ಐಶ್ವರ್ಯ ರೈ ಬಚ್ಚನ್‌ಗೂ ಕೊರೊನಾ ಸೋಂಕು, ಆತಂಕದಲ್ಲಿ ಬಿಗ್‌ ಬಿ ಫ್ಯಾಮಿಲಿ

ಮುಂಬಯಿ: ಬಾಲಿವುಡ್‌ನ ಶೆಹನ್‌ಶಾ ಅಮಿತಾಭ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್‌ ಕೊರೊನಾದಿಂದಾಗಿ ಆಸ್ಪತ್ರೆ ಸೇರಿದ ಬೆನ್ನಲ್ಲೇ, ಅಭಿಷೇಕ್ ಪತ್ನಿ ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್‌ರಿಗೆ ಕೂಡಾ ಕೊರೊನಾ ಸೋಂಕು ತಗುಲಿದೆ.

ಈ ಸಂಬಂಧ ನಿನ್ನೆ ನಡೆಸಿದ್ದ ಕೊರೊನಾ ಟೆಸ್ಟ್‌ನಲ್ಲಿ ಐಶ್ವರ್ಯ ಮತ್ತು ಆರಾಧ್ಯ ಬಚ್ಚನ್ ಅವರಿಗೆ ಪಾಸಿಟಿವ್ ಇರೋದು ಪಕ್ಕಾ ಆಗಿದೆ. ಅಮಿತಾಭ್ ಮತ್ತು ಅಭಿಷೇಕ್ ಬಚ್ಚನ್‌ಗೆ ಕೊರೊನಾ ಕನ್ಫರ್ಮ್ ಆದ ನಂತರ ಐಶ್ವರ್ಯ, ಪುತ್ರಿ ಆರಾಧ್ಯ, ಜಯಾ ಬಚ್ಚನ್, ಬಿಗ್ ಪುತ್ರಿ ಶ್ವೇತಾ ಬಚ್ಚನ್, ಮೊಮ್ಮಗಳು ನವ್ಯಾ ಹಾಗೂ ಮೊಮ್ಮಗ ಅಗಸ್ತ್ಯ ಅವರಿಗೂ ಕೊರೊನಾ ಟೆಸ್ಟ್ ಮಾಡಲಾಗಿತ್ತು.

ಆದ್ರೆ ಕೇವಲ ಐಶ್ವರ್ಯ ಮತ್ತು ಆರಾಧ್ಯಗೆ ಸೋಂಕು ತಗುಲಿದೆ. ಇನ್ನುಳಿದಂತೆ ಇತರರ ವರದಿ ನೆಗಟಿವ್ ಬಂದಿದೆ. ಹೀಗಾಗಿ ಈಗ ಬಿಗ್ ಬಿ ಕುಟುಂಬ ವಾಸವಿದ್ದ ಜಲ್ಸಾ ಮತ್ತು ಜನಕ್ ಬಂಗಲೆಗಳನ್ನ ಮುಂಬೈ ಕಾರ್ಪೋರೇಶನ್ ಸಾನಿಟೈಸ್ ಮಾಡಿ ಸೀಲ್ ಡೌನ್ ಮಾಡಿದೆ.

Related Tags:

Related Posts :

Category:

error: Content is protected !!