ್ತೆಗಿಳಿಯಲಿವೆ. ಈಗಾಗಲೆ ಎಸಿ ರಹಿತ BMTC ಬಸ್​ಗಳು KSRTC ಬಸ್​ಗಳು ಸಂಚಾರ ಆರಂಭಿಸಿವೆ. ಈಗ ಕೊರೊನಾ ಲಾಕ್​ಡೌನ್ ಸಡಿಲಿಕೆಯ ನಂತರ ಎಸಿ ಬಸ್​ಗಳು ಸಂಚಾರ ಶುರು ಮಾಡಲಿವೆ.

ವಿಮಾನ ಸಂಚಾರ ಶುರುವಾಗಿರುವ ಹಿನ್ನೆಲೆಯಲ್ಲಿ ಏರ್‌ಪೋರ್ಟ್‌ ಪ್ರಯಾಣಿಕರಿಗಾಗಿ ಎಸಿ ಬಸ್ ಸಂಚಾರ ಆರಂಭವಾಗಲಿದೆ. ಬಿಎಂಟಿಸಿಯ ವೋಲ್ವೋ ಬಸ್‌ಗಳಿಗೆ ಸರ್ಕಾರ ಅನುಮತಿ ನೀಡಿದ್ದು, ಹಂತಹಂತವಾಗಿ ಬಸ್​ಗಳು ರಸ್ತೆಗಿಳಿಯಲಿವೆ. ನಾಳೆಯಿಂದ 8 ಮಾರ್ಗಗಳಲ್ಲಿ 75 ಬಸ್‌ಗಳನ್ನು ಬಿಡಲಾಗುತ್ತಿದೆ.

ನಾಳೆಯಿಂದ 8 ಮಾರ್ಗಗಳಲ್ಲಿ ಎಸಿ ಬಸ್ ಆರಂಭ:
1.ಕೆಂಪೇಗೌಡ ಬಸ್ಸ್ ನಿಲ್ದಾಣ ದಿಂದ ಹೊಸಕೋಟೆ
2.ಕೆಂಪೇಗೌಡ ಬಸ್ಸ್ ನಿಲ್ದಾಣ ದಿಂದ ಕಾಡುಗೋಡಿ
3.ಕೆಂಪೇಗೌಡ ಬಸ್ಸ್ ನಿಲ್ದಾಣ ದಿಂದ ಸರ್ಜಾಪುರ
4.ಕೆಂಪೇಗೌಡ ಬಸ್ಸ್ ನಿಲ್ದಾಣ ದಿಂದ ಅತ್ತಿಬೆಲೆ
5.ಹೆಬ್ಬಾಳ ದಿಂದ ಬನಶಂಕರಿ
6.ಹೆಬ್ಬಾಳ ದಿಂದ ಸಿಲ್ಕ್ ಬೋರ್ಡ್
7.ಬನಶಂಕರಿ ಯಿಂದ ITPL
8.ಎಲೆಕ್ಟ್ರಾನಿಕ್ ಸಿಟಿ ಯಿಂದ ITPL

Related Tags:

Related Posts :

Category: