ನವದೆಹಲಿ, ಜನವರಿ 11: ಮುಂದಿನ ತಿಂಗಳ ಆರಂಭದಲ್ಲಿ (ಫೆ. 1) ಬಜೆಟ್ ಮಂಡನೆಯಾಗಲಿದೆ. ಚುನಾವಣೆಗೆ ಮುಂಚಿನ ಬಜೆಟ್ ಆಗಿರುವ ಇದು ಮಧ್ಯಂತರ ಬಜೆಟ್ (Interim Budget 2024) ಮಾತ್ರವೇ ಆಗಿರುತ್ತದೆ. ನಿಯಮದ ಪ್ರಕಾರ ಮತದಾರರನ್ನು ಸೆಳೆಯುವಂತಹ ಯಾವ ಸ್ಕೀಮ್ ಅನ್ನೂ ಬಜೆಟ್ನಲ್ಲಿ ಪ್ರಕಟಿಸುವಂತಿಲ್ಲ. ಆರ್ಥಿಕ ಸಮೀಕ್ಷೆಯ (economic survey) ವರದಿಯನ್ನೂ ಬಿಡುಗಡೆ ಮಾಡುವಂತಿಲ್ಲ. ಚುನಾವಣೆ ಮುಗಿದು ಹೊಸ ಬಜೆಟ್ ಮಂಡನೆ ಆಗುವವರೆಗೂ ವೆಚ್ಚಕ್ಕೆಂದು ವೋಟ್ ಆನ್ ಅಕೌಂಟ್ ಮಾತ್ರವೇ ಮಧ್ಯಂತರ ಬಜೆಟ್ನ ಗುರಿಯಾಗಿರುತ್ತದೆ.
ಆದಾಗ್ಯೂ ಮಧ್ಯಂತರ ಬಜೆಟ್ನಲ್ಲೂ ಒಂದಷ್ಟು ಮಹತ್ವದ ನಿರ್ಧಾರಗಳಿಗೆ ಅವಕಾಶ ಇರುತ್ತದೆ. ತಜ್ಞರು ಕೆಲ ಪ್ರಮುಖ ಘೋಷಣೆಗಳ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಸಂಭವನೀಯ ಘೋಷಣೆಗಳ ವಿವರ ಇಲ್ಲಿದೆ:
ಆಹಾರ ಬೆಲೆಗಳ ಹಣದುಬ್ಬರ ಬಹಳ ಹೆಚ್ಚಿನ ಮಟ್ಟದಲ್ಲಿ ಇದೆ. ಇದನ್ನು ತಗ್ಗಿಸಲು ಸರ್ಕಾರ ಅಗತ್ಯ ಆಹಾರ ವಸ್ತುಗಳಿಗೆ ರಫ್ತು ಸುಂಕ ವಿಧಿಸುತ್ತದೆ. ಅಂತೆಯೇ, ಕೆಲ ಆಹಾರವಸ್ತುಗಳಿಗೆ ಈ ಸುಂಕದಲ್ಲಿ ವಿನಾಯಿತಿ ನೀಡುತ್ತಿದೆ. ಈ ಸಂಬಂಧ ಬಜೆಟ್ನಲ್ಲಿ ಮಹತ್ವದ ನಿರ್ಧಾರ ಬರುವ ಸಾಧ್ಯತೆ ಇಲ್ಲದಿಲ್ಲ.
ಇದನ್ನೂ ಓದಿ: Inflation: ಡಿಸೆಂಬರ್ನಲ್ಲಿ ಹಣದುಬ್ಬರ ಶೇ. 5.9ಕ್ಕೆ ಏರಿಕೆಯಾಗಿರುವ ಸಾಧ್ಯತೆ: 18 ಆರ್ಥಿಕ ತಜ್ಞರ ಸರಾಸರಿ ಅಂದಾಜು
ಜಾಗತಿಕ ತೈಲಬೆಲೆಯಲ್ಲಿ ಏರಿಳಿತಗಳಾಗುತ್ತಿದ್ದರೂ ಭಾರತದಲ್ಲಿ ಕಳೆದ ಒಂದು ವರ್ಷದಿಂದ ಇಂಧನ ಬೆಲೆ ಸ್ಥಿರವಾಗಿದೆ. ಹೆಚ್ಚಿನ ಮಟ್ಟದಲ್ಲಿರುವ ಇಂಧನ ಬೆಲೆಯನ್ನು ಇಳಿಸುವ ಸಾಧ್ಯತೆ ಇದೆ. ಬಜೆಟ್ನಲ್ಲಿ ಸೆಸ್ ದರ ಕಡಿಮೆ ಮಾಡುವ ಘೋಷಣೆ ಆಗಬಹುದು.
ಈ ಬಾರಿಯ ಬಜೆಟ್ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಹಣ ನಿಯೋಜನೆ ಮಾಡಬಹುದು. ದೇಶಾದ್ಯಂತ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತಿದೆ. ಬಹಳ ಹೆಚ್ಚಿನ ಜನರನ್ನು ಮತ್ತು ಸರಕುಗಳನ್ನು ಸಾಗಿಸುವ ರೈಲುಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ.
ಇದನ್ನೂ ಓದಿ: Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್ಪೋರ್ಟ್ಗಳ ದೇಶಗಳ್ಯಾವುವು? ಭಾರತದ ಪಾಸ್ಪೋರ್ಟ್ ಪ್ರಭಾವ ಎಷ್ಟು?
ಕಳೆದ 10 ವರ್ಷಗಳಿಂದ ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ ನೀಡುತ್ತಿರುವ ಹಣ ಹಲವು ಪಟ್ಟು ಹೆಚ್ಚಾಗಿದೆ. 2014-15ರಲ್ಲಿ ಕೃಷಿ ವಲಯಕ್ಕೆ 22,652 ಕೋಟಿ ರೂ ನೀಡಲಾಗಿತ್ತು. 2023-24ರಲ್ಲಿ ಇದು 1.15 ಲಕ್ಷ ಕೋಟಿ ರೂ ಆಗಿದೆ. ಈ ಏರಿಕೆಯ ಟ್ರೆಂಡ್ ಈ ವರ್ಷವೂ ಮುಂದುವರಿಯುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Thu, 11 January 24