ಜನಸಾಗರ ಸೀಳಿ ಹೋರಿಗಳ ಮಿಂಚಿನ ಓಟ: ಕೊಬ್ಬಿದ ಗೂಳಿ ಹಿಡಿಯಲು ಪೈಲ್ವಾನರ ಸಾಹಸ

ಹಾವೇರಿ: ಹೋರಿ ಬೆದರಿಸೋ ಸ್ಪರ್ಧೆ ಅಂದ್ರೆನೇ ಶಕ್ತಿಯ ಪ್ರಶ್ನೆ. ಇಲ್ಲಿ ಕಟ್ ಮಸ್ತಾಗಿರೋ ಹೋರಿಗಳು ಶರವೇಗದಲ್ಲಿ ಓಡ್ತಿದ್ರೆ, ಅವುಗಳನ್ನ ಹಿಡಿಯೋಕೆ ಪೈಲ್ವಾನ್​ಗಳು ಸಿಕ್ಕಾಪಟ್ಟೆ ಹರಸಾಹಸ ಮಾಡ್ತಾರೆ. ಅದ್ರಲ್ಲೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಧೂಳಿಕೊಪ್ಪದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆ ಅಂತೂ ಎಲ್ರಿಗೂ ಖುಷಿ ಕೊಡ್ತು.

ಅಲಂಕೃತಗೊಂಡಿದ್ದ ಹೋರಿಗಳು ಅಖಾಡದಲ್ಲಿ ಧೂಳೆಬ್ಬಿಸ್ತಿದ್ರೆ ಶಿಳ್ಳೆ, ಚಪ್ಪಾಳೆಗಳಿಂದ ಜನ ಹುರಿದುಂಬಿಸ್ತಿದ್ರು. ಪೈಲ್ವಾನ್​ಗಳು ಕೂಡ ತಮ್ಮ ಸಾಹಸಕ್ಕೆ ಜನ ಸೈ ಅಂದಿರೋದು ಕಂಡು ಸಂತಸ ವ್ಯಕ್ತಪಡಿಸಿದ್ರು. ಇನ್ನು ಹೋರಿ ಬೆದರಿಸೋ ಸ್ಪರ್ಧೆಯಲ್ಲಿ ಚಿನ್ನ, ನಗದು, ಟಿವಿ, ಫ್ರಿಡ್ಜ್ ಸೇರಿದಂತೆ ಹಲವು ಬಹುಮಾನಗಳನ್ನ ಇಡಲಾಗಿತ್ತು. ಚೆನ್ನಾಗಿ ಓಡಿದ ಹೋರಿ, ಸುಂದರವಾಗಿ ಅಲಂಕೃತಗೊಂಡ ಹೋರಿ ಹಾಗೂ ಪೈಲ್ವಾನರ ಕೈಗೆ ಸಿಗದ ಹೋರಿ.. ಹೀಗೆ ವಿವಿಧ ಹಂತಗಳಲ್ಲಿ ಬಹುಮಾನ ನೀಡಲಾಯ್ತು.

ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ವು. ತಮ್ಮ ಹೋರಿಗಳ ತಾಕತ್ತು ನೋಡಿ ಮಾಲೀಕರು ಕೂಡ ಖುಷಿಪಟ್ರು. ಒಟ್ನಲ್ಲಿ, ಹೋರಿ ಬೆದರಿಸೋ ಸ್ಪರ್ಧೆಗೆ ಜನಸಾಗರವೇ ನೆರೆದಿತ್ತು. ಹಳ್ಳಿ ಜನರ ಪಾಲಿಗೆ ಖುಷಿಯ ರಸದೌತಣವನ್ನೇ ಬಡಿಸಿತ್ತು.


Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!