BharatNet: ಹಳ್ಳಿಹಳ್ಳಿಗೂ ಬ್ರಾಡ್​ಬ್ಯಾಂಡ್ ತಲುಪಿಸುವುದಕ್ಕೆ ಹೆಚ್ಚುವರಿಯಾಗಿ 19,041 ಕೋಟಿ ರೂ. ಘೋಷಿಸಿದ ನಿರ್ಮಲಾ

| Updated By: Srinivas Mata

Updated on: Jun 28, 2021 | 6:34 PM

ಭಾರತದ ಪ್ರತಿ ಹಳ್ಳಿಗೆ ಬ್ರಾಡ್​ಬ್ಯಾಂಡ್ ತಲುಪಿಸಬೇಕು ಎಂಬ ಯೋಜನೆಗೆ ಸೋಮವಾರದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೆಚ್ಚುವರಿಯಾಗಿ 19,041 ಕೋಟಿ ರೂಪಾಯಿಯನ್ನು ಘೋಷಣೆ ಮಾಡಿದ್ದಾರೆ.

BharatNet: ಹಳ್ಳಿಹಳ್ಳಿಗೂ ಬ್ರಾಡ್​ಬ್ಯಾಂಡ್ ತಲುಪಿಸುವುದಕ್ಕೆ ಹೆಚ್ಚುವರಿಯಾಗಿ 19,041 ಕೋಟಿ ರೂ. ಘೋಷಿಸಿದ ನಿರ್ಮಲಾ
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಪ್ರಮುಖ ಘೋಷಣೆಗಳನ್ನು ಮಾಡಿದರು. ಅದರಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾಡೆಲ್​ನಲ್ಲಿ ಭಾರತ್​ನೆಟ್​ ಮೂಲಕ ಪ್ರತಿ ಹಳ್ಳಿಗೆ ಬ್ರಾಡ್​ಬ್ಯಾಂಡ್​ ತಲುಪಿಸುವ ಯೋಜನೆ ಬಗ್ಗೆ ಹೇಳಿದರು. ಆಗಸ್ಟ್​ 15, 2020ರಂದು ಪ್ರಧಾನಿ ನರೇಂದ್ರ ಮೋದಿ ಅವರು 1000 ದಿನದಲ್ಲಿ ಎಲ್ಲ ಹಳ್ಳಿಗಳಿಗೆ ಬ್ರಾಡ್​ಬ್ಯಾಂಡ್​ ಸಂಪರ್ಕ ಒದಗಿಸುವ ಬಗ್ಗೆ ಘೋಷಣೆ ಮಾಡಿದ್ದರು. 2,50,000 ಗ್ರಾಮ ಪಂಚಾಯಿತಿಗಳ ಪೈಕಿ 1,56,223 ಗ್ರಾಮಪಂಚಾತ್​ಗಳು ಮೇ 31, 2021ರ ಹೊತ್ತಿಗೆ ಸೇವೆಗೆ ಸಿದ್ಧವಾಗಿದೆ. ಹದಿನಾರು ರಾಜ್ಯಗಳಲ್ಲಿ (9 ಪ್ಯಾಕೇಜ್​ಗಳಲ್ಲಿ ಜತೆಯಾಗಿದೆ) ಭಾರತ್​ನೆಟ್​ ಪಿಪಿಪಿ ಮಾಡೆಲ್​ನಲ್ಲಿ ಹಣಕಾಸು ಕಂದಕ ತುಂಬುವ ಆಧಾರದಲ್ಲಿ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಂದಹಾಗೆ, ಭಾರತ್​ನೆಟ್​ ಒದಗಿಸುವುದಕ್ಕೆ ಹೆಚ್ಚುವರಿಯಾಗಿ 19,041 ಕೋಟಿ ರೂಪಾಯಿ ಒದಗಿಸಲಾಗುವುದು. ಒಟ್ಟಾರೆಯಾಗಿ 61,109 ಕೋಟಿ ರೂಪಾಯಿ ನೀಡಲಾಗುವುದು. 2017ರಲ್ಲಿ ಈಗಾಗಲೇ 42,068 ಕೋಟಿ ಮಂಜೂರಾಗಿದೆ. ಗ್ರಾಮಪಂಚಾಯಿತಿಗಳ ಮತ್ತು ಅದರಲ್ಲಿ ಒಳಗೊಳ್ಳಲಿರುವ ಹಳ್ಳಿಗಳನ್ನು ಭಾರತ್​ನೆಟ್ ವಿಸ್ತರಣೆಗೊಳ್ಳಿದೆ ಮತ್ತು ಅಪ್​ಗ್ರೇಡ್​ ಆಗಲಿದೆ. ​

ಇನ್ನು ಈಗಾಗಲೇ ಘೋಷಣೆ ಆಗಿದ್ದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ ಅಡಿಯಲ್ಲಿ ವಿಸ್ತರಣೆ ಆಗಿದ್ದನ್ನು ನಿರ್ಮಲಾ ಪ್ರಸ್ತಾವ ಮಾಡಿದರು. ಈ ಯೋಜನೆ ಮೊದಲಿಗೆ ಮಾರ್ಚ್​ 26, 2020ಕ್ಕೆ ಘೋಷಣೆ ಆಯಿತು. 2020ರ ಏಪ್ರಿಲ್​ನಿಂದ ಜೂನ್​ವರೆಗೆ ಮಾತ್ರ ಘೋಷಿಸಲಾಯಿತು. ಬಡವರಿಗೆ ಬೆಂಬಲ ನೀಡುವ ಉದ್ದೇಶದಿಂದ 2020ರ ತನಕ ವಿಸ್ತರಿಸಲಾಯಿತು. 2020-21ರಲ್ಲಿ ಈ ಯೋಜನೆಯ ವೆಚ್ಚ 1,33,972 ಕೋಟಿ ಆಗಿದೆ. ಕೊವಿಡ್​ ಎರಡನೇ ಅಲೆ ಹಿನ್ನೆಲೆಯಲ್ಲಿ 2021ರ ಮೇ ತಿಂಗಳಲ್ಲಿ ಬಡವರಿಗೆ, ದುರ್ಬಲರಿಗೆ ಆಹಾರ ಭದ್ರತೆ ಒದಗಿಸಲು ಯೋಜನೆಯನ್ನು ಮತ್ತೆ ಶುರು ಮಾಡಲಾಯಿತು. ರಾಷ್ಟ್ರೀಯ ಆಹಾರ ಭದ್ರತಾ ಸುರಕ್ಷಾ ಕಾಯ್ದೆ ಫಲಾನುಭವಿಗಳಿಗೆ 2021ರ ಮೇ ತಿಂಗಳಿಂದ ನವೆಂಬರ್​ ತನಕ 5 ಕೇಜಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸುವ ಘೋಷಣೆ ಮಾಡಲಾಯಿತು. ಇದರಿಂದ 93,869 ಕೋಟಿ ರೂ. ಖರ್ಚು ಹೆಚ್ಚಲಿದ್ದು, ಒಟ್ಟಾರೆಯಾಗಿ ರೂ. 2,27,841 ಕೋಟಿ ವೆಚ್ಚವಾಗಿದೆ.

ರಫ್ತು ಇನ್ಷೂರೆನ್ಸ್ ಕವರ್ ಉತ್ತೇಜನಕ್ಕಾಗಿ ರೂ. 88,000 ಕೋಟಿ ಘೋಷಣೆ ಮಾಡಲಾಗಿದೆ. ಎಕ್ಸ್​ಪೋರ್ಟ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಇಸಿಜಿಸಿ) ಕ್ರೆಡಿಟ್ ಇನ್ಷೂರೆನ್ಸ್​ ಸೇವೆಗಳನ್ನು ಒದಗಿಸುವ ಮೂಲಕ ರಫ್ತು ಉತ್ತೇಜನ ಮಾಡಲಾಗಿದೆ. ಭಾರತದ ಶೇ 30ರಷ್ಟು ವ್ಯಾಪಾರಿ ವಸ್ತುಗಳ ರಫ್ತು ಬೆಂಬಲಿಸುತ್ತದೆ. ರಫ್ತು ಇನ್ಷೂರೆನ್ಸ್​ ಕವರ್​ ಅನ್ನು 88,000 ಕೋಟಿ ರೂಪಾಯಿಯಿಂದ ಉತ್ತೇಜಿಸುವ ಉದ್ದೇಶಕ್ಕೆ ಮುಂದಿನ ಐದು ವರ್ಷಗಳಲ್ಲಿ ಈಕ್ವಿಟಿ ಪೂರೈಸಲು ಪ್ರಸ್ತಾವ ಸಲ್ಲಿಸಲಾಗಿದೆ. ಮಧ್ಯಮ ಮತ್ತು ದೀರ್ಘಾವಧಿ ಯೋಜನೆಗಳನ್ನು ರಿಸ್ಕ್​ ಕವರ್​ ವಿಸ್ತರಣೆ ಮಾಡುವ ಮೂಲಕ ಎನ್​ಇಐಎ ಉತ್ತೇಜಿಸುತ್ತದೆ. ಖರೀದಿದಾರರ ಎಕ್ಸಿಮ್​ ಬ್ಯಾಂಕ್​ ಸಾಲ ಕವರ್ ಆಗುತ್ತದೆ. ಯಾರ ಕ್ರೆಡಿಟ್ ವರ್ಥಿನೆಸ್ ಕಡಿಮೆ ಇರುತ್ತದೋ ಅವರಿಗೆ ನೆರವಾಗಿ, ಪ್ರಾಜೆಕ್ಟ್​ ರಪ್ತುದಾರರನ್ನು ಬೆಂಬಲಸುತ್ತದೆ. ಎನ್​ಇಐಎದಿಂದ 52,860 ಕೋಟಿ ರೂಪಾಯಿಯ 211 ಪ್ರಾಜೆಕ್ಟ್​ಗಳನ್ನು 52 ದೇಶಗಳಲ್ಲಿ ಮತ್ತು 63 ಭಾರತೀಯ ವಿವಿ ರಫ್ತುದಾರರನ್ನು ಮಾರ್ಚ್​ 31, 2021ರ ತನಕ ಬೆಂಬಲಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಎನ್​ಇಐಎಗೆ ಹೆಚ್ಚುವರಿಯಾಗಿ 33,000 ಕೋಟಿ ರೂಪಾಯಿ ಪ್ರಾಜೆಕ್ಟ್ ರಫ್ತಿಗೆ ಒದಗಿಸುವ ಪ್ರಸ್ತಾವ ಮಾಡಲಾಗಿದೆ. ​

ಇದನ್ನೂ ಓದಿ: Nirmala Sitharaman: ಟೂರಿಸ್ಟ್​ ಗೈಡ್​ಗಳಿಗೆ 1 ಲಕ್ಷದ ತನಕ ಸಾಲ; ಭಾರತಕ್ಕೆ ಬರುವ 5 ಲಕ್ಷ ವಿದೇಶಿಗರಿಗೆ ವೀಸಾ ಶುಲ್ಕ ಇಲ್ಲ

(As a Corona second wave package union FM Nirmala Sitharaman announced additional Rs 19,041 crore for BhartNet broadband to reach every village)

Published On - 6:33 pm, Mon, 28 June 21