Budget 2022: ವಿದ್ಯುತ್, ಸಾರಿಗೆ, ಮೂಲಸೌಕರ್ಯದಲ್ಲಿ ಹಲವು ಪಟ್ಟು ವೃದ್ಧಿ: ಆರ್ಥಿಕ ಸಮೀಕ್ಷೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು 2021-22ರ ಆರ್ಥಿಕ ಸಮೀಕ್ಷೆಯಲ್ಲಿ ತನ್ನ ಸಾಧನೆಯನ್ನು ಬಿಂಬಿಸಿದೆ. ದೇಶದಲ್ಲಿ ಒಟ್ಟಾರೆ ವಿದ್ಯುತ್ ವಿತರಣೆ ಮತ್ತು ಸಾರಿಗೆಯ ಮೂಲಸೌಕರ್ಯ ಹೇಗೆ ಬದಲಾವಣೆಯಾಗಿದೆ ಎನ್ನುವುದನ್ನೂ ಕೇಂದ್ರವು ಆರ್ಥಿಕ ಸಮೀಕ್ಷೆಯಲ್ಲಿ ಬಿಂಬಿಸಿದೆ.

Budget 2022: ವಿದ್ಯುತ್, ಸಾರಿಗೆ, ಮೂಲಸೌಕರ್ಯದಲ್ಲಿ ಹಲವು ಪಟ್ಟು ವೃದ್ಧಿ: ಆರ್ಥಿಕ ಸಮೀಕ್ಷೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಸರ್ಕಾರ
ವಿದ್ಯುತ್ ಸಂಪರ್ಕದಲ್ಲಿ 2012 ಮತ್ತು 2021ರಲ್ಲಿ ಆಗಿರುವ ವ್ಯತ್ಯಾಸ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 31, 2022 | 9:41 PM

ಕೇಂದ್ರ ಸರ್ಕಾರವು ಸೋಮವಾರ ಪ್ರಕಟಿಸಿದ ಆರ್ಥಿಕ ಸಮೀಕ್ಷೆ 2021-22ರಲ್ಲಿ (National Economic Survey) ಹಲವು ಕುತೂಹಲಕರ ಅಂಶಗಳು ಬೆಳಕಿಗೆ ಬಂದಿವೆ. ದೇಶದ ಒಟ್ಟಾರೆ ವಿದ್ಯುತ್ ಬಳಕೆ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಗೋಚರಿಸಿವೆ. ‘ಅಭಿವೃದ್ಧಿ’ ಎನ್ನುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೂಲಮಂತ್ರವಾಗಿತ್ತು. ಕೇಂದ್ರ ಸರ್ಕಾರವು 2021-22ರ ಆರ್ಥಿಕ ಸಮೀಕ್ಷೆಯಲ್ಲಿ ತನ್ನ ಸಾಧನೆಯನ್ನು ಬಿಂಬಿಸಿದೆ. ದೇಶದಲ್ಲಿ ಒಟ್ಟಾರೆ ವಿದ್ಯುತ್ ವಿತರಣೆ ಮತ್ತು ಸಾರಿಗೆಯ ಮೂಲಸೌಕರ್ಯ ಹೇಗೆ ಬದಲಾವಣೆಯಾಗಿದೆ ಎನ್ನುವುದನ್ನೂ ಕೇಂದ್ರವು ಆರ್ಥಿಕ ಸಮೀಕ್ಷೆಯಲ್ಲಿ ಬಿಂಬಿಸಿದೆ.

ಭಾರತದಲ್ಲಿರುವ ವಿಮಾನ ನಿಲ್ದಾಣಗಳು ನವೆಂಬರ್ 2016ರ ವೇಳೆಗೆ ಭಾರತದಲ್ಲಿ ಕಾರ್ಯಾಚರಣೆಗೆ ಯೋಗ್ಯವೆನಿಸಿದ 62 ವಿಮಾನ ನಿಲ್ದಾಣಗಳಿದ್ದವು. ಮೋದಿ ಸರ್ಕಾರವು ಉಡಾನ್ ಯೋಜನೆ ಆರಂಭಿಸಿ, ದೇಶದ ವಿವಿಧೆಡೆ ಇರುವ ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಮುಂದಾಯಿತು. ಪ್ರಸ್ತುತ ದೇಶದಲ್ಲಿ 130 ಕಾರ್ಯಾಚರಣೆಗೆ ಯೋಗ್ಯ ಎನಿಸುವ ವಿಮಾನ ನಿಲ್ದಾಣಗಳಿವೆ. ಹಲವು ವರ್ಷಗಳಲ್ಲಿ ಆಗಿರುವ ಬದಲಾವಣೆಯನ್ನು ಮೇಲಿನ ಚಿತ್ರಗಳು ಬಿಂಬಿಸುತ್ತವೆ.

ವಾಣಿಜ್ಯ ಬ್ಯಾಂಕ್​ ಶಾಖೆಗಳು ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ವಾಣಿಜ್ಯ ಬ್ಯಾಂಕ್ ಶಾಖೆಗಳ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಮಾರ್ಚ್ 2011ರ ಅವಧಿಯಲ್ಲಿ ದೇಶದಲ್ಲಿದ್ದ ಒಟ್ಟು ಬ್ಯಾಂಕ್ ಶಾಖೆಗಳ ಸಂಖ್ಯೆ 74,130. ಮಾರ್ಚ್ 2021ರ ವೇಳೆಗೆ ಇದು 1.22 ಲಕ್ಷದಷ್ಟು ಹೆಚ್ಚಾಗಿದೆ. ಭಾರತೀಯ ರಿಸರ್ವ್​ ಬ್ಯಾಂಕ್​ನಿಂದ ಈ ಮಾಹಿತಿ ಪಡೆದುಕೊಂಡಿರುವುದಾಗಿ ವರದಿಯು ತಿಳಿಸಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದ ಒಟ್ಟು ಬ್ಯಾಂಕ್​ ಶಾಖೆಗಳ ಸಂಖ್ಯೆಯಲ್ಲಿ ಶೇ 60ರಷ್ಟು ಏರಿಕೆ ಕಂಡುಬಂದಿದೆ.

ನವೀಕರಿಸಬಹುದಾದ ಇಂಧನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಸೌರಶಕ್ತಿ ಬಳಕೆ ಹೆಚ್ಚಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರದ ದತ್ತಾಂಶಗಳ ಪ್ರಕಾರ 2014ರಲ್ಲಿ ದೇಶದಲಲ್ಲಿ 2632 ಮೆಗಾವ್ಯಾಟ್ ಸೌರಶಕ್ತಿಯ ಬಳಕೆಯಿತ್ತು. 2021ರ ವೇಳೆಗೆ ಈ ಪ್ರಮಾಣವು 40,000 ಮೆಗಾವ್ಯಾಟ್​ಗೆ ಹೆಚ್ಚಾಯಿತು. ಉಪಗ್ರಹದ ಮೂಲಕ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಗುಜರಾತ್​ನಲ್ಲಿ ಸೌರಶಕ್ತಿಯ ಬಳಕೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಅತಿಹೆಚ್ಚಿನ (7355 ಮೆಗಾವ್ಯಾಟ್) ಪ್ರಮಾಣದ ಸೌರಶಕ್ತಿ ಬಳಕೆಯಾಗುತ್ತಿದೆ. ನಂತರದ ಸ್ಥಾನದಲ್ಲಿ ರಾಜಾಸ್ಥಾನ (5732 ಮೆಗಾವ್ಯಾಟ್) ಇದೆ. ಗುಜರಾತ್​ನಲ್ಲಿ 4430 ಮೆಗಾವ್ಯಾಟ್ ಸೌರವಿದ್ಯುತ್ ಬಳಕೆಯಾಗುತ್ತಿದೆ.

ಭಾರತದಲ್ಲಿ ರಾತ್ರಿ ಬೆಳಕು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನಾ ಸೌಭಾಗ್ಯ ಕಾರ್ಯಕ್ರಮವನ್ನು ಅಕ್ಟೋಬರ್ 2017ರಂದು ಆರಂಭಿಸಿತು. ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಯೋಜನೆಯನ್ನು ವೇಗವಾಗಿ ಅನುಷ್ಠಾನಗೊಳಿಸಲಾಯಿತು. ಅನಂತರ ದೇಶದಲ್ಲಿ 2.81 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆತಿದೆ.

ರಾಷ್ಟ್ರೀಯ ಹೆದ್ದಾರಿ ಜಾಲ ಆಗಸ್ಟ್ 2011ರಲ್ಲಿ ದೇಶದಲ್ಲಿ 71,882 ಕಿಮೀ ರಾಷ್ಟ್ರೀಯ ಹೆದ್ದಾರಿಗಳಿದ್ದವು. 10 ವರ್ಷಗಳ ಅವಧಿಯಲ್ಲಿ ಈ ಪ್ರಮಾಣ ಬಹುತೇಕ ದ್ವಿಗುಣಗೊಂಡಿದೆ. ಪ್ರಸ್ತುತ ದೇಶದಲ್ಲಿ 1.40 ಲಕ್ಷ ಕಿಲೋಮೀಟರ್ ಹೆದ್ದಾರಿ ಜಾಲವಿದೆ ಎಂದು ರಾಷ್ಟ್ರೀಯ ಆರ್ಥಿಕ ಸಮೀಕ್ಷೆಯ ಮಾಹಿತಿ ತಿಳಿಸಿದೆ.

ಭಾರತದಲ್ಲಿ ಬಿತ್ತನೆಯಾಗಿರುವ ಕೃಷಿಭೂಮಿ ಭಾರತದಲ್ಲಿ ಬಿತ್ತನೆ ಕ್ಷೇತ್ರವು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. 2005-06ರಲ್ಲಿ ದೇಶದ 12.7 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿತ್ತು. 2020-21ರ ಅವಧಿಯಲ್ಲಿ ಈ ಪ್ರದೇಶವು 15.6 ಕೋಟಿ ಹೆಕ್ಟೇರ್​ಗೆ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಆಹಾರಧಾನ್ಯ, ಔಷಧೀಯ ಸಸ್ಯಗಳು, ತೋಟಗಾರಿಕೆ ಬೆಳೆಗಳು, ತರಕಾರಿ, ಹೂಗಳು, ಮುಂಗಾರು ಮತ್ತು ಹಿಂಗಾರು ಬೆಳೆಗಳನ್ನು ಬೆಳೆಯಲಾಗುತ್ತದೆ.

ಇದನ್ನೂ ಓದಿ: Economic Survey 2022: ಆಶಾದಾಯಕ ಬಜೆಟ್​ನ ಮುನ್ಸೂಚನೆ ನೀಡಿದ ಆರ್ಥಿಕ ಸಮೀಕ್ಷೆ, ಶೇ 9 ದಾಟಿದ ಜಿಡಿಪಿ ಅಂದಾಜು ಇದನ್ನೂ ಓದಿ: Budget 2022: ಬಜೆಟ್​ಗೆ ಪೂರ್ವವಾಗಿ ಜ. 31ಕ್ಕೆ ಸಂಸತ್​ನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ; ಏನಿದು ಆರ್ಥಿಕ ಸಮೀಕ್ಷೆ?