ಸಂಕ್ರಾಂತಿ ಹಬ್ಬದ ಸಲುವಾಗಿ ಜೋಡೆತ್ತುಗಳು 65 ಕ್ವಿಂಟಲ್ ಭಾರವನ್ನು 15 ಕಿಲೋ ಮೀಟರ್ ದೂರ ಎಳೆದು ಕಸರತ್ತು ತೋರಿದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದಲ್ಲಿ ನಡೆದಿದೆ.
ಕಲಬುರಗಿ: ಸಂಕ್ರಾಂತಿ ಹಬ್ಬದ ಸಲುವಾಗಿ ಜೋಡೆತ್ತುಗಳು 65 ಕ್ವಿಂಟಲ್ ಭಾರವನ್ನು 15 ಕಿಲೋ ಮೀಟರ್ ದೂರ ಎಳೆದು ಕಸರತ್ತು ತೋರಿದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದಲ್ಲಿ ನಡೆದಿದೆ. ಜೋಡಿ ಎತ್ತುಗಳು ಆರು ಬಂಡಿಯಲ್ಲಿ ಹೇರಲಾಗಿದ್ದ ತೊಗರಿ ಚೀಲಗಳನ್ನು 15 ಕಿಲೋ ಮೀಟರ್ ದೂರ ಎಳೆದಿವೆ.
ದತ್ತಪ್ಪ ನಡುವಿನಮನಿ ಎಂಬುವರಿಗೆ ಸೇರಿದ ಜೋಡಿ ಎತ್ತುಗಳು ಇವಾಗಿವೆ. ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆದ ಕಸರತ್ತಿನಲ್ಲಿ, ಜೋಡೆತ್ತುಗಳು 65 ಕ್ವಿಂಟಲ್ ತೂಕವನ್ನು ಯಶಸ್ವಿಯಾಗಿ ಹದಿನೈದು ಕಿಲೋ ಮೀಟರ್ ದೂರ ಎಳೆದಿವೆ. ಗ್ರಾಮಸ್ಥರು ಬಣ್ಣಗಳನ್ನು ಎರಚಿಕೊಂಡು, ಸಂಭ್ರಮಿಸಿದ್ದಾರೆ.
65 ಕ್ವಿಂಟಾಲ್ ತೂಕ ಎಳೆದ ಜೋಡೆತ್ತುಗಳು
ಬಂಡಿಗೆ ಹೇರಿದ ತೊಗರಿ ಮೂಟೆಗಳು
ಬಂಡಿಗೆ ಹೇರಿದ ತೊಗರಿ ಮೂಟೆಗಳು
ಜನರ ಸಂಭ್ರಮ
ಸಕ್ಕರೆನಾಡಲ್ಲಿ ಜೋಡೆತ್ತುಗಳು ಪರಾಕ್ರಮ: 14 ಟನ್ ಕಬ್ಬು ಸಾಗಿಸಿ ಹೊಸ ದಾಖಲೆ ಬರೆದ ಹೋರಿಗಳು