ಕ್ಯಾಪಿಟಲ್ ಗೇನ್ ಟ್ಯಾಕ್ಸ್ ದರ ಬದಲಾವಣೆ; ಇಂಡೆಕ್ಸೇಶನ್ ಬೆನಿಫಿಟ್ ಇವುಗಳ ಬಗ್ಗೆ ನೀವು ತಿಳಿಯಬೇಕಾದ್ದು

Union Budget 2024, a look at taxes: ಷೇರು ಇತ್ಯಾದಿ ಕೆಲ ಪ್ರಮುಖ ಲಿಸ್ಟೆಟ್ ಹಣಕಾಸು ಆಸ್ತಿಗಳ ಮೇಲಿನ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ದರಗಳನ್ನು ಹೆಚ್ಚಿಸಲಾಗಿದೆ. ರಿಯಲ್ ಎಸ್ಟೇಟ್, ಭೌತಿಕ ಚಿನ್ನ ಇತ್ಯಾದಿ ಅನ್​ಲಿಸ್ಟೆಡ್ ಆಸ್ತಿಗಳಿಗೆ ಎಲ್​ಟಿಸಿಜಿ ದರವನ್ನು ಶೇ. 20ರಿಂದ ಶೇ 12.50ಕ್ಕೆ ಇಳಿಸಲಾಗಿದೆ. ಆದರೆ, ಇಂಡೆಕ್ಸೇಶನ್ ಬೆನಿಫಿಟ್ ಅನ್ನು ತೆಗೆದುಹಾಕಲಾಗಿದೆ. ಇದರಿಂದ ತೆರಿಗೆ ಬಾಧ್ಯತೆ ಹೆಚ್ಚುತ್ತದೆ.

ಕ್ಯಾಪಿಟಲ್ ಗೇನ್ ಟ್ಯಾಕ್ಸ್ ದರ ಬದಲಾವಣೆ; ಇಂಡೆಕ್ಸೇಶನ್ ಬೆನಿಫಿಟ್ ಇವುಗಳ ಬಗ್ಗೆ ನೀವು ತಿಳಿಯಬೇಕಾದ್ದು
ರಿಯಲ್ ಎಸ್ಟೇಟ್
Follow us
|

Updated on: Jul 24, 2024 | 5:01 PM

ಬಜೆಟ್​ನಲ್ಲಿ ವಿವಿಧ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ದರಗಳಲ್ಲಿ ಬದಲಾವಣೆ ಮಾಡಲಾಗಿದೆ. ಬಹಳಷ್ಟು ಜನರಿಗೆ ಗೊಂದಲಗಳೂ ಇವೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಷೇರು ಇತ್ಯಾದಿ ಕೆಲ ಹಣಕಾಸು ಆಸ್ತಿಗಳ ಮೇಲಿನ ಅಲ್ಪಾವಧಿ ಲಾಭ ಹೆಚ್ಚಳ ತೆರಿಗೆ ಮತ್ತು ದೀರ್ಘಾವಧಿ ಲಾಭ ಹೆಚ್ಚಳ ತೆರಿಗೆಯನ್ನು ಹೆಚ್ಚಿಸಲಾಗಿದೆ. ಎಸ್​ಟಿಸಿಜಿ ಶೇ. 15ರಷ್ಟು ಇದ್ದದ್ದು ಶೇ. 20ಕ್ಕೆ ಏರಿಸಲಾಗಿದೆ. ಶೇ. 10ರಷ್ಟಿದ್ದ ಎಲ್​ಟಿಸಿಜಿಯನ್ನು ಶೇ. 12.50ಕ್ಕೆ ಹೆಚ್ಚಿಸಲಾಗಿದೆ. ಡೆಟ್ ಮ್ಯೂಚುವಲ್ ಫಂಡ್, ಈಕ್ವಿಟಿಯೇತರ ಮ್ಯೂಚುವಲ್ ಫಂಡ್​ಗಳಿಗೆ ಹಿಂದಿನ ಕ್ಯಾಪಿಟಲ್ ಗೇನ್ ದರಗಳೇ ಮುಂದುವರಿಯುತ್ತವೆ. ಅದರೆ, ಇನ್ಕಮ್ ಟ್ಯಾಕ್ಸ್​ನ ಸ್ಲಾಬ್ ದರಗಳು ಅನ್ವಯ ಆಗುತ್ತವೆ.

ಇಲ್ಲಿ 12 ತಿಂಗಳ ಅವಧಿಯೊಳಗೆ ಈ ಲಿಸ್ಟೆಡ್ ಆಸ್ತಿ ಮಾರಿದರೆ ಅದಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ದರ ಅನ್ವಯ ಆಗುತ್ತದೆ. 12 ತಿಂಗಳ ಬಳಿಕ ಮಾರಿದರೆ ಅದಕ್ಕೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ದರ ಅನ್ವಯ ಆಗುತ್ತದೆ.

ಎಲ್​ಟಿಸಿಜಿ ವಿನಾಯಿತಿ ಮಿತಿ ಒಂದು ಲಕ್ಷದಿಂದ 1.25 ಲಕ್ಷ ರೂಗೆ ಹೆಚ್ಚಳ

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ನೀವು ಒಂದು ವರ್ಷದ ಬಳಿಕ ಮಾರಿದರೆ ಎಲ್​ಟಿಸಿಜಿ ದರ ಅನ್ವಯ ಆಗುತ್ತದೆ. ಹಾಗಂತ ಎಲ್ಲಕ್ಕೂ ದರ ಇರುವುದಿಲ್ಲ. ನಿಮ್ಮ ಎಲ್​ಟಿಸಿಜಿ ಮೊತ್ತ ಒಂದು ವರ್ಷದಲ್ಲಿ ಒಂದು ಲಕ್ಷ ರೂ ಒಳಗೆ ಇದ್ದರೆ ಅದಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಈ ಮಿತಿಯನ್ನು ಬಜೆಟ್​ನಲ್ಲಿ 1.25 ಲಕ್ಷ ರೂ ಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಹೊಸ ವಾತ್ಸಲ್ಯ ಎನ್​ಪಿಎಸ್ ಯೋಜನೆ; ಸಣ್ಣ ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರಿಗಿದೋ ಅವಕಾಶ

ಜಮೀನು, ಚಿನ್ನ ಇತ್ಯಾದಿಗೆ ಎಲ್​ಟಿಸಿಜಿ ದರ ಇಳಿಕೆ

ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲದ ಷೇರುಗಳು, ಜಮೀನು, ಬಾಂಡ್, ಚಿನ್ನ ಮೊದಲಾದ ಹಣಕಾಸು ಆಸ್ತಿಗಳಿಗೆ ಎಲ್​ಟಿಸಿಜಿ ದರದಲ್ಲಿ ಇಳಿಕೆ ಮಾಡಲಾಗಿದೆ. ಈ ಹಿಂದೆ ಶೇ. 20ರಷ್ಟಿದ್ದ ಎಲ್​ಟಿಸಿಜಿಯನ್ನು ಶೇ. 12.50ಕ್ಕೆ ಇಳಿಸಲಾಗಿದೆ. ಇಲ್ಲಿ 24 ತಿಂಗಳೊಳಗೆ ಮಾರಿದರೆ ಎಸ್​ಟಿಸಿಜಿ ದರ ಅನ್ವಯ ಆಗುತ್ತದೆ. ಅಂದರೆ ಕನಿಷ್ಠ ಎರಡು ವರ್ಷ ನೀವು ಹೂಡಿಕೆ ಮಾಡಿರಬೇಕು.

ಭೌತಿಕ ಚಿನ್ನವಾದರೆ ಎಲ್​ಟಿಸಿಜಿ ದರ ಅನ್ವಯ ಆಗಬೇಕಾದರೆ ಅದನ್ನು ಖರೀದಿಸಿ ಮೂರು ವರ್ಷವಾಗಿರಬೇಕು. ಇಲ್ಲಿದಿದ್ದರೆ ಸ್ಲ್ಯಾಬ್ ದರಗಳು ಅನ್ವಯ ಆಗುತ್ತದೆ.

ರಿಯಲ್ ಎಸ್ಟೇಟ್ ವ್ಯವಹಾರಕ್ಕಿಲ್ಲ ಇಂಡೆಕ್ಸೇಶನ್ ಲಾಭ

ರಿಯಲ್ ಎಸ್ಟೇಟ್​ನಲ್ಲಿ ಎಲ್​ಟಿಸಿಜಿಯನ್ನು ಶೇ. 20ರಿಂದ ಶೇ. 12.50ಕ್ಕೆ ಇಳಿಸಲಾಗಿದೆ. ಅದರೆ, ಇಂಡೆಕ್ಸೇಶನ್ ಬೆನಿಫಿಟ್ ಅನ್ನು ತೆಗೆದುಹಾಕಲಾಗಿದೆ. ಇದೊಂದು ರೀತಿಯಲ್ಲಿ ಆ ಕಡೆ ಕೊಟ್ಟಿದ್ದನ್ನು ಈ ಕಡೆಯಿಂದ ಕಿತ್ತುಕೊಂಡಂತೆ ಎನ್ನಬಹುದು. ಇಂಡೆಕ್ಸೇಶನ್ ಬೆನಿಫಿಟ್ ಎಂದರೆ ಹಣದ ಮೌಲ್ಯ ಕಡಿಮೆ ಆಗಿರುವುದನ್ನು ಪರಿಗಣಿಸಿ ಅದರ ಖರೀದಿ ಮೌಲ್ಯವನ್ನು ಮರುಲೆಕ್ಕ ಮಾಡುವುದು. ಆಗ ನಿಮಗೆ ವಾಸ್ತವ ಲಾಭ ಎಷ್ಟು ಎಂಬುದು ಗೊತ್ತಾಗುತ್ತದೆ. ಉದಾಹರಣೆಗೆ ಈ ಕೆಳಕಂಡ ಮನೆ ಖರೀದಿಯ ಲೆಕ್ಕಾಚಾರ ಗಮನಿಸಬಹುದು.

ಇದನ್ನೂ ಓದಿ: ಆಮದು ಸುಂಕ ಕಡಿತದಿಂದ ಚಿನ್ನದ ಬೆಲೆ ಎಷ್ಟು ಕಡಿಮೆ ಆಗಬಹುದು? 10 ಗ್ರಾಮ್​ಗೆ 6,000 ರೂವರೆಗೂ ಬೆಲೆ ಇಳಿಕೆ ಸಾಧ್ಯತೆ

ನೀವು 2000ರಲ್ಲಿ 50,00,000 ರೂ ಮೊತ್ತಕ್ಕೆ ಒಂದು ಮನೆ ಖರೀದಿಸಿರುತ್ತೀರಿ. ಅದರ ಬೆಲೆ ಈಗ 2,50,00,000 ರೂ ಆಗಿರಬಹುದು. ಈ ಬೆಲೆಗೆ ನೀವು ಮಾರಲು ನಿರ್ಧರಿಸುತ್ತೀರಿ. ಈಗ ಇಂಡೆಕ್ಸೇಶನ್ ಅಂಶದ ಪ್ರಕಾರ ನಿಮ್ಮ 50 ಲಕ್ಷ ರೂ ಹಣದ ಮೌಲ್ಯ ಈಗ 1.9 ಕೋಟಿ ರೂ ಆಗಿರುತ್ತದೆ. ಅಂದರೆ ನಿಮ್ಮ ಹೂಡಿಕೆಯ ವಾಸ್ತವ ಮೌಲ್ಯ 1.9 ಕೋಟಿ ರೂ. ಈಗ ನೀವು ಆ ಆಸ್ತಿ ಮಾರಿದಾಗ ಎರಡು ಕೋಟಿ ರೂ ಲಾಭ ಎಂದಾದರೂ ಇಂಡೆಕ್ಸೇಶನ್ ಅಂಶ ಗಣಿಸಿದಾಗ 2.5 ಕೋಟಿ – 1.9 ಕೋಟಿ = 60 ಲಕ್ಷ ರೂ ಆಗುತ್ತದೆ. ಈ 60 ಲಕ್ಷ ರೂಗೆ ಶೇ. 20 ಎಲ್​ಟಿಸಿಜಿ ತೆರಿಗೆ ಅನ್ವಯ ಮಾಡಿದರೆ 12 ಲಕ್ಷ ರೂ ಆಗುತ್ತದೆ.

ಇಂಡೆಕ್ಸೇಶನ್ ಬೆನಿಫಿಟ್ ಇಲ್ಲವಾದರೆ ಎಷ್ಟು..?

ಇಂಡೆಕ್ಸೇಶನ್ ಅಂಶವನ್ನು ಪರಿಗಣಿಸದೇ ಹೋದರೆ ಇಲ್ಲಿ ಎರಡು ಕೋಟಿ ರೂ ಲಾಭವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಶೇ. 12.5ರಷ್ಟು ತೆರಿಗೆ ಎಂದರೆ 25 ಲಕ್ಷ ರೂ ತೆರಿಗೆ ಕಟ್ಟಬೇಕಾಗುತ್ತದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ