ನವದೆಹಲಿ: ಮೂಲಸೌಕರ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹೊಸ ವೇಗ ನೀಡಲು ರಾಷ್ಟ್ರೀಯ ಬ್ಯಾಂಕ್ ಎಂಬ ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆಯನ್ನು ಭಾರತ ಸರ್ಕಾರ ಸ್ಥಾಪಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಮಾಹಿತಿ ನೀಡಿದ್ದಾರೆ.
20,000 ಕೋಟಿ ರೂಪಾಯಿ ಬಂಡವಾಳದೊಂದಿಗೆ ರಾಷ್ಟ್ರೀಯ ಬ್ಯಾಂಕ್ ಸ್ಥಾಪನೆ ಆಗಲಿದೆ. ಮೂರು ವರ್ಷಗಳಲ್ಲಿ ₹ 5 ಲಕ್ಷ ಕೋಟಿ ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ನಿರ್ಮಲಾ ಹೇಳಿದ್ದಾರೆ.
ಅಭಿವೃದ್ಧಿ ಹಣಕಾಸು ಸಂಸ್ಥೆಯನ್ನು ಸ್ಥಾಪನೆ ಮಾಡಲು ಈಗಾಗಲೇ ವಿಧೇಯಕ ಸಿದ್ಧಪಡಿಸಲಾಗಿದ್ದು, ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಅದನ್ನು ಮಂಡನೆ ಮಾಡಲಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ರಾಷ್ಟ್ರೀಯ ಬ್ಯಾಂಕ್ನಿಂದ ಹಣ ನೀಡಲಾಗುತ್ತದೆ ಎಂದು ನಿರ್ಮಲಾ ಮಾಹಿತಿ ನೀಡಿದರು.
Budget 2021 LIVE: ಬೆಂಗಳೂರು ಮೆಟ್ರೊ 2ಎ, 2ಬಿ ಯೋಜನೆಯಡಿ 58.19 ಕಿಮೀ ವಿಸ್ತರಣೆಗೆ ಅನುದಾನ ಘೋಷಣೆ