AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರ್ ಕಾರ್ಡ್​ನಲ್ಲಿ ನಿಮ್ಮ ಜನ್ಮದಿನಾಂಕ ವಿವರ ಎರಡನೇ ಬಾರಿ ಬದಲಾಯಿಸಲು ಅವಕಾಶ ಇದೆಯಾ? ಇಲ್ಲಿದೆ ಮಾಹಿತಿ

How to update birth date in Aadhaar Card: ಆಧಾರ್ ಕಾರ್ಡ್ ಮಾಡಿಸುವಾಗ ಕೆಲವೊಮ್ಮೆ ತಪ್ಪಾಗಿ ಜನ್ಮದಿನಾಂಕ ಕೊಟ್ಟಿರಬಹುದು. ಅದರ ಬದಲಾವಣೆ ಮಾಡಬೇಕಾಗಬಹುದು. ಇವತ್ತು ಆನ್​ಲೈನ್​ನಲ್ಲೇ ಕೆಲವೊಂದು ಆಧಾರ್ ಮಾಹಿತಿಯನ್ನು ಬದಲಿಸಲು ಸಾಧ್ಯವಿದೆ. ಆಧಾರ್ ಸೇವಾ ಕೇಂದ್ರಕ್ಕೆ ಹೋಗಿಯೂ ಮಾಡಿಸಬಹುದು. ಆಧಾರ್ ಕಾರ್ಡ್​ನಲ್ಲಿ ಜನ್ಮದಿನಾಂಕವನ್ನು ತಿದ್ದಲು ಒಮ್ಮೆ ಮಾತ್ರವೇ ಅವಕಾಶ ಇರುತ್ತದೆ. ಎರಡನೇ ಬಾರಿ ತಿದ್ದಲು ಅವಕಾಶವೇ ಇಲ್ಲ ಎನ್ನುವಂತಿಲ್ಲ. ಅದಕ್ಕೂ ಅವಕಾಶ ಇದೆ. ಆದರೆ, ಕೆಲವೊಂದು ನಿಯಮಗಳು ಅನ್ವಯ ಆಗುತ್ತವೆ.

ಆಧಾರ್ ಕಾರ್ಡ್​ನಲ್ಲಿ ನಿಮ್ಮ ಜನ್ಮದಿನಾಂಕ ವಿವರ ಎರಡನೇ ಬಾರಿ ಬದಲಾಯಿಸಲು ಅವಕಾಶ ಇದೆಯಾ? ಇಲ್ಲಿದೆ ಮಾಹಿತಿ
ಆಧಾರ್ಡ್ ಕಾರ್ಡ್​
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Nov 27, 2023 | 2:21 PM

Share

ಆಧಾರ್ ಕಾರ್ಡ್ ಬಹಳ ಪ್ರಮುಖವಾದ ನಾಗರಿಕ ದಾಖಲೆ. ವ್ಯಕ್ತಿಯ ಹೆಸರು, ವಿಳಾಸದಿಂದ ಹಿಡಿದು ಬೆರಳಚ್ಚು, ಕಣ್ಣಿನ ಸ್ಕ್ಯಾನ್ ಇತ್ಯಾದಿ ವಿಶೇಷ ದತ್ತಾಂಶವು (biometric data) ಈ ಕಾರ್ಡ್​ನಲ್ಲಿ ಶೇಖರಣೆ ಆಗಿರುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಹೆಸರು ಬದಲಾವಣೆ, ವಿಳಾಸ ಬದಲಾವಣೆ ಆಗುವ ಸಾಧ್ಯತೆಗಳಿರುತ್ತವೆ. ಹಾಗೆಯೇ, ಆಧಾರ್ ಕಾರ್ಡ್ ಮಾಡಿಸುವಾಗ ಕೆಲವೊಮ್ಮೆ ತಪ್ಪಾಗಿ ಜನ್ಮದಿನಾಂಕ ಕೊಟ್ಟಿರಬಹುದು. ಅದರ ಬದಲಾವಣೆ ಮಾಡಬೇಕಾಗಬಹುದು. ಇವತ್ತು ಆನ್​ಲೈನ್​ನಲ್ಲೇ ಕೆಲವೊಂದು ಆಧಾರ್ ಮಾಹಿತಿಯನ್ನು ಬದಲಿಸಲು ಸಾಧ್ಯವಿದೆ. ಆಧಾರ್ ಸೇವಾ ಕೇಂದ್ರಕ್ಕೆ ಹೋಗಿಯೂ ಮಾಡಿಸಬಹುದು. ನಿಮ್ಮ ಆಧಾರ್ ಕಾರ್ಡ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದರಿಂದ ಈ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು.

ಆಧಾರ್ಡ್ ಕಾರ್ಡ್​ನಲ್ಲಿ ಜನ್ಮದಿನಾಂಕ ಅಪ್​ಡೇಟ್ ಮಾಡುವುದು ಹೇಗೆ?

ಆಧಾರ್ ಕಾರ್ಡ್​ನಲ್ಲಿ ಜನ್ಮದಿನಾಂಕವನ್ನು ತಿದ್ದಲು ಒಮ್ಮೆ ಮಾತ್ರವೇ ಅವಕಾಶ ಇರುತ್ತದೆ. ಎರಡನೇ ಬಾರಿ ತಿದ್ದಲು ಅವಕಾಶವೇ ಇಲ್ಲ ಎನ್ನುವಂತಿಲ್ಲ. ಅದಕ್ಕೂ ಅವಕಾಶ ಇದೆ. ಆದರೆ, ಕೆಲವೊಂದು ನಿಯಮಗಳು ಅನ್ವಯ ಆಗುತ್ತವೆ.

ಇದನ್ನೂ ಓದಿ: ಟಾಟಾನಾ, ಬಿರ್ಲಾನಾ?; ದೇಶದ ಅತಿದೊಡ್ಡ ಸಾಲಗಾರರು ಯಾರು? ಇಲ್ಲಿದೆ ಟಾಪ್-10 ಪಟ್ಟಿ

ಆಧಾರ್​ನಲ್ಲಿ ನಿಮ್ಮ ಡೇಟ್ ಆಫ್ ಬರ್ತ್ ಅನ್ನು ಎರಡನೇ ಬಾರಿ ಅಪ್​ಡೇಟ್ ಮಾಡಲೇಬೇಕೆಂದಿದ್ದರೆ ಅದಕ್ಕೆ ಎಕ್ಸೆಪ್ಷನ್ ಪ್ರೋಸಸ್ ಅಥವಾ ವಿಶೇಷ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ನಿಮ್ಮ ಹೊಸ ಜನ್ಮದಿನಾಂಕಕ್ಕೆ ಸಾಕ್ಷ್ಯವಾಗಿರುವ ದಾಖಲೆ ನಿಮ್ಮ ಜೊತೆ ಇರಬೇಕು.

ಜನ್ಮದಿನಾಂಕ ಸಾಕ್ಷ್ಯದ ದಾಖಲೆಗಳು

  • ಭಾರತೀಯ ಪಾಸ್​ಪೋರ್ಟ್
  • ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳಿಂದ ನೀಡಿದ ಸರ್ವಿಸ್ ಫೋಟೋ ಐಡಿ
  • ಸರ್ಕಾರದಿಂದ ಒದಗಿಸಿದ ಪಿಂಚಣಿ, ಫ್ರೀಡಂ ಫೈಟರ್ ಫೋಟೋ ಐಡಿ ಕಾರ್ಡ್
  • ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಅಥವಾ ಯಾವುದೇ ವಿವಿ ಅಂಕಪಟ್ಟಿ, ತೇರ್ಗಡೆ ಪ್ರಮಾಣಪತ್ರ
  • ತೃತೀಯ ಲಿಂಗಿ ಐಡಿ ಕಾರ್ಡ್
  • ಜನನ ಪ್ರಮಾಣಪತ್ರ

ಇದನ್ನೂ ಓದಿ: ಕ್ರೆಡಿಟ್ ರಿಪೋರ್ಟ್ ಎಂದರೇನು? ಕ್ರೆಡಿಟ್ ಸ್ಕೋರ್​ಗಿಂತ ಅದು ಹೇಗೆ ಭಿನ್ನ? ಇಲ್ಲಿದೆ ಡೀಟೇಲ್ಸ್

ವಿಶೇಷ ಪ್ರಕ್ರಿಯೆಗೆ ಬಿಬಿಎಂಪಿ ಅಥವಾ ನಿಮ್ಮ ಜಿಲ್ಲೆಯ ಪ್ರಾಧಿಕಾರ ನೀಡಿದ ಜನನ ಪ್ರಮಾಣಪತ್ರ ಹಾಗೂ ಸೆಲ್ಫ್ ಡಿಕ್ಲರೇಶನ್ ಅರ್ಜಿ ಇರಬೇಕು.

ಬಳಿಕ ಯುಐಡಿಎಐ ವೆಬ್​ಸೈಟ್​ಗೆ ಹೋಗಿ ಎಕ್ಸೆಪ್ಷನ್ ಪ್ರೋಸಸ್​ಗೆ (exception process) ಮನವಿ ಸಲ್ಲಿಸಬೇಕು. ನಿಮ್ಮಲ್ಲಿರುವ ದಾಖಲೆಯನ್ನು ಯುಐಡಿಎಐಗೆ ಒದಗಿಸಬೇಕು. ಪ್ರಾಧಿಕಾರವು ಇದನ್ನು ಪರಿಶೀಲನೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ.

ಒಂದು ವೇಳೆ ನೀವು ಜನ್ಮದಿನಾಂಕವನ್ನು ಮೊದಲ ಬಾರಿಗೆ ಅಪ್​ಡೇಟ್ ಮಾಡುತ್ತಿದ್ದರೆ ಎಕ್ಸೆಪ್ಷನ್ ಪ್ರೋಸಸ್ ಅಗತ್ಯ ಇರುವುದಿಲ್ಲ. ನೇರವಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಸೂಕ್ತ ದಾಖಲೆ ನೀಡಿ ಅಪ್​ಡೇಟ್ ಮಾಡಬಹುದು. ಹಾಗೊಂದು ವೇಳೆ ನಿಮ್ಮ ಮೊದಲ ಅಪ್​ಡೇಟ್ ಮನವಿ ತಿರಸ್ಕೃತಗೊಂಡರೆ ನೀವು 1947 ನಂಬರ್​ಗೆ ಕರೆ ಮಾಡಿ, ಕಾರಣ ತಿಳಿಯಬಹುದು. ತಪ್ಪಿದ್ದರೆ ಅದನ್ನು ಸರಿಪಡಿಸಿ ಮತ್ತೊಮ್ಮೆ ಪ್ರಯತ್ನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ