ಕೊರೊನಾ ಆರ್ಭಟದ ಮಧ್ಯೆ ನಾಯಿ ಕಡಿತ, ಕೊನೆಗೂ ಬದುಕುಳಿಯಲಿಲ್ಲ ಬಾಲಕ

ಬೆಳಗಾವಿ: ನಾಯಿ ಕಡಿತದಿಂದ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೆ ಅಸುನೀಗಿರುವ ಘಟನೆ ಬಿಮ್ಸ್​ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಸೋಹಂ ಬೆನಕೆ(8) ಮೃತ ದುರ್ದೈವಿ.

ಎರಡು ತಿಂಗಳ ಹಿಂದೆ ಮಚ್ಛೆ ಗ್ರಾಮದಲ್ಲಿ ನಾಯಿ ಕಡಿತದಿಂದ ಗಾಯಗೊಂಡಿದ್ದ ಬಾಲಕನನ್ನ ಚಿಕಿತ್ಸೆಗೆಂದು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ಮೃತ ಸೋಹಂ ತಂದೆ ಸುನೀಲ್ ಬೆನಕೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲವೆಂದು ಆರೋಪಿಸಿದ್ದಾರೆ. ಸದ್ಯಕ್ಕೆ ಸೋಹಂ ಮೃತದೇಹವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Related Tags:

Related Posts :

Category:

error: Content is protected !!