AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚುವರಿ ತೆರಿಗೆ: ನೆಲ ಕಚ್ಚಿದ ಒಎನ್​ಜಿಸಿ ಹಾಗೂ ಆಯಿಲ್ ಇಂಡಿಯಾ ಷೇರುಗಳು

ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸಿರುವ ಕಾರಣ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್ ಜಿಸಿ) ಹಾಗೂ ಆಯಿಲ್ ಇಂಡಿಯಾ ಷೇರುಗಳು ಕುಸಿತ ಕಂಡಿವೆ. ಒನ್​ಎನ್​ಜಿಸಿಯು ಗರಿಷ್ಠ ಮಟ್ಟದಿಂದ ಶೇ.35ರಷ್ಟು ಕುಸಿತ ಕಂಡರೆ, ಆಯಿಲ್ ಇಂಡಿಯಾವು ಶೇ.32ರಷ್ಟು ಕುಸಿತ ಕಂಡಿವೆ.

ಹೆಚ್ಚುವರಿ ತೆರಿಗೆ: ನೆಲ ಕಚ್ಚಿದ ಒಎನ್​ಜಿಸಿ ಹಾಗೂ ಆಯಿಲ್ ಇಂಡಿಯಾ ಷೇರುಗಳು
Tax
TV9 Web
| Edited By: |

Updated on:Jul 04, 2022 | 3:16 PM

Share

ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸಿರುವ ಕಾರಣ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್ ಜಿಸಿ) ಹಾಗೂ ಆಯಿಲ್ ಇಂಡಿಯಾ ಷೇರುಗಳು ಕುಸಿತ ಕಂಡಿವೆ. ಒನ್​ಎನ್​ಜಿಸಿಯು ಗರಿಷ್ಠ ಮಟ್ಟದಿಂದ ಶೇ.35ರಷ್ಟು ಕುಸಿತ ಕಂಡರೆ, ಆಯಿಲ್ ಇಂಡಿಯಾವು ಶೇ.32ರಷ್ಟು ಕುಸಿತ ಕಂಡಿವೆ. ಇದೇ ಜುಲೈ 1 ರಂದು ಕೇಂದ್ರ ಸರ್ಕಾರವು ಕಚ್ಚಾ ತೈಲ ಉತ್ಪಾದನೆಯ ಮೇಲೆ ಪ್ರತಿ ಟನ್‌ಗೆ 23,250ರೂ. ಹೆಚ್ಚುವರಿ ತೆರಿಗೆಯನ್ನು ವಿಧಿಸಿದ ಬಳಿಕ ಒಎನ್​ಜಿಸಿ ಈಗ ಕುಸಿತ ಕಂಡಿದೆ.

ತೈಲ ಉತ್ಪಾದನೆಯ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ 23,250 ರೂ.ಗಳ ಹೆಚ್ಚುವರಿ ಅಬಕಾರಿ ಸುಂಕವೇ ಈ ಕುಸಿತದ ಹಿಂದಿನ ಕಾರಣ ಎನ್ನಲಾಗಿದೆ. ತೈಲ ಮತ್ತು ಅನಿಲ ಉದ್ಯಮದ ಮೇಲೆ ವಿಶೇಷ ಅಬಕಾರಿ ಸುಂಕ ಅಥವಾ ವಿಂಡ್‌ಫಾಲ್ ಗೇನ್ಸ್ ತೆರಿಗೆ ವಿಧಿಸುವ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿತ್ತು.

ದೇಶೀಯ ತೈಲ ಉತ್ಪಾದಕರು ಮತ್ತು ಸಂಸ್ಕರಣಾಗಾರಗಳು ಗಳಿಸುವ ಹೆಚ್ಚುವರಿ ಲಾಭದಲ್ಲಿ ಕುಸಿತ ಕಂಡುಬಂದಿದೆ. ಇತ್ತೀಚೆಗೆ, ಅನೇಕ ಬ್ರೋಕರೇಜ್ ಸಂಸ್ಥೆಗಳು ಈ ಎರಡು ಕಂಪನಿಗಳ ರೇಟಿಂಗ್ ಅನ್ನು ಹೆಚ್ಚಿಸಿವೆ. ಜಾಗತಿಕವಾಗಿ ತೈಲಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ, ಈ ಕಂಪನಿಗಳು 2022-23ರಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿತ್ತು.

ದೇಶೀಯ ತೈಲ ಉತ್ಪಾದನಾ ಕಂಪನಿಗಳು ಸರ್ಕಾರಕ್ಕೆ ಅಥವಾ ಗೊತ್ತುಪಡಿಸಿದ ಘಟಕಕ್ಕೆ ಅಥವಾ ಸರ್ಕಾರಿ ಕಂಪನಿಗೆ ತೈಲವನ್ನು ಮಾರಾಟ ಮಾಡಬೇಕೆಂಬ ಒತ್ತಾಯವಿಲ್ಲ. ಈಗ ಎಲ್ಲಾ ತೈಲ ಉತ್ಪಾದನಾ ಕಂಪನಿಗಳು ತಮ್ಮ ತೈಲವನ್ನು ದೇಶೀಯ ಮಾರುಕಟ್ಟೆಯಲ್ಲಿ ಯಾರಿಗಾದರೂ ಮಾರಾಟ ಮಾಡಲು ಮುಕ್ತವಾಗಿರುತ್ತವೆ.

ತೈಲ ಉತ್ಪಾದನಾ ಕಂಪನಿಗಳು ಈಗ ಇ-ಹರಾಜು ನಡೆಸುವ ಮೂಲಕ ಅತಿ ಹೆಚ್ಚು ಬಿಡ್ ಮಾಡಿದ ಸಂಸ್ಕರಣಾಗಾರಗಳಿಗೆ ಕಚ್ಚಾ ತೈಲವನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.

ONGC ಭಾರತದ ಅತಿದೊಡ್ಡ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಕಂಪನಿಯಾಗಿದ್ದು, ದೇಶೀಯ ಉತ್ಪಾದನೆಗೆ ಸುಮಾರು 71 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ.

ಆಯಿಲ್ ಇಂಡಿಯಾ ಲಿಮಿಟೆಡ್: ಆಯಿಲ್ ಇಂಡಿಯಾವು ಭಾರತದಲ್ಲಿ ತೈಲ ಆವಿಷ್ಕಾರಕ್ಕಿಂತ(1889) ಹಿಂದಿನದು. ನವರತ್ನ ಕಂಪನಿ, ಆಯಿಲ್ ಇಂಡಿಯಾ ಸರ್ಕಾರದ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿದ್ದು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ ಮತ್ತು ಇದು ಭಾರತದಲ್ಲಿ ಎರಡನೇ ಅತಿದೊಡ್ಡ ರಾಷ್ಟ್ರೀಯ ತೈಲ ಮತ್ತು ಅನಿಲ ಕಂಪನಿಯಾಗಿದೆ.

ಎಮ್ಕೆ ಗ್ಲೋಬಲ್ ಪ್ರಕಾರ ಸರ್ಕಾರವು ಡೀಸೆಲ್, ಪೆಟ್ರೋಲ್ ಮತ್ತು ಎಟಿಎಫ್ ರಫ್ತುಗಳ ಮೇಲೆ ಕ್ರಮವಾಗಿ Rs13/litr, Rs6/litr ಮತ್ತು Rs6/ltr ನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) ವಿಧಿಸಿತು. ಮಾರ್ಚ್‌ನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 137 ರೂ.ಗೆ ತಲುಪಿತ್ತು.

Published On - 3:13 pm, Mon, 4 July 22