ನವದೆಹಲಿ, ಜೂನ್ 24: ಮುಂಬರುವ ಕೇಂದ್ರ ಮುಂಗಡ ಪತ್ರದಲ್ಲಿ (Union Budget 2024) ಆದಾಯ ತೆರಿಗೆ ಪರಿಷ್ಕರಣೆ ಮಾಡಲಾಗುತ್ತದೆ ಎನ್ನುವ ಸುದ್ದಿಗೆ ರೆಕ್ಕೆ ಪುಕ್ಕಗಳು ಅಂಟಿಕೊಂಡಂತಿವೆ. ಒಂದು ವರದಿ ಪ್ರಕಾರ ವರ್ಷಕ್ಕೆ 15 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಪ್ರಮಾಣ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸರ್ಕಾರಿ ಅಧಿಕಾರಿಯೊಬ್ಬರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಈ ಮಟ್ಟದವರೆಗಿನ ಆದಾಯಕ್ಕೆ ತೆರಿಗೆಯನ್ನು ಇಳಿಸುವುದರಿಂದ ಸರ್ಕಾರ ಬೊಕ್ಕಸಕ್ಕೆ ದೊಡ್ಡ ಆದಾಯ ಕೈತಪ್ಪುತ್ತದೆ. ಅಂಥ ಕ್ರಮಕ್ಕೆ ಸರ್ಕಾರ ಮುಂದಾಗುವುದಿಲ್ಲ ಎಂದು ತಮಗೆ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾಗಿ ಸಿಎನ್ಬಿಸಿ ಟಿವಿ18 ಸುದ್ದಿಸಂಸ್ಥೆ ವರದಿ ಮಾಡಿದೆ.
ಸದ್ಯ 15 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 20ರವರೆಗೂ ಟ್ಯಾಕ್ಸ್ ಸ್ಲ್ಯಾಬ್ ದರಗಳಿವೆ. 15 ಲಕ್ಷ ರೂಗಿಂತ ಮೇಲ್ಪಟ್ಟ ಆದಾಯಕ್ಕೆ ತೆರಿಗೆ ಮೊತ್ತ ಶೇ. 30 ಆಗುತ್ತದೆ. ಕೆಲ ವರದಿಗಳ ಪ್ರಕಾರ ಶೇ. 20 ಮತ್ತು ಶೇ. 30ರಷ್ಟು ತೆರಿಗೆ ಇರುವ ಸ್ಲ್ಯಾಬ್ಗಳಲ್ಲಿ ದರ ಪರಿಷ್ಕರಣೆ ಆಗಬಹುದು. ಆದರೆ, ಅಧಿಕೃತವಾಗಿ ಯಾರೂ ಈ ಬಗ್ಗೆ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಏನಾಗುತ್ತೆ? ಈ ಪರಿಣಾಮಗಳನ್ನು ತಿಳಿದಿರಿ
ಇಲ್ಲಿ ಏಳು ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಇದೆ. ಜೊತೆಗೆ 50,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಇರುತ್ತದೆ. ನಿಮ್ಮ ಸಂಬಳ 7.5 ಲಕ್ಷ ರೂ ಒಳಗಿದ್ದರೆ ನೀವು ತೆರಿಗೆ ಕಟ್ಟಬೇಕಿಲ್ಲ.
ಇದನ್ನೂ ಓದಿ: ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು? ಯಾವುದು ಬೆಟರ್? ಎರಡರ ಹೋಲಿಕೆ ಇಲ್ಲಿದೆ…
ಹಳೆಯ ಟ್ಯಾಕ್ಸ್ ರೆಜಿಮೆಯಲ್ಲ ಟ್ಯಾಕ್ಸ್ ರಿಬೇಟ್ ಅವಕಾಶ ಇಲ್ಲ. ಅಲ್ಲಿ ನಿಮಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶಗಳುಂಟು. ಸೆಕ್ಷನ್ 80ಸಿ ಮೊದಲಾದವುಗಳಿಂದ ಒಂದೂವರೆ ಲಕ್ಷ ರೂವರೆಗೆ ಡಿಡಕ್ಷನ್ ಪಡೆಯಬಹುದು. ಎನ್ಪಿಎಸ್, ಮೆಡಿಕಲ್ ಇನ್ಷೂರೆನ್ಸ್ ಮಾಡಿಸಿ ಹೆಚ್ಚುವರಿ ಡಿಡಕ್ಷನ್ ಪಡೆಯಬಹುದು. ಪಿಪಿಎಫ್ ಇತ್ಯಾದಿ ಯೋಜನೆಗಳು ಸೆಕ್ಷನ್ 80 ಸಿ ಅಡಿಗೆ ಬರುತ್ತವೆ.
ಜುಲೈ 22 ಅಥವಾ ಆ ತಿಂಗಳ ಕೊನೆಯ ವಾರದಲ್ಲಿ ಬಜೆಟ್ ಮಂಡನೆ ಆಗಬಹುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ವಿವಿಧ ಇಲಾಖೆಗಳು, ಉದ್ಯಮಗಳ ಪ್ರತಿನಿಧಿಗಳು ಮೊದಲಾದವರನ್ನು ಭೇಟಿಯಾಗಿ ಸಮಾಲೋಚನೆ ನಡೆಸುತ್ತಿದ್ದಾರೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ