ಬಾಷ್ ಕಂಪನಿಗೂ ಕೊರೊನಾ ಕಂಟಕ, 100ಕ್ಕೂ ಹೆಚ್ಚು ಮಂದಿಗೆ ಆತಂಕ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಯಾರನ್ನು ಬಿಡದೆ ಹುಡುಕಿ ಹುಡುಕಿ ಜನರ ಬೆನ್ನು ಬೀಳುತ್ತಿದೆ. ಕೊರೊನಾದ ಕರಾಳತೆ ಮಿತಿ ಮಿರುತ್ತಿದೆ. ಈಗ ಬಿಡದಿ ಬಳಿ ಇರುವ ಬಾಷ್ ಕಂಪನಿಗೂ ಕೋವಿಡ್ ಕಂಟಕ ಶುರುವಾಗಿದೆ.

ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 15 ಮಂದಿ ನೌಕರರಿಗೆ ಕೊರೊನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ಬಿಟಿಎಂ ಲೇಔಟ್ ನಿಂದ ಬಾಷ್ ಕಂಪನಿಗೆ ಹೋಗ್ತಿದ್ದವನಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ಸೋಂಕಿತನ ಸಂಪರ್ಕದಲ್ಲಿದ್ದ ಕಂಪನಿಯ 15 ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್ ಬರುವ ಸಾಧ್ಯತೆ ಇದೆ. ಜೊತೆಗೆ ಅವರ ಸಂಪರ್ಕದಲ್ಲಿದ್ದ 100ಕ್ಕೂ ಹೆಚ್ಚು ಮಂದಿಗೆ ಈಗ ಆತಂಕ ಶುರುವಾಗಿದೆ.

Related Tags:

Related Posts :

Category:

error: Content is protected !!