Union Budget 2024: ಸೆಕ್ಷನ್ 80ಸಿ ಅಡಿಯಲ್ಲಿ ಡಿಡಕ್ಷನ್ ಮಿತಿ ಹೆಚ್ಚಿಸಲಿ: ಬಜೆಟ್​ನಿಂದ ಆದಾಯ ತೆರಿಗೆ ಪಾವತಿದಾರರಿಂದ ಅಪೇಕ್ಷೆ

Expection of rise in tax deduction: ಜುಲೈ ಕೊನೆಯ ವಾರದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್​ನಿಂದ ಜನಸಾಮಾನ್ಯರ ನಿರೀಕ್ಷೆ ಮತ್ತು ಅಪೇಕ್ಷೆಗಳು ಹಲವಿವೆ. ಆದಾಯ ತೆರಿಗೆ ಪಾವತಿದಾರರು ಬಜೆಟ್​ನಲ್ಲಿ ಒಂದೂವರೆ ಲಕ್ಷ ರೂ ಇರುವ ಟ್ಯಾಕ್ಸ್ ಡಿಡಕ್ಷನ್ ಮಿತಿ ಹೆಚ್ಚಬೇಕೆಂದು ಬಯಸಿದ್ದಾರೆ. ತೆರಿಗೆಗೆ ಅರ್ಹವಾದ ಆದಾಯದ ಮೊತ್ತವನ್ನು ಕಡಿಮೆ ಮಾಡುತ್ತದೆ ಈ ಟ್ಯಾಕ್ಸ್ ಡಿಡಕ್ಷನ್.

Union Budget 2024: ಸೆಕ್ಷನ್ 80ಸಿ ಅಡಿಯಲ್ಲಿ ಡಿಡಕ್ಷನ್ ಮಿತಿ ಹೆಚ್ಚಿಸಲಿ: ಬಜೆಟ್​ನಿಂದ ಆದಾಯ ತೆರಿಗೆ ಪಾವತಿದಾರರಿಂದ ಅಪೇಕ್ಷೆ
ಆದಾಯ ತೆರಿಗೆ
Follow us
|

Updated on: Jun 26, 2024 | 6:51 PM

ನವದೆಹಲಿ, ಜೂನ್ 26: ಪ್ರತೀ ಬಜೆಟ್​ನಲ್ಲೂ ವಿವಿಧ ವಲಯದವರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಬಾರಿಯ ಬಜೆಟ್​ನಲ್ಲಿ (Union Budget 2024) ಆದಾಯ ತೆರಿಗೆ ಪಾವತಿದಾರರು ಬಹಳಷ್ಟು ರಿಯಾಯಿತಿಗಳನ್ನು ಅಪೇಕ್ಷಿಸುತ್ತಿದ್ದಾರೆ. ಅದರಲ್ಲೂ ಹೊಸ ಟ್ಯಾಕ್ಸ್ ರೆಜಿಮೆಯನ್ನು ಬಳಸುತ್ತಿರುವವರು ಸೆಕ್ಷನ್ 80ಸಿ ಅಡಿಯಲ್ಲಿ ಡಿಡಕ್ಷನ್ ಮಿತಿ ಹೆಚ್ಚಾಗಬೇಕೆಂದು ಬಯಸುತ್ತಿದ್ದಾರೆ. ಸದ್ಯ ಈ ಸೆಕ್ಷನ್ ಅಡಿಯಲ್ಲಿ ಒಂದೂವರೆ ಲಕ್ಷ ರೂವರೆಗೂ ಡಿಡಕ್ಷನ್ ಇದೆ. ಅಂದರೆ ಅಷ್ಟು ಮೊತ್ತದಷ್ಟು ಟ್ಯಾಕ್ಸಬಲ್ ಇನ್ಕಮ್ ಅನ್ನು ಕಡಿಮೆ ಮಾಡಬಹುದು. ಈ ಒಂದೂವರೆ ಲಕ್ಷ ರೂ ಡಿಡಕ್ಷನ್ ಮಿತಿಯನ್ನು ಕನಿಷ್ಠ ಎರಡು ಲಕ್ಷಕ್ಕಾದರೂ ಹೆಚ್ಚಿಸಬೇಕು ಎನ್ನುವ ಅಪೇಕ್ಷೆ ಜನಸಾಮಾನ್ಯರದ್ದು.

2014ರಲ್ಲಿ ಅಂದಿನ ಹಣಕಾಸು ಸಚಿರಾಗಿದ್ದ ಅರುಣ್ ಜೇಟ್ಲಿ ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಡಿಡಕ್ಷನ್ ಪ್ರಮಾಣವನ್ನು 1.5 ಲಕ್ಷ ರೂಗೆ ಏರಿಸಿದ್ದು. ಅದು ದಿಟ್ಟ ಕ್ರಮ ಎಂದು ಬಣ್ಣಿತವಾಗಿತ್ತು. ಅದಾದ ಬಳಿಕ ಡಿಡಕ್ಷನ್ ಮಿತಿಯಲ್ಲಿ ಬದಲಾವಣೆಯೇ ಆಗಿಲ್ಲ.

ಬೆಲೆ ಏರಿದೆ, ಜನರ ಆದಾಯವೂ ಏರಿದೆ… ಡಿಡಕ್ಷನ್ ಮಿತಿಯೂ ಏರಲಿ…

ಕಳೆದ ಹತ್ತು ವರ್ಷದಲ್ಲಿ ಜನರ ಆದಾಯದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಹಣದುಬ್ಬರ ಹೆಚ್ಚಾಗಿದೆ. ತೆರಿಗೆ ಹೊರೆಯೂ ಹೆಚ್ಚಾಗುತ್ತಲೆ ಇದೆ. ಆದರೆ, ಟ್ಯಾಕ್ಸ್ ಡಿಡಕ್ಷನ್ ಮಿತಿ ಮಾತ್ರ ಅಷ್ಟೇ ಇದೆ ಎನ್ನುವ ಅಸಮಾಧಾನ ತೆರಿಗೆ ಪಾವತಿದಾರರದ್ದಾಗಿದೆ.

ಇದನ್ನೂ ಓದಿ: 15 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಕಡಿತಗೊಳಿಸಲಾಗುತ್ತಾ? ಇಲ್ಲಿದೆ ಡೀಟೇಲ್ಸ್

ಟ್ಯಾಕ್ಸ್ ಡಿಡಕ್ಷನ್ ಹೇಗೆ ಅನುಕೂಲವಾಗುತ್ತದೆ?

ಟ್ಯಾಕ್ಸ್ ಡಿಡಕ್ಷನ್ ಇಷ್ಟು ಪ್ರಾಮುಖ್ಯತೆ ಹೊಂದಲು ಕಾರಣ ಇದೆ. ನಿಮ್ಮ ಆದಾಯದ ಎಲ್ಲಕ್ಕೂ ತೆರಿಗೆ ಕಟ್ಟಬೇಕಿರುವುದಿಲ್ಲ. ನಿಮ್ಮ ಸಂಬಳದಲ್ಲಿ ಪಿಎಫ್, ಎನ್​ಪಿಎಸ್, ಎಚ್​ಆರ್​ಎ ಇತ್ಯಾದಿ ಕೆಲವನ್ನು ಬಿಟ್ಟು ಉಳಿದ ಮೊತ್ತಕ್ಕೆ ಆದಾಯ ತೆರಿಗೆ ಅನ್ವಯ ಆಗುತ್ತದೆ. ಇದನ್ನು ಟ್ಯಾಕ್ಸಬಲ್ ಇನ್ಕಮ್ ಎನ್ನುತ್ತಾರೆ. ಸೆಕ್ಷನ್ 80 ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಅನ್ನು ಬಳಸಿಕೊಂಡರೆ, ಅಷ್ಟು ಮೊತ್ತದಷ್ಟು ಟ್ಯಾಕ್ಸಬಲ್ ಇನ್ಕಮ್ ಕಡಿಮೆ ಆಗುತ್ತದೆ.

ಉದಾಹರಣೆಗೆ, ನಿಮ್ಮ ಸಂಬಳ ವರ್ಷಕ್ಕೆ 8 ಲಕ್ಷ ರೂ ಇದ್ದು, ಅದರಲ್ಲಿ ಟ್ಯಾಕ್ಸಬಲ್ ಇನ್ಕಮ್ 7 ಲಕ್ಷ ರೂ ಇದೆ ಎಂದಿಟ್ಟುಕೊಳ್ಳಿ. ಇದರಲ್ಲಿ ಒಂದೂವರೆ ಲಕ್ಷ ರೂನಷ್ಟು ಟ್ಯಾಕ್ಸ್ ಡಿಡಕ್ಷನ್ ಬಳಸಿಕೊಂಡರೆ, ನಿಮ್ಮ ಟ್ಯಾಕ್ಸಬಲ್ ಇನ್ಕಮ್ 5.5 ಲಕ್ಷ ರೂ ಆಗುತ್ತದೆ. ಅಂದರೆ ಐದೂವರೆ ಲಕ್ಷ ರೂಗೆ ನೀವು ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ.

ಈ ಐದೂವರೆ ಲಕ್ಷ ರೂನಲ್ಲಿ ಎರಡೂವರೆ ಲಕ್ಷ ರೂಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಎರಡೂವರೆಯಿಂದ ಐದು ಲಕ್ಷ ರೂವರೆಗೆ ಶೇ. 5 ತೆರಿಗೆ ಇರುತ್ತದೆ. ಐದರಿಂದ ಹತ್ತು ಲಕ್ಷ ರೂವರೆಗಿನ ಆದಾಯಕ್ಕೆ ಶೇ. 20 ತೆರಿಗೆ ಇರುತ್ತದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2024: ಏಕೀಕೃತ ಸಬ್ಸಿಡಿ, ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಸೇರಿದಂತೆ ಕೃಷಿ ವಲಯದ ವಿವಿಧ ಬೇಡಿಕೆಗಳಿವು…

ಈಗ 5.5 ಲಕ್ಷ ರೂ ಪೈಕಿ ಎರಡೂವರೆ ಲಕ್ಷ ರೂಗೆ ಶೇ. 5 ತೆರಿಗೆ ಇರುತ್ತದೆ. ಅಂದರೆ 27,500 ರೂ ಆಗುತ್ತದೆ. ಐವತ್ತು ಸಾವಿರ ರೂಗೆ ಶೇ. 20 ಅಂದರೆ 10,000 ರೂ ತೆರಿಗೆ ಬೀಳುತ್ತದೆ. ಒಟ್ಟು 37,500 ತೆರಿಗೆ ಪಾವತಿಸಬೇಕಾಗುತ್ತದೆ.

ಈಗ ಡಿಡಕ್ಷನ್ ಮಿತಿಯನ್ನು ಎರಡು ಲಕ್ಷ ರೂಗೆ ಹೆಚ್ಚಿಸಿದ್ದರೆ ಮೇಲಿನ ನಿದರ್ಶನದಲ್ಲಿ ಆ ವ್ಯಕ್ತಿಗೆ 10,000 ರೂ ತೆರಿಗೆ ಹೊರೆ ಕಡಿಮೆ ಆಗುತ್ತದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ