ಉದ್ದೀಪನ ದ್ರವ್ಯ ಸೇವನೆ: ಬಾಕ್ಸರ್ ಸುಮಿತ್​ಗೆ 1 ವರ್ಷ ನಿಷೇಧದ ಪಂಚ್

, ಉದ್ದೀಪನ ದ್ರವ್ಯ ಸೇವನೆ: ಬಾಕ್ಸರ್ ಸುಮಿತ್​ಗೆ 1 ವರ್ಷ ನಿಷೇಧದ ಪಂಚ್

ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಬಾಕ್ಸರ್ ಸುಮಿತ್ ಸಂಗ್ವಾನ್​ಗೆ ನಾಡಾ ಒಂದು ವರ್ಷ ನಿಷೇಧ ಹೇರಿದೆ. ಸುಮಿತ್ ಉದ್ದೀಪನ ದ್ರವ್ಯ ಸೇವನೆ ಮಾಡಿರೋದು ಸಾಬೀತಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಂಗ್ವಾನ್​ಗೆ ನಿಷೇಧ ಹೇರಲಾಗಿದೆ.

ಗಂಗೂಲಿ ಚಿಂತನೆಗೆ ಆಸಿಸ್ ಮೆಚ್ಚುಗೆ:
ಸೌರವ್ ಗಂಗೂಲಿ ಅಧ್ಯಕ್ಷರಾಗ ಬಳಿಕ ಬದಲಾವಣಿಗೆ ಗಾಳಿ ಬೀಸುತ್ತಿದ್ದು, ಸೂಪರ್ ಸರಣಿ ಚಿಂತನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಮೆಚ್ಚುಗೆ ವ್ಯಕ್ತಪಡಿಸಿದೆ. ಸರಣಿ ಆಯೋಜನೆ ಕುರಿತು ಇಂಗ್ಲೆಂಡ್ ಬೋರ್ಡ್ ಜೊತೆ ಮಾತನಾಡಿದ್ದು, ಸದ್ಯದಲ್ಲೇ ನಿರ್ಧಾರ ಪ್ರಕಟಿಸೋದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಕಾಂಗರೂಗಳ ಸವಾರಿ:
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಬೌಲರ್​ಗಳ ಮೇಲೆ ಕಾಂಗರೂಗಳ ಭರ್ಜರಿ ಸವಾರಿ ಮಾಡಿದ್ದಾರೆ. ಶತಕದ ಅಂಚಿನಲ್ಲಿದ್ದ ಸ್ಟೀವ್ ಸ್ಮಿತ್ 85ರನ್ ಗಳಿಸಿ ನೀಲ್ ವ್ಯಾಗ್ನರ್​ಗೆ ವಿಕೆಟ್ ಒಪ್ಪಿಸಿದ್ರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ವಿಲಿಯಮ್ಸನ್ ಪಡೆಯ ಬೌಲರ್​ಗಳನ್ನ ಸರಿಯಾಗೇ ಬೇಟೆಯಾಡಿದ ಟ್ರಾವಿಸ್ ಹೆಡ್, 114ರನ್ ಗಳಿಸಿದ್ರು. ಇದ್ರೊಂದಿಗೆ ಆಸಿಸ್ ಮೊದಲ ಇನ್ನಿಂಗ್ಸ್​ನಲ್ಲಿ 467ರನ್ ಕಲೆಹಾಕಿದೆ.

284ರನ್​ಗೆ ಆಫ್ರಿಕಾ ಆಲೌಟ್:
ಜೋಹಾನ್ಸ್ ಬರ್ಗ್​ನಲ್ಲಿ ನಡೀತಿರೋ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ 284ರನ್​ಗೆ ಆಲೌಟ್ ಆಗಿದೆ. ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ 95ರನ್ ಗಳಿಸೋದ್ರೊಂದಿಗೆ, ಆಂಗ್ಲರಿಗೆ ವಿಲನ್ ಆಗಿ ಕಾಡಿದ್ರು. ಸ್ಟುವರ್ಟ್ ಬ್ರಾಡ್ ಹಾಗೂ ಸ್ಯಾಮ್ ಕರ್ರನ್ ತಲಾ 4ವಿಕೆಟ್ ಪಡೆದು ಮಿಂಚಿದ್ರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!