Budget 2022 ಆರ್ಥಿಕ ಸಮೀಕ್ಷೆಯ ಕೆಲವು ಸುಳಿವು ಆಧರಿಸಿ ಇಂದಿನ ಬಜೆಟ್‌ನಿಂದ ಜನರು ಏನನ್ನು ನಿರೀಕ್ಷಿಸಬಹುದು?
ಆರ್ಥಿಕ ಸಮೀಕ್ಷೆಯು ಏರಿಕೆಯಾಗುವ ಹಣದುಬ್ಬರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ ಸಹ, ಸರ್ಕಾರವು ತನ್ನ ಬಜೆಟ್‌ನಲ್ಲಿ ಬೆಳವಣಿಗೆಯ ಪರವಾಗಿರುತ್ತದೆ ಮತ್ತು ಹೆಚ್ಚಿನ ಆರ್ಥಿಕ ವಿಸ್ತರಣೆಗಾಗಿ ಹೆಚ್ಚಿನ ವೆಚ್ಚದ ಮೇಲೆ ಕೇಂದ್ರೀಕರಿಸುತ್ತದೆ, ಇದು FY23 GDP ಬೆಳವಣಿಗೆಯನ್ನು ಶೇ 8-8.5 ರಷ್ಟು ಉತ್ತೇಜಿಸುತ್ತದೆ.
ದೆಹಲಿ: ಈ ವರ್ಷದ ಆರ್ಥಿಕ ಸಮೀಕ್ಷೆ (Economic Survey) ವಿಶ್ಲೇಷಕರು ಸೂಚಿಸಿದಂತೆ ಬಜೆಟ್ (Budget 2022) ಆದ್ಯತೆಗಳನ್ನು ವಿವರಿಸುವಲ್ಲಿ ಸೀಮಿತವಾಗಿದೆ. ಇದು ಖಾಸಗಿ ಹೂಡಿಕೆಗಳಲ್ಲಿ ಚೇತರಿಕೆ, ಬಳಕೆ ಅಥವಾ ಉದ್ಯೋಗ ಸೃಷ್ಟಿಯಾಗಿರಲಿ, ಪ್ರತಿಯೊಂದು ಅಂಶದಲ್ಲೂ ಸಾಕಷ್ಟು ಆಶಾವಾದವನ್ನು ಹೊಂದಿದೆ. ಕಳೆದ ವರ್ಷಗಳಲ್ಲಿ ಕೈಗೊಂಡಿರುವ ಹಣಕಾಸು ಮತ್ತು ವಿತ್ತೀಯ ನಿರ್ವಹಣೆಗೆ ‘ಅಜೈಲ್’ ವಿಧಾನದ (Agile approach)ಕುರಿತು ಸಮೀಕ್ಷೆಯು ಮಾತನಾಡಿದೆ.ಅದೇ ವೇಳೆ ಭಾರತೀಯ ಆರ್ಥಿಕತೆ ಎದುರಿಸುತ್ತಿರುವ ಅಪಾಯಗಳನ್ನು ಗುರುತಿಸುತ್ತದೆ. ಅಜೈಲ್ ಎಂದರೆ ಚುರುಕು. ಹಲವಾರು ಹಂತಗಳಲ್ಲಿ ಯೋಜನೆಗೆ ನೈಜ ಸಮಯದಲ್ಲಿ ಪಡೆದ ಪ್ರತಿಕ್ರಿಯೆ ಮತ್ತು ಡೇಟಾವನ್ನು ಗಣನೆಗೆ ತೆಗೆದುಕೊಂಡು ಒಂದೇ ಹರಿವಿನಲ್ಲಿ ಮುಂದುವರಿಯದೆ ಯೋಜನೆಯನ್ನು ಕಾರ್ಯಗತಗೊಳಿಸುವಾಗ ಅಗತ್ಯ ಬದಲಾವಣೆಗಳನ್ನು ಮಾಡುವುದು ಅಜೈಲ್ ವಿಧಾನವಾಗಿದೆ. ಇವು ಜಿಎಸ್‌ಟಿ ಆದಾಯ, ಡಿಜಿಟಲ್ ಪಾವತಿಗಳು, ಉಪಗ್ರಹ ಚಿತ್ರ, ವಿದ್ಯುತ್ ಉತ್ಪಾದನೆ, ಸರಕು , ವ್ಯಾಪಾರ ಮತ್ತು ಸಾರಿಗೆ ಸೇರಿದಂತೆ ಹಲವಾರು ಲೈವ್ ಡೇಟಾವನ್ನು ಆಧರಿಸಿವೆ. ಬಜೆಟ್ ಆರ್ಥಿಕ ಬಲವರ್ಧನೆಗೆ ಹುರುಪು ಒದಗಿಸಬಹುದು ಆದರೆ ‘ಉದ್ದೇಶದಲ್ಲಿ’ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ ಎಂದು ಮಾರುಕಟ್ಟೆದಾರರು ಮತ್ತು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.
ಪ್ರಭುದಾಸ್ ಲಿಲ್ಲಾಧೆರ್ ಇನ್ವೆಸ್ಟ್ ಮೆಂಟ್ ಪ್ರಾಡೆಕ್ಟ್ಸ್ ಮುಖ್ಯಸ್ಥ ಪಿಯೂಶ್ ನಗ್ಡಾ ಪ್ರಕಾರ ಬಜೆಟ್‌ನಲ್ಲಿ ಸರ್ಕಾರದ ಪ್ರಮುಖ ಗಮನವು ಮೂಲಸೌಕರ್ಯ, ಜವಳಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಮೇಲೆ ಉದ್ಯೋಗ ಸೃಷ್ಟಿ ಜೊತೆಗೆ ನವೀಕರಿಸಬಹುದಾದ ಇಂಧನಕ್ಕೆ ಉತ್ತೇಜನ ನೀಡಲಿದೆ ಎಂಬ ಸಂಕೇತಗಳನ್ನು ಕಳುಹಿಸುತ್ತಿದೆ ಎಂದು ಹೇಳಿದರು. ಆರ್ಥಿಕ ಸಮೀಕ್ಷೆಯು ಏರಿಕೆಯಾಗುವ ಹಣದುಬ್ಬರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ ಸಹ, ಸರ್ಕಾರವು ತನ್ನ ಬಜೆಟ್‌ನಲ್ಲಿ ಬೆಳವಣಿಗೆಯ ಪರವಾಗಿರುತ್ತದೆ ಮತ್ತು ಹೆಚ್ಚಿನ ಆರ್ಥಿಕ ವಿಸ್ತರಣೆಗಾಗಿ ಹೆಚ್ಚಿನ ವೆಚ್ಚದ ಮೇಲೆ ಕೇಂದ್ರೀಕರಿಸುತ್ತದೆ, ಇದು FY23 GDP ಬೆಳವಣಿಗೆಯನ್ನು ಶೇ 8-8.5 ರಷ್ಟು ಉತ್ತೇಜಿಸುತ್ತದೆ ಎಂದು ಅಂದಾಜಿಸಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಮಿತುಲ್ ಶಾ ಹೇಳಿದ್ದಾರೆ. ಸಮೀಕ್ಷೆಯು ಬೆಳವಣಿಗೆಯನ್ನು “ಮಧ್ಯಮ-ಅವಧಿಯ ಬಲವರ್ಧನೆ” ಸಾಧಿಸುವ ಸಾಧನವಾಗಿ ನೋಡುತ್ತದೆ ಮತ್ತು ಹೆಚ್ಚಿನ ಪಬ್ಲಿಕ್ ಕ್ಯಾಪೆಕ್ಸ್ ಮತ್ತು ಸುಧಾರಣೆಗಳು ಅಭಿವೃದ್ಧಿಯ ಚಕ್ರವನ್ನು ಪ್ರಚೋದಿಸಲು ನಿರೀಕ್ಷಿಸುತ್ತದೆ.ಅದೇ ರೀತಿ ಹೆಚ್ಚಿನ ಆದಾಯ, ಹೆಚ್ಚು ಕ್ಯಾಪೆಕ್ಸ್ ಮತ್ತು ಹಣಕಾಸಿನ ಬಲವರ್ಧನೆಯನ್ನು ಸಕ್ರಿಯಗೊಳಿಸುತ್ತದೆ.
ಅಂತೆಯೇ, ಬೆಳವಣಿಗೆ ಮತ್ತು ಹಣಕಾಸಿನ ಬಲವರ್ಧನೆಯ ನಡುವೆ ಯಾವುದೇ ಸಂಘರ್ಷವನ್ನು ಕಾಣುವುದಿಲ್ಲ ಎಂದು ನೋಮುರಾ ಹೇಳಿದೆ.
ಆರ್ಥಿಕ ವರ್ಷ 2022 ಗಾಗಿ ಸರ್ಕಾರವು ತನ್ನ ವಿತ್ತೀಯ ಕೊರತೆಯ ಗುರಿಯಾದ 6.8 ರಷ್ಟು ಜಿಡಿಪಿಯ ಗುರಿಯನ್ನು ಆರಾಮವಾಗಿ ಪೂರೈಸುತ್ತದೆ. ಪ್ಯಾಂಡೆಮಿಕ್ ಎಂಡಮಿಕ್ ಆಗುವ ಸ್ಥಿತಿಯಲ್ಲಿರುವಾಗ ಮುಂಬರುವ ತಿಂಗಳುಗಳಲ್ಲಿ ಸಾರ್ವಜನಿಕ ವೆಚ್ಚದ ಬಲವಾದ ಏರಿಕೆಯನ್ನು ಸೂಚಿಸುತ್ತದೆ, ಇದು ಜಿಡಿಪಿ ಬೆಳವಣಿಗೆ ಕೊಡುಗೆ ನೀಡುತ್ತದೆ ಎಂದು ನೊಮುರಾ ಇಂಡಿಯಾ ಹೇಳಿದೆ.
“ಸಮೀಕ್ಷೆಯು ಯಾವುದೇ ಸೂಚನೆಯಾಗಿದ್ದರೆ, FY23 ಕೇಂದ್ರ ಬಜೆಟ್ ಇದುವರೆಗಿನ ಹಣಕಾಸಿನ ನೀತಿಗೆ ಇದೇ ರೀತಿಯ ಥೀಮ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಸರ್ಕಾರವು ಹಣಕಾಸಿನ ಬಲವರ್ಧನೆಯ ಕಡೆಗೆ ತನ್ನ ಬದ್ಧತೆಯನ್ನು ಸೂಚಿಸುತ್ತದೆ ಎಂದು ನೊಮುರಾ ಹೇಳಿದೆ
ಕ್ರಿಸಿಲ್ ರಿಸರ್ಚ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಧರ್ಮಕೀರ್ತಿ ಜೋಶಿ, ಸರ್ಕಾರದ ಮೂಲಸೌಕರ್ಯ ಕ್ಯಾಪೆಕ್ಸ್ ಫೋಕಸ್ ಮತ್ತು ಪೂರೈಕೆಯ ಸುಧಾರಣೆಗಳಿಂದ ಮಧ್ಯಮ ಅವಧಿಯ ನಿರೀಕ್ಷೆಗಳ ಮೇಲೆ ಸಮೀಕ್ಷೆಯು ಆಶಾದಾಯಕವಾಗಿದೆ ಎಂದು ಹೇಳಿದರು. ಸರ್ಕಾರದ ಮೂಲಸೌಕರ್ಯ ಹೂಡಿಕೆಗಳು ಮತ್ತು ಪಿಎಲ್‌ಐ ಯೋಜನೆಯಿಂದ ಖಾಸಗಿ ಹೂಡಿಕೆಗಳು ಕ್ರಮೇಣ ಪುನರುಜ್ಜೀವನಗೊಳ್ಳುತ್ತವೆ ಎಂದು ಜೋಶಿ ನಂಬುತ್ತಾರೆ. ಏತನ್ಮಧ್ಯೆ, ವಿಶ್ಲೇಷಕರು ಇಎಸ್ಜಿ ಪ್ಯಾರಾಮೀಟರ್‌ಗಳ ಮೇಲೆ ಕೇಂದ್ರೀಕರಿಸುವುದನ್ನು ನೋಡುತ್ತಿದ್ದಾರೆ.
“ಭಾರತದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ಸುಸ್ಥಿರ ತಂತ್ರಜ್ಞಾನಗಳು ಮತ್ತು ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ ವಿಭಾಗವು ಮತ್ತಷ್ಟು ಉತ್ತೇಜನವನ್ನು ಪಡೆಯುತ್ತದೆ. ಹೂಡಿಕೆದಾರರು ಬಜೆಟ್ ಅನ್ನು ವೇಗವರ್ಧಕ ಬೆಳವಣಿಗೆ ಎಂದು ಪರಿಗಣಿಸುತ್ತಾರೆ. ಸ್ವಚ್ಛ ಪರಿಸರ ಮತ್ತು ಹವಾಮಾನ ಬದಲಾವಣೆಯ ಕಡೆಗೆ ಸರ್ಕಾರದ ಬದ್ಧತೆಯು ನವೀಕರಿಸಬಹುದಾದ ಶಕ್ತಿಯನ್ನು ಪ್ರಮುಖವಾಗಿ ಮಾಡುತ್ತದೆ. ಈ ವಲಯವು ಈ ಬಜೆಟ್‌ನಲ್ಲಿ ಸರ್ಕಾರದ ಗಮನವನ್ನು ಸೆಳೆಯುತ್ತಿದೆ” ಎಂದು ರಿಲಯನ್ಸ್ ಸೆಕ್ಯುರಿಟೀಸ್ ಹೇಳಿದೆ.
ಇದಲ್ಲದೆ, ಸರ್ಕಾರವು ಕೃಷಿ, ಗ್ರಾಮೀಣ ಆರ್ಥಿಕತೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಹೆಚ್ಚಿನ ಬೆಂಬಲ ಯೋಜನೆಗಳನ್ನು ರೂಪಿಸುತ್ತದೆ ಎಂದು ಈ ಸಂಸ್ಥೆಗಳು ಹೇಳಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
“ಕಾರ್ಪೊರೇಟ್ ತೆರಿಗೆ ದರ ಕಡಿತ, ಆತ್ಮನಿರ್ಭರ್ ಭಾರತ್, ಪಿಎಲ್ಐ ಯೋಜನೆಗಳಂತಹ ವಿವಿಧ ಉಪಕ್ರಮಗಳು ಬೆಳವಣಿಗೆಯ ಪ್ರಮುಖ ವೇಗವರ್ಧಕಗಳಾಗಿ ಮುಂದುವರಿಯುತ್ತವೆ. ಖಾಸಗೀಕರಣವನ್ನು ಉತ್ತೇಜಿಸಲು ರಚನಾತ್ಮಕ ಸುಧಾರಣೆಗಳ ಪರಿಚಯವು ಬಹಳ ಮುಖ್ಯವಾದ ಅಂಶವಾಗಿದೆ., ಇದು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (FIIs) ದೀರ್ಘಾವಧಿಯ ಬಂಡವಾಳವನ್ನು ಆಕರ್ಷಿಸುತ್ತದೆ. ಗುಣಾತ್ಮಕ ಪರಿಣಾಮವನ್ನು ಸೃಷ್ಟಿಸಲು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರ್ಕಾರವು ಹೆಚ್ಚಿನ ಮೂಲಸೌಕರ್ಯ ವೆಚ್ಚವನ್ನು ಮತ್ತಷ್ಟು ಗುರಿಪಡಿಸುವ ನಿರೀಕ್ಷೆಯಿದೆ. ಬಂಡವಾಳ ಸರಕುಗಳು, ಎಲೆಕ್ಟ್ರಾನಿಕ್ ವಾಹನಗಳು, ಪರಿಸರ ವಿಜ್ಞಾನ, ನವೀಕರಿಸಬಹುದಾದ ಇಂಧನದಂತಹ ಕ್ಷೇತ್ರಗಳು ಬಜೆಟ್‌ನ ಫಲಾನುಭವಿಗಳಾಗುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಬಜೆಟ್ ಖಂಡಿತವಾಗಿಯೂ ಹೆಚ್ಚಿನ ಕಾಳಜಿಗಳನ್ನು ಪರಿಹರಿಸುತ್ತದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ ಹೇಳಿದೆ.
ಇದನ್ನೂ ಓದಿ: Buget 2021: ಹೊಸತಾಗಿ 100 ಸೈನಿಕ ಶಾಲೆ, 750 ಏಕಲವ್ಯ ಮಾದರಿ ವಸತಿ ಶಾಲೆ ಅಭಿವೃದ್ಧಿಗೆ ಯೋಜನೆ
Published On - 10:33 am, Tue, 1 February 22