ಮನೆಗೆಲಸದವನಿಂದಾಗಿ ಇವರ ಮನೆಯೂ ಕ್ವಾರಂಟೈನ್ ಆಯ್ತು!

ದೆಹಲಿ: ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬೋನಿ ಕಪೂರ್ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿರೋದು ನಿಜ. ಆತನಿಗೆ ಚಿಕಿತ್ಸೆ ನೀಡಲಾಗ್ತಿದೆ.

ಆದ್ರೆ ನಾನು ಮತ್ತು ನನ್ನ ಮಕ್ಕಳು ಆರೋಗ್ಯವಾಗಿದ್ದೇವೆ. ನಮ್ಮಲ್ಲಿ ಯಾರಿಗೂ ಕೊರೊನಾ‌ ಲಕ್ಷಣಗಳು ಕಂಡು ಬಂದಿಲ್ಲ. ನಾವು 14 ದಿನಗಳ ಕಾಲ ಹೌಸ್ ಕ್ವಾರಂಟೈನ್​ನಲ್ಲಿ ಇರುತ್ತೇವೆ. ಯಾರೂ ಗಾಳಿಸುದ್ದಿಗಳನ್ನು ಹಬ್ಬಿಸಬಾರದು ಅಂತ ದಿವಂಗತ ನಟಿ ಶ್ರೀದೇವಿ ಪತಿ ಬೋನಿ ಕಪೂರ್ ಹೇಳಿದ್ದಾರೆ.

Related Posts :

Category:

error: Content is protected !!