ದಾವೋಸ್​ನಿಂದ ಧವಳಗಿರಿಗಿಂದು ಸಿಎಂ ಬಿಎಸ್​​ವೈ ವಾಪಸ್

ಬೆಂಗಳೂರು: ನಾಲ್ಕೈದು ದಿನಗಳಿಂದ ಬಿಕೋ ಎನ್ನುತ್ತಿದ್ದ ಧವಳಗಿರಿ ಇಂದಿನಿಂದ ಮತ್ತೆ ಗಿಜುಗುಡಲಿದೆ. ವಿಶ್ವ ಆರ್ಥಿಕ ಶೃಂಗದಲ್ಲಿ ಪಾಲ್ಗೊಳ್ಳಲು ದಾವೋಸ್​ಗೆ ತೆರಳಿದ್ದ ಸಿಎಂ ಯಡಿಯೂರಪ್ಪ, ಇಂದು ಮಧ್ಯಾಹ್ನ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ಇದ್ರ ಬೆನ್ನಲ್ಲೇ, ಸಚಿವ ಸ್ಥಾನದ ಆಕಾಂಕ್ಷಿಗಳೂ ಮತ್ತೆ ಆಕ್ಟೀವ್ ಆಗಲಿದ್ದಾರೆ.

ಧವಳಗಿರಿ. ಸದ್ಯ ರಾಜ್ಯ ರಾಜಕಾರಣದ ಅದ್ರಲ್ಲೂ ಬಿಜೆಪಿಯ ಶಕ್ತಿ ಕೇಂದ್ರ ಸಿಎಂ ಬಿಎಸ್​ವೈರ ನಿವಾಸ ಹಲವು ರಾಜಕೀಯ ತಿರುವುಗಳಿಗೆ ವೇದಿಕೆಯಾಗಿದೆ. ದಿನಾ ಒಂದಲ್ಲಾ ಒಂದು ಕಾರಣಕ್ಕೆ ಕೇಸರಿ ನಾಯಕರು ಧವಳಗಿರಿಗೆ ದಾಂಗುಡಿಯಿಡ್ತಿರ್ತಾರೆ. ಆದ್ರೆ, ಕೆಲ ದಿನಗಳಿಂದ ರಾಜಾಹುಲಿಯ ಮನೆ ಬಿಕೋ ಎನ್ನುತ್ತಿತ್ತು. ಯಾಕಂದ್ರೆ, ಸಿಎಂ ಬಿಎಸ್​ವೈ ಸ್ವಿಟ್ಜರ್​ಲ್ಯಾಂಡ್​ನ ದಾವೋಸ್​ನಲ್ಲಿ ನಡೆದ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ರು. ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಸಲುವಾಗಿ ತೆರಳಿದ್ದ ಯಡಿಯೂರಪ್ಪ ಇಂದು ಸಚಿವ ಸಂಪುಟ ವಿಸ್ತರಣೆ ಅನ್ನೋ ಕೆಂಡವನ್ನ ಜೊತೆಯಲ್ಲಿಟ್ಟುಕೊಂಡೇ ಬೆಂಗಳೂರಿಗೆ ಬರ್ತಿದ್ದಾರೆ.

ದಾವೋಸ್​ನಿಂದ ಇಂದು ಸಿಎಂ ಬಿಎಸ್​​ವೈ ವಾಪಸ್:
ಸ್ವಿಟ್ಜರ್​ಲ್ಯಾಂಡ್​ನ ದಾವೋಸ್​ಗೆ ತೆರಳಿದ್ದ ಸಿಎಂ ಬಿಎಸ್​ವೈ, ಇಂದು ಮಧ್ಯಾಹ್ನ 3.10 ರ ಸುಮಾರಿಗೆ, ಬೆಂಗಳೂರಿಗೆ ವಾಪಸ್ ಆಗ್ತಿದ್ದಾರೆ. ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ ಬರ್ತಿರೋ ಸುದ್ದಿ ಕೇಳಿ, ಅಲರ್ಟ್ ಆಗಿರೋ ಸಚಿವ ಸ್ಥಾನದ ಆಕಾಂಕ್ಷಿಗಳು ಮೈ ಕೊಡವಿ ಮೇಲೇಳುತ್ತಿದ್ದಾರೆ. ಮಧ್ಯಾಹ್ನದಿಂದಲೇ ಸಿಎಂರ ಧವಳಗಿರಿ ನಿವಾಸಕ್ಕೆ ಮಂತ್ರಿಗಿರಿ ಆಕಾಂಕ್ಷಿಗಳು ಪರೇಡ್ ನಡೆಸಲಿದ್ದಾರೆ.

‘ರಾಜಾಹುಲಿ’ ಟೈಂ ಲೈನ್:
ಗೆದ್ದ ಮಿತ್ರ ಮಂಡಳಿ ಶಾಸಕರಿಗೆ ಈ ಮೊದಲು ಕೊಟ್ಟಿರುವ ಭರವಸೆ ಪ್ರಕಾರ ಒಂದೆರಡು ದಿನದಲ್ಲೇ ಸಿಎಂ ದೆಹಲಿಗೆ ಹೋಗಬೇಕಿದೆ. ದೆಹಲಿಗೆ ತೆರಳುವ ಮುನ್ನ ವರಿಷ್ಠರ ಭೇಟಿಗೆ ಸಮಯ ನಿಗದಿಯಾಗಬೇಕಿದೆ. ಇಂದು ಮಧ್ಯಾಹ್ನದ ಬಳಿಕದ ಸಿಎಂ ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿಲ್ಲ. ಶನಿವಾರದ ಕಾರ್ಯಕ್ರಮಗಳು ಕಾಯ್ದಿರಿಸಲ್ಪಟ್ಟಿವೆ. ಭಾನುವಾರ ಬೆಂಗಳೂರಿನಲ್ಲೇ ಗಣರಾಜ್ಯೋತವ್ಸ ಕಾರ್ಯಕ್ರಮಗಳು ನಿಗದಿಯಾಗಿದ್ದು, ವರಿಷ್ಠರ ಅನುಮತಿ ಸಿಕ್ಕರೆ ತಕ್ಷಣಕ್ಕೇ ದೆಹಲಿ ಭೇಟಿ ನಿಗದಿಯಾಗಲಿದೆ.

ಸದ್ಯದ ಸಿಎಂ ವೇಳಾಪಟ್ಟಿ ಪ್ರಕಾರ ಮುಂದಿನ ಮಂಗಳವಾರದವರೆಗೂ ಸಿಎಂ ದೆಹಲಿ ಭೇಟಿ ನಿಗದಿಯಾಗಿಲ್ಲ. ವರಿಷ್ಠರ ಅನುಮತಿ ಬಳಿಕವೇ ದೆಹಲಿ ಪ್ರಯಾಣ ನಿಗದಿಯಾಗಬೇಕಿದೆ. ಆದ್ರೆ, ಅದಕ್ಕೂ ಮುನ್ನ ಸಚಿವ ಸ್ಥಾನಾಕಾಂಕ್ಷಿ ಹೊಸ ಶಾಸಕರು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡುವ ಸಾಧ್ಯತೆ ಇದೆ‌. ಹೀಗಾಗಿ, ನಾಲ್ಕು ದಿನಗಳ ಕಾಲ ಸುಮ್ಮನಿದ್ದವರೆಲ್ಲಾ ಚುರುಕಾಗಲಿದ್ದು, ಸಿಎಂಗೆ ವಿದೇಶ ಪ್ರವಾಸದ ಆಯಾಸ ಪರಿಹರಿಸಿಕೊಳ್ಳಲೂ ಅವಕಾಶ ಸಿಗೋದು ಅನುಮಾನವಾಗಿದೆ

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!