ಬಾಳೆಹಣ್ಣಿಗಾಗಿ.. ವ್ಯಕ್ತಿಯನ್ನ ಗುಂಡಿಗೆ ಗುಮ್ಮಿದ ಗೂಳಿ; ವಿಡಿಯೋ ಆಯ್ತು ಫುಲ್​ Viral!

ಹೈದರಾಬಾದ್: ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂನಲ್ಲಿ ಗೂಳಿಯೊಂದರ ಆರ್ಭಟದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿನ್ನೆ ನಡೆದ ಘಟನೆಯಲ್ಲಿ ದಾಳಿಗೆ ಒಳಗಾದ ವ್ಯಕ್ತಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನ ಕೈಯಲ್ಲಿ ಬಾಳೆಹಣ್ಣಿನ ಬುಟ್ಟಿಯನ್ನು ಕಂಡ ಗೂಳಿ ಆತನನ್ನ ಹಿಂದಿನಿಂದ‌‌ ಬಂದು ಗುಮ್ಮಿದೆ. ಇದರ ಪರಿಣಾಮವಾಗಿ ವ್ಯಕ್ತಿ ಅಲ್ಲೇ ಇದ್ದ ಗುಂಡಿಗೆ ಹಾರಿಬಿದ್ದಿದ್ದಾನೆ. ಇದನ್ನು ಕಂಡ ಸ್ಥಳೀಯರು ಗೂಳಿಯನ್ಬು ಓಡಿಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ವ್ಯಕ್ತಿಗೆ ತೀವ್ರ ಗಾಯಗಳಾಗಿದೆ ಎಂದು ಹೇಳಲಾಗಿದೆ. ಘಟನೆಯ ಸಂಪೂರ್ಣ ದೃಶ್ಯಗಳು ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ. ಅಚ್ಚರಿಯೆಂದರೆ, ವ್ಯಕ್ತಿಯನ್ನು ಗುಂಡಿಗೆ ದೂಡಿದ ಗೂಳಿ ನಂತರ ಏನು ಆಗದಂತೆ ಹಾಯಾಗಿ ಬುಟ್ಟಿಯಿಂದ ಬಿದ್ದ ಬಾಳೆಹಣ್ಣು ತಿನ್ನಲು ಮುಂದಾಯಿತು.

Related Tags:

Related Posts :

Category:

error: Content is protected !!