Budget 2022: ಬಜೆಟ್‌ನಿಂದ ಸ್ವ- ಉದ್ಯೋಗಿಗಳ ನಿರೀಕ್ಷೆಗಳೇನು? ಈ ಬಾರಿ ಅವರ ಕನಸುಗಳು ನನಸಾಗುತ್ತವೆಯೇ?
ಸ್ವ ಉದ್ಯೋಗ ಹಾಗೂ ವ್ಯಾಪಾರ ವರ್ಗದಿಂದ 2022ರ ಕೇಂದ್ರ ಬಜೆಟ್‌ನಿಂದ ಮಾಡುತ್ತಿರುವ ನಿರೀಕ್ಷೆಗಳೇನು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಸುಜಿತ್ ಪಾಲ್ ಅವರು ಉತ್ತರ ಕೋಲ್ಕತ್ತಾದ ಖರ್ಹದಾದಲ್ಲಿ ಕೇಟರಿಂಗ್ ಸರ್ವೀಸ್ ಮಾಡುತ್ತಿದ್ದರು. 2005ನೇ ಇಸವಿಯಲ್ಲಿ ಅವರು ಬಹಳ ನಿರೀಕ್ಷೆಗಳೊಂದಿಗೆ ‘ಫ್ಲೇವರ್ ಕೇಟರರ್ಸ್’ ಅನ್ನು ಪ್ರಾರಂಭಿಸಿದರು. ಮದುವೆ, ಪಾರ್ಟಿಗಳಲ್ಲಿ ಅಡುಗೆ ಮಾಡುತ್ತಿದ್ದರು. ಅವರ ಬಳಿ ಒಂದು ಇಡೀ ತಂಡವೇ ಇತ್ತು. ಇದರ ಜತೆಗೆ ಎಷ್ಟೋ ಜನ ಇವರ ಬಳಿ ಉದ್ಯೋಗ ಪಡೆಯುತ್ತಿದ್ದರು. ಮೂರು-ನಾಲ್ಕು ವರ್ಷಗಳಲ್ಲಿ ಕೆಲಸವು ಚೆನ್ನಾಗಿ ಕೈ ಹತ್ತಿತು, ಮತ್ತು ಜೀವನವು ಉತ್ತಮವಾಗಿ ಸಾಗಲು ಪ್ರಾರಂಭಿಸಿತು. ವಾಸ್ತವವಾಗಿ ಸುಜಿತ್ ಅವರದು ಕೆಳ ಮಧ್ಯಮ ವರ್ಗದ ಬಂಗಾಳಿ ಕುಟುಂಬ. ಮೂವರು ಸದಸ್ಯರಿದ್ದಾರೆ. 2020ರಲ್ಲಿ ಕೊರೊನಾ ಏಕಾಏಕಿ ಪ್ರಾರಂಭವಾದಾಗ ಎಲ್ಲವೂ ಸ್ಥಗಿತಗೊಂಡಿತು. ಸ್ವಂತ ದುಡಿಮೆಯಿಂದಲೇ ಜೀವನ ಸಾಗಿಸುವ ಸುಜಿತ್‌ನಂತಹ ಸ್ವಯಂ ಉದ್ಯೋಗಿಗಳ ಪರಿಸ್ಥಿತಿ (Job Market) ಅತ್ಯಂತ ಕೆಟ್ಟದಾಗಿದೆ.
ಕೊವಿಡ್- 19ಕ್ಕಿಂತ ಮೊದಲು ಅವರು ಪ್ರತಿ ತಿಂಗಳು ಕನಿಷ್ಠ ಎರಡು ಕೆಲಸ ಪಡೆಯುತ್ತಿದ್ದರು. ಅವರ ತಂಡದ ವೇತನವನ್ನೆಲ್ಲ ಪಾವತಿ ಮಾಡಿದ ಮೇಲೆ ತಿಂಗಳಿಗೆ 40,000 ರಿಂದ 50,000 ಸಾವಿರ ರೂಪಾಯಿಗಳು ಉಳಿತಾಯ ಆಗುತ್ತಿತ್ತು. ಈಗ ತಾನೇ ರೆಸ್ಟೊರೆಂಟ್ ಕೂಡ ಮಾಡಬೇಕು ಎಂಬುದು ಸುಜಿತ್ ಪ್ಲಾನ್ ಆಗಿತ್ತು. ಆದರೆ ಈಗ ಪಾರ್ಟಿಗಳಿಗೆ ನಿರ್ಬಂಧ ಇತ್ತು. ಸುಜಿತ್ ಅವರ ಗ್ರಾಹಕರು ಮಧ್ಯಮ ವರ್ಗದವರಾಗಿದ್ದು, ಕೋವಿಡ್‌ನಿಂದ ಬಾಧಿತರಾಗಿದ್ದಾರೆ. ಈಗ ಎರಡು ತಿಂಗಳಲ್ಲಿ ಯಾವ ದೊಡ್ಡ ಕೆಲಸವೂ ಬಂದಿಲ್ಲ. ಉಳಿತಾಯವೆಲ್ಲ ಖಾಲಿ ಆಯಿತು ಮತ್ತು ದೊಡ್ಡ ಕೇಟರರ್‌ಗಳಿಗೆ ಗುತ್ತಿಗೆ ಕೆಲಸ ಸಿಗದಿದ್ದ ಮೇಲೆ ಸುಜಿತ್ ತಮ್ಮದೇ ಪ್ರದೇಶದಲ್ಲಿ ಸಣ್ಣ ಹೋಮ್ ಡೆಲಿವರಿ ನೆಟ್‌ವರ್ಕ್ ಪ್ರಾರಂಭಿಸಿದರು. ಆದರೆ ಇದರಿಂದ ತಿಂಗಳಿಗೆ 10,000 ರೂಪಾಯಿ ಸಿಗುವುದೂ ಕಷ್ಟ ಎಂಬಂತಾಯಿತು.
ಕೆಲಸವಿಲ್ಲದ ಸುಜಿತ್‌ನಂತಹ ಅನೇಕ ಜನರು ಭರವಸೆ ಮತ್ತು ಕನಸುಗಳೊಂದಿಗೆ ವ್ಯಾಪಾರದ ಶುರು ಮಾಡಿದರು ಮತ್ತು ಸ್ವಯಂ ಉದ್ಯೋಗಿಯಾದರು. ಆದರೆ ಕೋವಿಡ್ ಅವರೆಲ್ಲರನ್ನೂ ನಾಶಪಡಿಸಿತು. ಸ್ವಯಂ ಉದ್ಯೋಗ ಎಂದರೆ ಸ್ವಂತವಾಗಿ ಯಾವುದೇ ವ್ಯವಹಾರವನ್ನು ಪ್ರಾರಂಭಿಸುವವರು. ದಿನಗೂಲಿ ಕಾರ್ಮಿಕರು, ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಯಾವುದೇ ಮಹಿಳೆ, ಎಲ್‌ಐಸಿ ಏಜೆಂಟ್ ಅಥವಾ ಬೀದಿ ಬದಿ ವ್ಯಾಪಾರಿ, ಅಂತಹ ಎಲ್ಲರೂ ಸ್ವಯಂ ಉದ್ಯೋಗದ ವ್ಯಾಪ್ತಿಗೆ ಬರುತ್ತಾರೆ. ಸುಜಿತ್ ಅವರಂತೆ ಅನೇಕರಿಗೆ ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿ ಅವರ ವ್ಯವಹಾರವು ನಿಧಾನಗೊಂಡಿರುವುದು ಮಾತ್ರವಲ್ಲ, ಹೆಚ್ಚಿನ ಜನರು ತಮ್ಮ ಸಾಲವನ್ನು ಮರುಪಾವತಿಸಲು ವಿಫಲರಾಗಿದ್ದಾರೆ. ಬಂಡವಾಳದ ಬಹುಪಾಲು ಖಾಲಿಯಾಗಿದೆ. ಸುಜಿತ್ ಖಾಸಗಿ ಲೇವಾದೇವಿದಾರರಿಂದ 5 ಲಕ್ಷ ರೂಪಾಯಿ ಸಾಲವನ್ನೂ ಪಡೆದಿದ್ದರು. ಸಾಲದ ಕಂತುಗಳನ್ನು ಮರುಪಾವತಿಸಲು ವಿಫಲವಾದ ಕಾರಣ ತಮ್ಮ ಉಳಿತಾಯದ ಸ್ವಲ್ಪ ಹಣವನ್ನು ತೆಗೆದು ಕಟ್ಟಿದರು ಮತ್ತು ಸಾಲ ಪಾವತಿಯನ್ನು ಮುಂದೂಡಿದರು.
ಸ್ವಯಂ ಉದ್ಯೋಗಿಗಳು 2013-14ರ ಆರ್ಥಿಕ ಜನಗಣತಿಯ ಪ್ರಕಾರ, ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಮಧ್ಯಮ ಕೈಗಾರಿಕೆ ಘಟಕಗಳ ಸಂಖ್ಯೆ ಕೇವಲ 5,000. ಶೇಕಡಾ 72 ಘಟಕಗಳಲ್ಲಿ ಸ್ವಯಂ ಉದ್ಯೋಗಿಗಳು ಅಥವಾ ಒಬ್ಬರೂ ಉದ್ಯೋಗಿ ಇಲ್ಲದೆ ಕೆಲಸದವರು ಸಿಗದಿರುವುದರಿಂದ ತೊಡಗಿಸಿಕೊಂಡಿದ್ದಾರೆ. ಆದರೆ 2016-17ರಲ್ಲಿ ಸ್ವಯಂ ಉದ್ಯೋಗವು ಒಟ್ಟು ಉದ್ಯೋಗದ ಶೇಕಡಾ 13ರಷ್ಟಿತ್ತು. ಈ ಅನುಪಾತವು 2017-18ರಲ್ಲಿ ಶೇಕಡಾ 15, 2018-19ರಲ್ಲಿ ಶೇಕಡಾ 17, 2019-20ರಲ್ಲಿ ಶೇಕಡಾ 19 ಇತ್ತು. ವಾಸ್ತವವಾಗಿ, ಒಟ್ಟು ಸ್ವಯಂ ಉದ್ಯೋಗ 2016-17ರಲ್ಲಿ 5.4 ಕೋಟಿ ಮತ್ತು 2019-20ರಲ್ಲಿ 7.8 ಕೋಟಿ ಆಗಿತ್ತು.
ಆದರೆ, ಈ ಅವಧಿಯಲ್ಲಿ ಸಂಬಳ ಪಡೆಯುವವರ ಸಂಖ್ಯೆ 8.6 ಕೋಟಿಯಲ್ಲಿ ಸ್ಥಿರವಾಗಿತ್ತು. ಉದ್ಯೋಗದಾತರನ್ನು ಹೊರತುಪಡಿಸಿ ಈ ಸ್ವಯಂ ಉದ್ಯೋಗಿಗಳು ಇತರ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಇದು ತೋರಿಸುತ್ತದೆ. ಅದೇ ಸಮಯದಲ್ಲಿ ಕೇವಲ ಶೇಕಡಾ ನಾಲ್ಕು ಸ್ವಯಂ ಉದ್ಯೋಗಿಗಳು ಇತರ ಜನರಿಗೆ ಉದ್ಯೋಗವನ್ನು ಒದಗಿಸಲು ಸಮರ್ಥರಾಗಿದ್ದಾರೆ. ಆರ್ಥಿಕ ಸಮೀಕ್ಷೆ 2020-21ರ ಪ್ರಕಾರ, ದೇಶದ ಒಟ್ಟು ಉದ್ಯೋಗಿಗಳಲ್ಲಿ ಸುಮಾರು 25 ಕೋಟಿ ಜನರು ಸ್ವಯಂ ಉದ್ಯೋಗಿಗಳಾಗಿದ್ದಾರೆ ಮತ್ತು ಸ್ವಯಂ ಉದ್ಯೋಗವು ಇನ್ನೂ ಉದ್ಯೋಗದ ಪ್ರಮುಖ ಮೂಲವಾಗಿದೆ. ಸ್ವಯಂ ಉದ್ಯೋಗಿಗಳು ಒಟ್ಟು ಉದ್ಯೋಗಿಗಳ ಶೇಕಡಾ 52ರಷ್ಟಿದ್ದಾರೆ.
2021ರ ಬಜೆಟ್‌ನಲ್ಲಿ ಏನು ಕಂಡುಬಂದಿತ್ತು? ಭಾರತದ ಬಜೆಟ್ ಸ್ವಯಂ ಉದ್ಯೋಗಿಗಳಿಗೆ ನೇರವಾಗಿ ಏನನ್ನೂ ನೀಡುವುದಿಲ್ಲ. ಕಳೆದ ಬಜೆಟ್‌ನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಗ್ಗದ ಸಾಲ ನೀಡುವ ಯೋಜನೆ ಜಾರಿಗೆ ತಂದರೂ ಸುಜಿತ್‌ನಂತಹ ಮಧ್ಯಮ ಸಂಸ್ಥೆಯ ಉದ್ಯಮಿಗಳು ಅದಕ್ಕೆ ಅರ್ಹರಾಗಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ಉತ್ಪಾದನಾ ಘಟಕಗಳನ್ನು ಹೊಂದಿರದ ಉದ್ಯಮಿಗಳು ಸಣ್ಣ ಕೈಗಾರಿಕೆಗಳಿಗೆ ಮಾಡಿದ ಯೋಜನೆಗಳಂತಹ ಕ್ರೆಡಿಟ್ ಗ್ಯಾರಂಟಿಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವುದಿಲ್ಲ. ಕಳೆದ ದಶಕದಲ್ಲಿ ಹೆಚ್ಚಿನ ಸ್ವಯಂ ಉದ್ಯೋಗಿಗಳು ಸೇವೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ನೇರ ಸಹಾಯದ ಯಾವುದೇ ಯೋಜನೆ ಇಲ್ಲ.
ಈ ವ್ಯವಹಾರಗಳಲ್ಲಿ ಹೆಚ್ಚಿನವು ಅಸಂಘಟಿತ ಮತ್ತು ನೋಂದಾಯಿಸದ, ಸಾಲಗಳು ಮತ್ತು ಕಡಿಮೆ ಸಹಾಯದ ಕ್ರೆಡಿಟ್ ಗ್ಯಾರಂಟಿಗಳೊಂದಿಗೆ ನೀಡಲಾಗುತ್ತದೆ. ಸರ್ಕಾರವು ನೀಡುವಂಥ ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮದಂತಹ ಏಕೈಕ ಯೋಜನೆ ಅಂದರೆ ಅದು PMEGP. ಇದು ಸ್ವಯಂ ಉದ್ಯೋಗಿಗಳಿಗೆ ಸಾಲ ಸಂಬಂಧಿತ ಸೌಲಭ್ಯಗಳನ್ನು ಒದಗಿಸುತ್ತದೆ. ಸಾಲ ನೀಡುವುದು ಬ್ಯಾಂಕ್‌ಗಳ ಕೈಯಲ್ಲಿದೆ. ಎನ್‌ಪಿಎ ಒತ್ತಡದಿಂದ ಸ್ವಯಂ ಉದ್ಯೋಗಿಗಳು ಬ್ಯಾಂಕ್‌ನಿಂದ ಸಾಲ ಪಡೆಯುವುದು ಯಾವಾಗಲೂ ಕಷ್ಟಕರವಾಗಿದೆ. ಹೀಗಾಗಿ ಖಾಸಗಿ ಲೇವಾದೇವಿದಾರರ ಬಳಿ ಹೋಗಬೇಕಾಗಿದೆ.
ಇದು ಕೇವಲ ಒಂದು ಕನಸು ಸುಜಿತ್‌ನ ಕನಸು ದೊಡ್ಡದಲ್ಲ, ಅವರು ಈಗ ತಮ್ಮ ವ್ಯಾಪಾರವನ್ನು ಮತ್ತೆ ಕಟ್ಟಲು ಬಯಸುತ್ತಾರೆ. ಸರ್ಕಾರ ಎಲ್ಲರಿಗೂ ಆರ್ಥಿಕ ಪ್ಯಾಕೇಜ್ ನೀಡಿದರೆ ಸ್ವಯಂ ಉದ್ಯೋಗಿಗಳಿಗೆ ಏಕೆ ನೀಡಬಾರದು ಎಂದು ಅವರು ಭಾವಿಸುತ್ತಾರೆ. ಅಗ್ಗದ ಸಾಲವನ್ನು ಪಡೆಯಲು ಆಗುವುದಿಲ್ಲವೇ? ಅವರಂತಹ ಕೋಟಿಗಟ್ಟಲೆ ಜನರು ಕೊವಿಡ್‌ನ ಪ್ರಭಾವದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುವ ಕೆಲವು ಯೋಜನೆಗಳು ಇರಬೇಕು. ಸುಜಿತ್ ಅವರಂತೆ ಅನೇಕ ಸ್ವಯಂ ಉದ್ಯೋಗಿಗಳು ಹಳ್ಳಿಗಳಿಗೆ ಹೋಗಿ ಕೃಷಿ ಅಥವಾ ಹಳ್ಳಿಯಲ್ಲಿ ಮುಚ್ಚಿದ ಅಂಗಡಿಗಳನ್ನು ತೆರೆದು ಜೀವನ ಸಾಗಿಸುತ್ತಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ.
ತಜ್ಞರು ಏನು ನಂಬುತ್ತಾರೆ? ಬಜೆಟ್‌ನಲ್ಲಿ ಪ್ರತಿಯೊಂದು ವರ್ಗಕ್ಕೂ ವ್ಯವಸ್ಥೆ ಕಲ್ಪಿಸಲು ಅವಕಾಶವಿಲ್ಲ. ಆದ್ದರಿಂದ ಸ್ವಯಂ ಉದ್ಯೋಗಿಗಳಿಗೆ ಸಹಾಯ ಮಾಡಲು ಯೋಜಿಸುವ ಕೆಲಸವನ್ನು ರಾಜ್ಯಗಳು ನಿರ್ವಹಿಸಬೇಕು. ಸುಜಿತ್ ಅವರಂತಹ ಜನರ ಜೀವನವನ್ನು ಮರಳಿ ಹಳಿಗೆ ತರಲು ಕೇಂದ್ರದ ಸಹಾಯದಿಂದ ರಾಜ್ಯಗಳು ಅಂತಹ ನೇರ ನೆರವು ಯೋಜನೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಏಕೆಂದರೆ ಅವರು ಮಾರುಕಟ್ಟೆಯ ಅತ್ಯಂತ ಪ್ರಮುಖ ಮಧ್ಯಮ ವರ್ಗದವರು ಮತ್ತು ಉದ್ಯೋಗವನ್ನು ಸೃಷ್ಟಿಸುತ್ತಾರೆ ಮತ್ತು ವಿತರಿಸುತ್ತಾರೆ.
ಇದನ್ನೂ ಓದಿ: ಬಜೆಟ್ 2022: ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಯಾರು ಗೊತ್ತಾ..? ಇಲ್ಲಿದೆ ಆಸಕ್ತಿಕರ ಮಾಹಿತಿ