ತುಂಡು ಭೂಮಿಗಾಗಿ ಸಂಬಂಧಿಕರ ನಡುವೆ ಮಾರಾಮಾರಿ

ತುಮಕೂರು: ಹುಟ್ಟುತ್ತಾ ಸಹೋದರತ್ವ, ಬೆಳೆಯುತ್ತಾ ದಾಯಾದಿ ಕಲಹ ಅನ್ನೋ ಮಾತಿಗೆ ಕಲ್ಪತರುನಾಡು ತುಮಕೂರಿನಲ್ಲಿ ಒಂದು ಘಟನೆ ಸಾಕ್ಷಿಯಾಗಿದೆ. ಗಂಡಸರ ಆಸರೆಯೇ ಇಲ್ಲದೆ ಬದುಕುತ್ತಿದ್ದ ಮಹಿಳೆಯರ ಮೇಲೆ ಸಹೋದರರೇ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ಸಂಬಂಧಿಗಳ ಉಪಟಳಕ್ಕೆ ಬೆಚ್ಚಿಬಿದ್ದಿರುವ ಮಹಿಳೆಯರು ನಮ್ಮ ಜೀವ ಉಳಿಸಿ ಅಂತಾ ಗೋಗರೆಯುವಂತಾಗಿದೆ.

ಜಮೀನಿನ ವಿಷಯಕ್ಕೆ ಮಹಿಳೆಯರನ್ನ ಹಿಗ್ಗಾಮುಗ್ಗಾ ಥಳಿಸಿದ್ರಾ ಪಾಪಿ ಸಂಬಂಧಿಕರು?
ಅಂದಹಾಗೆ ಇದು ತುಮಕೂರು ತಾಲೂಕಿನ ದಿಬ್ಬೂರು ಹೊಸಹಳ್ಳಿಯಲ್ಲಿ ತುಂಡು ಭೂಮಿಗಾಗಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದಾರೆ. ಉಮಾದೇವಿ, ವಿಜಯಲಕ್ಷ್ಮೀ ಹಾಗೂ ಹುಚ್ಚಮ್ಮರ ಪರಿಸ್ಥಿತಿಗೆ ಕಾರಣ ಇವರ ಸಂಬಂಧಿಕರೇ ಅನ್ನುವುದು ಮಾತ್ರ ದುಃಖದ ಸಂಗತಿ. ಹುಚ್ಚಮ್ಮಗೆ 4 ಎಕರೆ ಜಮೀನಿದ್ದು, ಪತಿ ತೀರಿಹೋಗಿದ್ರಿಂದ ಇವರ ಹೆಣ್ಣುಮಕ್ಕಳೇ ನೋಡಿಕೊಳ್ತಿದ್ರು. ಆದ್ರೆ ಇವರ ಆಸ್ತಿ ಮೇಲೆ ಕಣ್ಣಿಟ್ಟ ಪಾಪಿ ಸಂಬಂಧಿಕರು ಮಹಿಳೆಯರ ಜಮೀನಿಗೆ ನುಗ್ಗಿ ಮರಗಳನ್ನ ಕಡಿದು ಹಾಕಿದ್ದಾರೆ. ಇದನ್ನ ಪಶ್ನಿಸಲು ಹೋದ ಅಬಲೆಯರನ್ನ ಜಮೀನಿನ ತುಂಬಾ ಅಟ್ಟಾಡಿಸಿ ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರಂತೆ.

ಸಂತ್ರಸ್ತ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸದ ಪೊಲೀಸರು?
ಇನ್ನು ಹಲ್ಲೆ ನಡೆಸಿದವರು ಇವರ ಸಂಬಂಧಿಗಳಾದ ನಾಗರಾಜ, ವಾಸು ಹಾಗೂ ವಿಶ್ವಶೇಖರ್ ಎನ್ನುವವರು. ಇವರ ದಾಳಿಯಿಂದ ಉಮಾದೇವಿ, ವಿಜಯಲಕ್ಷ್ಮೀ ಹಾಗೂ ಹುಚ್ಚಮ್ಮ ತೀವ್ರವಾಗಿ ಗಾಯಗೊಂಡಿದ್ದಾರೆ. ಆದ್ರೆ, ಈ ಕುರಿತು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ದೂರು ಕೊಟ್ಟರೂ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಇನ್ನೊಂದ್ಕಡೆ ಈ ಆರೋಪಗಳನ್ನೆಲ್ಲಾ ಹುಚ್ಚಮ್ಮ ಸಂಬಂಧಿಕರು ತಳ್ಳಿ ಹಾಕ್ತಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!