ಬೆಳ್ಳಂದೂರು ಕೆರೆ ಆಯ್ತು, ಈಗ ಬೊಮ್ಮಸಂದ್ರ ಕೆರೆಯಲ್ಲಿ ಬೆಂಕಿಯ ರುದ್ರ ನರ್ತನ

ಆನೇಕಲ್: ನರ್ತನ ರುದ್ರ ನರ್ತನ.. ಬೆಂಕಿಯ ರುದ್ರ ನರ್ತನ.. ಧಗಧಗಿಸಿ ಬೆಂಕಿ ಹೊತ್ತಿ ಉರಿಯುತ್ತಿದ್ರೆ, ದಟ್ಟ ಹೊಗೆ ಮುಗಿಲೆತ್ತರಕ್ಕೆ ಹಬ್ಬಿದೆ. ಬೆಂಕಿಯ ಅಟ್ಟಹಾಸವನ್ನ ನೋಡ್ತಾ ಇದ್ರೆ ಎದೆ ಝುಲ್ ಎನ್ನುತ್ತೆ.

ಸಿಲಿಕಾನ್ ಸಿಟಿಯ ಕೆರೆಯೊಂದರಲ್ಲಿ ಅಗ್ನಿ ದೇವ ರುದ್ರ ನರ್ತನವನ್ನ ತೋರಿದ್ದಾನೆ, ಬೆಂಕಿ ಧಗಧಗಿಸಿ ಉರಿದಿದೆ. ಈ ಹಿಂದೆ ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದಂತೆಯೇ ನಿನ್ನೆ ಸಂಜೆ ಬೆಂಗಳೂರು ಹೊರವಲಯದ ಆನೇಕಲ್‌ನ ಬೊಮ್ಮಸಂದ್ರ ಕೆರೆಯಲ್ಲಿ ಬೆಂಕಿ ನರ್ತಿಸಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಕೆರೆಯಲ್ಲಿ ದೊಟ್ಟ ಹೊಗೆ ಜೊತೆ ಬೆಂಕಿ ಧಗಧಗಿಸಿದೆ.

ಈ ಬೊಮ್ಮಸಂದ್ರ ಸುತ್ತಮುತ್ತ ನೂರಾರು ಕೆಮಿಕಲ್ ಕಾರ್ಖಾನೆಗಳಿದ್ದು, ಈ ಕೆಮಿಕಲ್ ಕಾರ್ಖಾನೆಗಳು ಬಿಡುವ ಕೆಮಿಕಲ್‌ನಿಂದ ಕೆರೆ ಸಂಪೂರ್ಣ ಕಲುಷಿತ ಗೊಂಡಿದೆ. ನಿನ್ನೆ ಸಹ ಕೆಲವು ಕಾರ್ಖಾನೆಗಳು ಕೆಮಿಕಲ್ ನೀರನ್ನು ಕಾಲುವೆಯಲ್ಲಿ ಬಿಟ್ಟಿದೆ. ಇದರ ಪರಿಣಾಮ ಇದ್ದಕ್ಕಿದ್ದಂತೆ ಕೆರೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಆಕಾಶದೆತ್ತರಕ್ಕೆ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಆಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ನಂದಿಸಿದ್ದಾರೆ.

ಇನ್ನು ಹೊತ್ತಿ ಉರಿಯುತ್ತಿದ್ದ ಬೆಂಕಿಗೆ ಆಗ್ನಿಶಾಮಕ ದಳದ ಸಿಬ್ಬಂದಿ ನೀರನ್ನು ಬಿಟ್ರೂ, ಅದು ಮತ್ತಷ್ಟು ಹೆಚ್ಚಾಗುತ್ತಿತ್ತು. ನಂತ್ರ ಕಷ್ಟಪಟ್ಟು ಬೆಂಕಿ ನಂದಿಸಿದ್ರು. ಇನ್ನು ಕೆಮಿಕಲ್ ನೀರಿನಿಂದ ಕೆರೆ ಕಲುಷಿತಗೊಂಡು ಪ್ರತಿವರ್ಷ ಸಾವಿರಾರು ಮೀನುಗಳು ಸಾಯುತ್ತಿವೆ. ಈ ಬಗ್ಗೆ ಮಾಲಿನ್ಯ ನಿಂತ್ರಣ ಮಂಡಳಿ, ಕೆರೆ ಅಭಿವೃಧ್ಧಿ ಪ್ರಾಧಿಕಾರ, ಬೊಮ್ಮಸಂದ್ರ ಪುರಸಭೆಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳು ಬೊಮ್ಮಸಂದ್ರ ಕೆಮಿಕಲ್ ಕಾರ್ಖಾನೆಗಳ ಜೊತೆ ಶಾಮಿಲಾಗಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತ ಪಡಿಸಿದ್ದಾರೆ.

ಒಟ್ನಲ್ಲಿ ಕೆರೆಗೆ ಬೆಂಕಿ ಬಿದ್ದ ತಕ್ಷಣ ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಒಂದು ವೇಳೆ ಅಗ್ನಿಶಾಮಕ ಸಿಬ್ಬಂದಿ ಸರಿಯಾದ ಸಮಯಕ್ಕೆ ಬಂದಿಲ್ಲ ಅಂದ್ರೆ ಕೆರೆಯ ಅಕ್ಕ ಪಕ್ಕದ ಮನೆಗಳು, ಜಮೀನು ಸಂಪೂರ್ಣವಾಗಿ ಸುಟ್ಟು ಹೋಗುತ್ತಿತ್ತು.

Related Tags:

Related Posts :

Category:

error: Content is protected !!