AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget Expectations: ಸಂಬಳ ಪಡೆಯುವ ಮಧ್ಯಮವರ್ಗದವರಿಗೆ ಈ ಬಾರಿಯ ಬಜೆಟ್ ನಿರೀಕ್ಷೆಗಳಿವು

Middle Class and Salaried Classes: ಫೆಬ್ರುವರಿ 1ರಂದು ಮಂಡನೆಯಾಗುವ ಮಧ್ಯಂತರ ಬಜೆಟ್​ನಿಂದ ಸಂಬಳದಾರ ಮತ್ತು ಮಧ್ಯಮವರ್ಗದವರಿಗೆ ಬಹಳ ನಿರೀಕ್ಷೆ ಇದೆ. 50,000 ರೂ ಇರುವ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಒಂದು ಲಕ್ಷ ರೂಗೆ ಹೆಚ್ಚಿಸಬೇಕೆನ್ನುವ ಅಭಿಪ್ರಾಯ ಇದೆ. ಆದಾಯ ತೆರಿಗೆ ಸೆಕ್ಷನ್ 80ಸಿ, 80ಡಿ ಮೊದಲಾದವುಗಳಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಿತಿ ಹೆಚ್ಚಿಸಬೇಕು.

Budget Expectations: ಸಂಬಳ ಪಡೆಯುವ ಮಧ್ಯಮವರ್ಗದವರಿಗೆ ಈ ಬಾರಿಯ ಬಜೆಟ್ ನಿರೀಕ್ಷೆಗಳಿವು
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 30, 2024 | 12:35 PM

Share

ನವದೆಹಲಿ, ಜನವರಿ 30: ಈ ಬಾರಿಯ ಮಧ್ಯಂತರ ಬಜೆಟ್ ಮಂಡನೆಗೆ ಎರಡು ದಿನ ಮಾತ್ರವೇ ಬಾಕಿ ಇದೆ. ಮಧ್ಯಂತರ ಬಜೆಟ್ (Interim Budget) ಆದ್ದರಿಂದ ಹೆಚ್ಚಿನ ನಿರೀಕ್ಷೆ ಇಲ್ಲವಾದರೂ ಆದಾಯ ತೆರಿಗೆ ವಿಚಾರದಲ್ಲಿ ಕೆಲವಿಷ್ಟು ಪರಿಷ್ಕರಣೆಗಳಾಗಬೇಕು ಎನ್ನುವ ಅಭಿಪ್ರಾಯ ಇದೆ. ಅದರಲ್ಲೂ ಸಂಬಳದಾರರಾಗಿರುವ ಮಧ್ಯಮವರ್ಗದ ಜನರು ಸಾಕಷ್ಟು ತೆರಿಗೆ ವಿನಾಯಿತಿಯ ನೆರವನ್ನು ಯಾಚಿಸುತ್ತಿದ್ದಾರೆ. ಮಧ್ಯಮವರ್ಗದವರಿಗೆ ಹೆಚ್ಚಾಗಿರುವ ತೆರಿಗೆ ಹೊರೆಯನ್ನು ನಿರ್ಮಲಾ ಸೀತಾರಾಮನ್ (Nirmala Sitharaman) ಇಳಿಸುವ ಪ್ರಯತ್ನ ಮಾಡಿಯಾರಾ? ಸಂಬಳದಾರರು ಅವರ ಬಜೆಟ್​ನಿಂದ ಅಪೇಕ್ಷಿಸುತ್ತಿರುವುದೇನು? ಇಲ್ಲಿದೆ ಡೀಟೇಲ್ಸ್.

ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸಿ

ಸಂಬಳದ ಆದಾಯ ಇರುವವರಿಗೆ 2018ರಲ್ಲಿ ಮೊದಲ ಬಾರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯ ತರಲಾಯಿತು. ಆಗ 40,000 ರೂ ಮೊತ್ತದ ಡಿಡಕ್ಷನ್ ಅವಕಾಶ ಇತ್ತು. 2019ರಲ್ಲಿ ಅದನ್ನು 50,000 ರೂಗೆ ಹೆಚ್ಚಿಸಲಾಯಿತು. ಇದೀಗ ಇದನ್ನು ಒಂದು ಲಕ್ಷ ರೂಗೆ ಹೆಚ್ಚಿಸಬೇಕು ಎನ್ನುವ ಅಭಿಪ್ರಾಯ ಇದೆ. ಕಳೆದ ವರ್ಷದಿಂದ ಜಾರಿಗೆ ಬಂದಿರುವ ಹೊಸ ಐಟಿ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯ ಸೇರಿಸಲಾಗಿದೆ. ಹೀಗಾಗಿ, ಅದರ ಮಿತಿಯನ್ನು ಹೆಚ್ಚಿಸುವ ಕೂಗು ಕೇಳಿಬರುತ್ತಿದೆ.

ಸೆಕ್ಷನ್ 80ಸಿ ಮಿತಿ ಮತ್ತು ವ್ಯಾಪ್ತಿ ಹೆಚ್ಚಿಸಿ

ಹಳೆಯ ಟ್ಯಾಕ್ಸ್ ಸಿಸ್ಟಂನಲ್ಲಿ ಬಹಳ ಜನಪ್ರಿಯವಾಗಿರುವುದು ಸೆಕ್ಷನ್ 80 ಸಿ. ಇದರಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂನಷ್ಟು ಆದಾಯಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್, ಟ್ಯೂಷನ್ ಫೀ, ಹೋಮ್ ಲೋನ್ ಇಎಂಐ ಇತ್ಯಾದಿಗೆ ಮಾಡುವ ವೆಚ್ಚಕ್ಕೆ ತೆರಿಗೆ ವಿನಾಯಿತಿ ಕೇಳಬಹುದು. ಈಗ ಇಂತಹ ವೆಚ್ಚ ಬಹಳಷ್ಟು ಹೆಚ್ಚಾಗಿರುವುದರಿಂದ ಒಂದೂವರೆ ಲಕ್ಷ ರೂ ಇರುವ ಮಿತಿಯನ್ನು 3 ಲಕ್ಷ ರೂಗೆ ಏರಿಸಬೇಕೆಂಬ ಒತ್ತಾಯವನ್ನು ಸಂಬಳದಾರರು ಮಾಡುತ್ತಾ ಬಂದಿದ್ದಾರೆ.

ಇದನ್ನೂ ಓದಿ: Economy: ಮುಂದಿನ ಏಳು ವರ್ಷ ಆರ್ಥಿಕತೆಯ ಹಂತ ಹಂತದ ಬೆಳವಣಿಗೆ ಸಾಧ್ಯತೆ ಬಿಚ್ಚಿಟ್ಟ ಹಣಕಾಸು ಸಚಿವಾಲಯ

ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿ

ಆದಾಯ ತೆರಿಗೆಯ 80ಡಿ ಸರಣಿಯ ಸೆಕ್ಷನ್​ಗಳಲ್ಲಿ ಆರೋಗ್ಯ ವೆಚ್ಚಕ್ಕೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇದೆ. ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ವರ್ಷಕ್ಕೆ 25,000 ರೂ ವೆಚ್ಚಕ್ಕೆ ವಿನಾಯಿತಿ ಇದೆ. ಇದನ್ನು 50,000 ರೂಗೆ ಹೆಚ್ಚಿಸಬೇಕೆಂಬ ಅಭಿಪ್ರಾಯ ಇದೆ.

ಟ್ಯಾಕ್ಸ್ ಸ್ಲ್ಯಾಬ್ ಪರಿಷ್ಕರಿಸಿ

2013ರಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಯಲ್ಲಿ ಟ್ಯಾಕ್ಸ್ ಸ್ಲ್ಯಾಬ್ ತರಲಾಯಿತು. ಆಗ ಬೇಸಿಕ್ ಎಕ್ಸೆಂಪ್ಷನ್ ಮಿತಿಯಾಗಿ 2 ಲಕ್ಷ ರೂ ನಿಗದಿ ಮಾಡಲಾಗಿತ್ತು. ಅಂದರೆ 2 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. 2015ರಲ್ಲಿ ಇದನ್ನು 2.5 ಲಕ್ಷ ರೂಗೆ ಹೆಚ್ಚಿಸಲಾಯಿತು. ಆಗಿನಿಂದಲೂ ಈ ಮೂಲ ತೆರಿಗೆ ವಿನಾಯಿತಿ ಮಿತಿ ಅಷ್ಟೇ ಮೊತ್ತದಲ್ಲಿದೆ. ಆದರೆ, ತೆರಿಗೆಯ ದರವನ್ನು ಮಾತ್ರವೇ ಪರಿಷ್ಕರಿಸಲಾಗಿದೆ.

ಇದನ್ನೂ ಓದಿ: 2019 Budget: 2019ರ ಮಧ್ಯಂತರ ಬಜೆಟ್​ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?

2018ರಲ್ಲಿ ಐದು ಲಕ್ಷ ರೂ ಒಳಗಿನ ಆದಾಯಕ್ಕೆ, ಅಂದರೆ ಎರಡೂವರೆಯಿಂದ ಐದು ಲಕ್ಷ ರೂವರೆಗಿನ ಆದಾಯಕ್ಕೆ ಶೇ 10ರಷ್ಟು ಇದ್ದ ತೆರಿಗೆಯನ್ನು ಶೇ. 5ಕ್ಕೆ ಇಳಿಸಲಾಯಿತು.

2019ರ ಮಧ್ಯಂತರ ಬಜೆಟ್​ನಲ್ಲಿ 12,500 ರೂ ಟ್ಯಾಕ್ಸ್ ರಿಬೇಟ್ ಅವಕಾಶ ಕೊಡಲಾಯಿತು. ಆದರೆ ಇದು 5 ಲಕ್ಷ ರೂವರೆಗಿನ ಆದಾಯದ ಗುಂಪಿನ ವ್ಯಕ್ತಿಗಳಿಗೆ ಕೊಡಲಾದ ಅವಕಾಶ. ಆದರೆ, ತೆರಿಗೆ ಅನ್ವಯವಾಗುವ ಆದಾಯ 5 ಲಕ್ಷ ರೂಗಿಂತ ಹೆಚ್ಚಿರುವವರಿಗೆ ಈ ರಿಬೇಟ್ ಸಿಗುವುದಿಲ್ಲ. ಈಗ ಇದನ್ನು ಪರಿಷ್ಕರಿಸಬೇಕು ಎನ್ನುವ ಅಭಿಪ್ರಾಯ ಇದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ