MSIL ಮದ್ಯದ ಮಳಿಗೆಗೆ ಕನ್ನ ಹಾಕಿದ ಖದೀಮರು, ಯಾವೂರಲ್ಲಿ?

  • pruthvi Shankar
  • Published On - 7:53 AM, 21 Nov 2020

ದೇವನಹಳ್ಳಿ: ತಡರಾತ್ರಿ ರಾಡ್​ನಿಂದ MSIL ಮದ್ಯದ ಮಳಿಗೆ ಶಟರ್ ಮುರಿದು ಒಳ‌ ನುಗ್ಗಿದ ಕಳ್ಳರು, ಮದ್ಯ ಹಾಗೂ ಹಣ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ.

ಶಟರ್ ಮುರಿದು ಒಳ‌ ನುಗ್ಗಿರುವ ಕಳ್ಳರು ಬಾರ್​ನಲ್ಲಿದ್ದ ಒಂದು ಲಕ್ಷ ಮೌಲ್ಯದ ಮದ್ಯ ಮತ್ತು 65 ಸಾವಿರ ನಗದು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಬಾರ್ ಕಡೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿಗಳನ್ನ ದ್ವಂಸ ಮಾಡಿರುವ ಖದೀಮರು ಹಾರ್ಡ್ ಡಿಸ್ಕ್ ಹೊತ್ತೋಯ್ದಿದ್ದಾರೆ. ಹೀಗಾಗಿ ಪರಿಚಿತರಿಂದಲೆ ಕಳ್ಳತನ ನಡೆದಿದೆ ಎಂದು ಸ್ಥಳೀಕರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.