ಬಜೆಟ್ 2025: ಯಾರಿಗೆ ಏನು ಸಿಕ್ಕಿತು?
Know Your Income Tax Slabs
Income Tax Slab | Income Tax Rate |
---|---|
0 - ರೂ 2.5 ಲಕ್ಷ ರೂಪಾಯಿವರೆಗೆ | Nil |
2.5 - 5 ಲಕ್ಷ ರೂಪಾಯಿವರೆಗೆ | 5% |
5 ಲಕ್ಷದಿಂದ-10 ರೂ. ಲಕ್ಷ ವರೆಗೆ | 20% |
10 ಲಕ್ಷಕ್ಕಿಂತ ಹೆಚ್ಚು | 30% |
Income Tax Slab | Income Tax Rate |
---|---|
3,00,000 ರೂವರೆಗೆ | 0 |
3,00,001ರಿಂದ 7,00,000 ರೂ | 5% |
7,00,001ರಿಂದ 10,00,000 ರೂ | 10% |
10,00,001ರಿಂದ 12,00,000 ರೂ | 15% |
12,001ರಿಂದ 15,00,000 ರೂ | 20% |
15,00,000 ರೂ ಮೇಲ್ಪಟ್ಟ ಆದಾಯ | 30% |
ಕ್ಷೇತ್ರವಾರು ಹಂಚಿಕೆ
ವಿಡಿಯೋ
ಇನ್ನೂ ಓದಿರಿಫೋಟೋ ಗ್ಯಾಲರಿ
ಇನ್ನೂ ಓದಿರಿಹೊಸ Vs ಹಳೇ ತೆರಿಗೆ ಪದ್ದತಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ 2023 ರಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಉತ್ತೇಜಿಸಲು ಹಲವಾರು ಘೋಷಣೆಗಳನ್ನು ಮಾಡಿದರು. ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ.3 ಲಕ್ಷಕ್ಕೆ ಹೆಚ್ಚಿಸಲಾಯ್ತು. ಈ ಬದಲಾವಣೆಗಳು ಬಂದ ನಂತರ ಹೊಸ ತೆರಿಗೆ ವ್ಯವಸ್ಥೆ Vs ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ನಿಮಗೆ ಏನು ಪ್ರಯೋಜನವಾಗುತ್ತದೆ? ಈ ಕುರಿತಾದ ವಿವರ ಈ ಪುಟದಲ್ಲಿ ಲಭ್ಯ.
ಬಜೆಟ್ ನಿರೀಕ್ಷೆ
ಬಜೆಟ್ 2024-25: ಏರುತ್ತಿರುವ ಹಣದುಬ್ಬರದಿಂದ ಸಾಮಾನ್ಯ ಜನರು ಬಳಲುತ್ತಿದ್ದಾರೆ. ಅವರ ದಿನನಿತ್ಯದ ಬಜೆಟ್‌ನಲ್ಲಿ ಏರುಪೇರಾಗುತ್ತಿದೆ. ಆಹಾರ ಧಾನ್ಯಗಳು, ಗ್ಯಾಸ್, ಎಣ್ಣೆ, ಪೇಸ್ಟ್, ಸೋಪು ಇತ್ಯಾದಿಗಳು ದುಬಾರಿಯಾಗಿವೆ. ನರೇಂದ್ರ ಮೋದಿ ಸರ್ಕಾರವು ಫೆಬ್ರವರಿ 1, 2024 ರಂದು ತನ್ನ ಅಂತಿಮ ಬಜೆಟ್ ಅನ್ನು ಮಂಡಿಸಲಿದೆ. ಈ ವರ್ಷ ಚುನಾವಣೆ ಇರುವುದರಿಂದ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2024-25 ನೇ ಸಾಲಿನ ಪೂರ್ಣಾವಧಿಯ ಮುಂಗಡಪತ್ರ ಮಂಡಿಸಿ, ಅದಕ್ಕೆ ಲೇಖಾನುದಾನ ಪಡೆಯಲಿದ್ದಾರೆ. ಈ ಬಜೆಟ್‌ನಲ್ಲಿ ಹಣದುಬ್ಬರವನ್ನು ಕಡಿಮೆ ಮಾಡಲು ನಿರ್ಮಲಾ ಸೀತಾರಾಮನ್ ಪ್ರಮುಖ ಪ್ರಸ್ತಾಪಗಳನ್ನು ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸಾಮಾನ್ಯ ಜನ. ಅದೇ ರೀತಿ ಜನರ ದೈನಂದಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಕೂಡ ಇದೆ.
2024ರ ಬಜೆಟ್ಗೆ ಸಂಬಂಧಿಸಿದ ಪ್ರಶ್ನೆಗಳು ಹಾಗೂ ಉತ್ತರಗಳು
ಪ್ರಶ್ನೆ: ಈ ವರ್ಷ ಬಜೆಟ್ ಯಾವಾಗ ಮಂಡಿಸಲಾಗುತ್ತದೆ?
ಉತ್ತರ: ಈ ವರ್ಷ ಚುನಾವಣೆ ಇದ್ದರಿಂದ ಫೆ. 1ರಂದು ಮಧ್ಯಂತರ ಬಜೆಟ್ ಇತ್ತು. ಜುಲೈ ಕೊನೆಯ ವಾರದಲ್ಲಿ ಪೂರ್ಣ ಬಜೆಟ್ ಮಂಡನೆಯಾಗಲಿದೆ.
ಪ್ರಶ್ನೆ: ಫೆ. 1ರಂದ ಮಧ್ಯಂತರ ಬಜೆಟ್ ಯಾಕಿತ್ತು?
ಉತ್ತರ: ಸಾರ್ವತ್ರಿಕ ಚುನಾವಣೆ ಇದ್ದ ವರ್ಷದಲ್ಲಿ ಚುನಾವಣೆಗೆ ಮುನ್ನ ಪೂರ್ಣಪ್ರಮಾಣದ ಬಜೆಟ್ ಪ್ರಸ್ತುಪಡಿಸಲಾಗುವುದಿಲ್ಲ. ಲೇಖಾನುದಾನಕ್ಕೆ ಅನುಮೋದನೆಗೆ ಮಾತ್ರ ಸೀಮಿತವಾಗಿರುತ್ತದೆ.
ಪ್ರಶ್ನೆ: ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಈ ಬಾರಿ ಬದಲಾವಣೆ ಆಗಬಹುದೆ?
ಉತ್ತರ: ಸರ್ಕಾರ ಕೆಲ ಜನಪ್ರಿಯ ಕ್ರಮಗಳನ್ನು ಅನುಸರಿಸುವ ನಿರೀಕ್ಷೆ ಇದೆ. ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಬದಲಾವಣೆ ಮಾಡಲಾಗುವ ಸಾಧ್ಯತೆ ಇದೆ.
ಪ್ರಶ್ನೆ: ಸ್ವತಂತ್ರ ಭಾರತದಲ್ಲಿ ಮೊದಲ ಬಜೆಟ್ ಮಂಡಿಸಿದ್ದು ಯಾರು?
ಉತ್ತರ: ಸ್ವಾತಂತ್ರ್ಯದ ಬಳಿಕ ಮೊದಲ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು ಆರ್.ಕೆ. ಷಣ್ಮುಗಂ ಚೆಟ್ಟಿ. 1947ರ ನ. 26ರಂದು ಬಜೆಟ್ ಮಂಡಿಸಲಾಯಿತು.
ಪ್ರಶ್ನೆ: ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಮೊದಲ ಮಹಿಳೆಯೇ?
ಉತ್ತರ: ಅಲ್ಲ, ಭಾರತದಲ್ಲಿ ಬಜೆಟ್ ಮಂಡಿಸಿದ ಮೊದಲ ಮಹಿಳೆ ಇಂದಿರಾ ಗಾಂಧಿ. ಇವರು ಪ್ರಧಾನಿಯಾಗಿದ್ದಾಗ ಬಜೆಟ್ ಮಂಡಿಸಿದ್ದರು. ನಿರ್ಮಲಾ ಸೀತಾರಾಮನ್ ಭಾರತದ ಮೊದಲ ಪೂರ್ಣಪ್ರಮಾಣದ ಮಹಿಳಾ ಹಣಕಾಸು ಮಂತ್ರಿ.
ಪ್ರಶ್ನೆ: ಭಾರತದಲ್ಲಿ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಯಾರು?
ಉತ್ತರ: ಮೊರಾರ್ಜಿ ದೇಸಾಯಿ. ಇವರು 10 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. 1959ರಿಂದ 1963ರವರೆಗೆ ಆರು ಬಾರಿ; ಹಾಗು 1967ರಿಂದ 1969ರವರೆಗೆ ನಾಲ್ಕು ಬಾರಿ ಅವರು ಬಜೆಟ್ ಮಂಡಿಸಿದ್ದಾರೆ.
ಪ್ರಶ್ನೆ: ನಿರ್ಮಲಾ ಸೀತಾರಾಮನ್ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾರಾ?
ಉತ್ತರ: ಇಲ್ಲ. ಮೊರಾರ್ಜಿ ದೇಸಾಯಿ 10, ಪಿ ಚಿದಂಬರಂ 9, ಪ್ರಣಬ್ ಮುಖರ್ಜಿ 8 ಬಾರಿ ಬಜೆಟ್ ಮಂಡಿಸಿದ್ದಾರೆ. ಯಶವಂತ ಸಿನ್ಹಾ, ಯಶವಂತರಾವ್ ಚವಾಣ್, ಸಿ.ಡಿ. ದೇಶಮುಖ್ ಮತ್ತು ಈಗ ನಿರ್ಮಲಾ ಸೀತಾರಾಮನ್ ತಲಾ ಏಳು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.
ಪ್ರಶ್ನೆ: ಪ್ರಧಾನಿಯಾಗಿ ಬಜೆಟ್ ಮಂಡಿಸಿದವರು ಯಾರು?
ಉತ್ತರ: ಜವಾಹಾರ್ ಲಾಲ್ ನೆಹರೂ, ಇಂದಿರಾ ಗಾಂಧಿ, ಚರಣ್ ಸಿಂಗ್ ಮತ್ತು ರಾಜೀವ್ ಗಾಂಧಿ ಅವರುಗಳು ಪ್ರಧಾನಿಯಾಗಿದ್ದಾಗ ಸ್ವತಃ ಅವರೇ ಬಜೆಟ್ ಮಂಡಿಸಿದ್ದಿದೆ.
ಪ್ರಶ್ನೆ: ಹಿಂದಿನ ಬಜೆಟ್ನ ಗಾತ್ರ ಎಷ್ಟಿತ್ತು?
ಉತ್ತರ: 2023ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನ ಗಾತ್ರ 45 ಲಕ್ಷ ಕೋಟಿ ರೂನದ್ದಾಗಿತ್ತು. 2024ರ ಫೆಬ್ರುವರಿಯ ಬಜೆಟ್ನ ಗಾತ್ರ 47.66 ಲಕ್ಷ ಕೋಟಿ ರೂನಷ್ಟಿತ್ತು.
ಪ್ರಶ್ನೆ: ಯಾವ ಬಜೆಟ್‌ನಲ್ಲಿ ವೇತನ ವರ್ಗವು ಮೊದಲ ಬಾರಿಗೆ ಹೆಚ್ಚು ಪ್ರಯೋಜನವನ್ನು ಪಡೆದಿತ್ತು?
ಉತ್ತರ: ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ 1974 ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಪರಿಚಯಿಸಲಾಯಿತು.
ಪ್ರಶ್ನೆ: ಬಜೆಟ್‌ಗೂ ಮುನ್ನ ಹಲ್ವಾ ಕಾರ್ಯಕ್ರಮ ಆಚರಿಸುವುದು ಏಕೆ?ಉತ್ತರ: ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಸಿಹಿ ತಿನ್ನಬೇಕು ಎಂಬುದು ವಾಡಿಕೆ, ಆದ್ದರಿಂದ ಈ ಸಮಾರಂಭವನ್ನು ಬಜೆಟ್‌ನಂತಹ ದೊಡ್ಡ ಕಾರ್ಯಕ್ರಮಗಳ ಮೊದಲು ಆಯೋಜಿಸಲಾಗುತ್ತದೆ.
ಪ್ರಶ್ನೆ: ರೈಲ್ವೆ ಬಜೆಟ್ ಅನ್ನು ಯಾವಾಗ ಬಜೆಟ್‌ನೊಂದಿಗೆ ವಿಲೀನಗೊಳಿಸಲಾಯಿತು?
ಉತ್ತರ: 2016 ರಲ್ಲಿ ಆಗಿನ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕೊನೆಯ ರೈಲ್ವೆ ಬಜೆಟ್ ಅನ್ನು ಮಂಡಿಸಿದರು. ಇದರ ನಂತರ, ಸರ್ಕಾರವು ಈ ಸಂಪ್ರದಾಯವನ್ನು ನಿಲ್ಲಿಸಿತ್ತು ಮತ್ತು ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಲಾಯಿತು.
ಪ್ರಶ್ನೆ: ಯಾವ ಬಜೆಟ್‌ನಲ್ಲಿ ಮೊದಲ ಬಾರಿಗೆ ತೆರಿಗೆ ಸ್ಲ್ಯಾಬ್ ಅನ್ನು ಬದಲಾಯಿಸಲಾಯಿತು?
ಉತ್ತರ: ಸ್ವತಂತ್ರ ಭಾರತದಲ್ಲಿ ಮೊದಲ ತೆರಿಗೆ ಸ್ಲ್ಯಾಬ್ ಬದಲಾವಣೆಯು 1949-50 ರ ದಶಕದಲ್ಲಿ ನಡೆಯಿತು.
ಪ್ರಶ್ನೆ: ದೇಶದ ಮೊದಲ ತೆರಿಗೆ ವ್ಯವಸ್ಥೆಯನ್ನು ರಚಿಸಿದವರು ಯಾರು?
ಉತ್ತರ: 1992-93 ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಮನಮನೋಹನ್ ಸಿಂಗ್ ಅವರು ತೆರಿಗೆ ಪದ್ಧತಿಯನ್ನು ರಚಿಸಿದರು.