Airtel Payments Bank: ಆರ್ಬಿಐನಿಂದ ಶೆಡ್ಯೂಲ್ ಬ್ಯಾಂಕ್ ಸ್ಥಾನ ಪಡೆದ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್
ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೆಡ್ಯೂಲ್ ಬ್ಯಾಂಕ್ ಸ್ಥಾನಮಾನ ಸಿಕ್ಕಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಂಗಳವಾರ ಘೋಷಣೆ ಮಾಡಿರುವಂತೆ, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1934ರ ಎರಡನೇ ಶೆಡ್ಯೂಲ್ನಲ್ಲಿ ಸೇರಿಸಲಿದೆ. 2020ರ ದೇಶೀಯವಾಗಿ ವ್ಯವಸ್ಥಿತ ಪ್ರಮುಖ ಬ್ಯಾಂಕ್‌ಗಳ (D-SIBs) ಅಡಿಯಲ್ಲಿ ಬರುವಂಥ ಎಸ್‌ಬಿಐ, ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳನ್ನು ಹಾಗೇ ಗುರುತಿಸುವುದನ್ನು ಮುಂದುವರಿಸಲಾಗುವುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ. “D-SIBಗಳಿಗೆ ಹೆಚ್ಚುವರಿ ಸಾಮಾನ್ಯ ಈಕ್ವಿಟಿ ಶ್ರೇಣಿ 1 (CET1) ಅಗತ್ಯವನ್ನು ಏಪ್ರಿಲ್ 1, 2016ರಿಂದ ಹಂತಹಂತವಾಗಿ ಮಾಡಲಾಗಿದೆ. ಮತ್ತು ಏಪ್ರಿಲ್ 1, 2019ರಿಂದ ಸಂಪೂರ್ಣವಾಗಿ ಜಾರಿಗೆ ಬಂದಿದೆ. ಹೆಚ್ಚುವರಿ CET1 ಅಗತ್ಯವು ಬಂಡವಾಳ ಸಂರಕ್ಷಣೆ ಬಫರ್ ಜೊತೆಗೆ ಇರುತ್ತದೆ,” ಎಂದು ಆರ್‌ಬಿಐ ಹೇಳಿಕೆಯಲ್ಲಿ ಪ್ರಸ್ತಾವ ಮಾಡಲಾಗಿದೆ.
ಆರ್ಬಿಐನಿಂದ ಜುಲೈ 22, 2014ರಂದು D-SIBಗಳೊಂದಿಗೆ ವ್ಯವಹರಿಸುವುದಕ್ಕಾಗಿ ಚೌಕಟ್ಟನ್ನು ಬಿಡುಗಡೆ ಮಾಡಿದೆ. D-SIB ಚೌಕಟ್ಟಿನ ಪ್ರಕಾರ, 2015ರಿಂದ ಪ್ರಾರಂಭವಾಗುವ D-SIBಗಳಾಗಿ ಗೊತ್ತುಪಡಿಸಿದ ಬ್ಯಾಂಕ್‌ಗಳ ಹೆಸರನ್ನು ಬಹಿರಂಗಪಡಿಸಲು ಮತ್ತು ಅವರ ವ್ಯವಸ್ಥಿತ ಪ್ರಾಮುಖ್ಯತೆಯ ಅಂಕಗಳ (SISs) ಆಧಾರದಲ್ಲಿ ಈ ಬ್ಯಾಂಕ್‌ಗಳನ್ನು ಸೂಕ್ತವಾದ ಬಕೆಟ್‌ಗಳಲ್ಲಿ ಇರಿಸಲು D-SIB ಫ್ರೇಮ್‌ವರ್ಕ್ ಅಗತ್ಯವಿದೆ.
D-SIB ಅನ್ನು ಇರಿಸಲಾಗಿರುವ ಬಕೆಟ್ ಅನ್ನು ಆಧರಿಸಿ, ಹೆಚ್ಚುವರಿ ಸಾಮಾನ್ಯ ಈಕ್ವಿಟಿ ಅಗತ್ಯವನ್ನು ಅನ್ವಯಿಸಬೇಕಾಗುತ್ತದೆ. ಭಾರತದಲ್ಲಿ ಶಾಖೆಯ ಉಪಸ್ಥಿತಿಯನ್ನು ಹೊಂದಿರುವ ವಿದೇಶೀ ಬ್ಯಾಂಕ್ ಜಾಗತಿಕ ವ್ಯವಸ್ಥಿತ ಮಹತ್ವದ ಬ್ಯಾಂಕ್ (G-SIB) ಆಗಿದ್ದರೆ, ಅದು G-SIBಯಂತೆ ಭಾರತದಲ್ಲಿ ಹೆಚ್ಚುವರಿ CET1 ಬಂಡವಾಳದ ಹೆಚ್ಚುವರಿ ಶುಲ್ಕವನ್ನು ನಿರ್ವಹಿಸಬೇಕಾಗುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2015 ಮತ್ತು 2016ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್ ಅನ್ನು D-SIBಗಳಾಗಿ ಘೋಷಿಸಿತ್ತು. ಮಾರ್ಚ್ 31, 2017 ರಂತೆ ಬ್ಯಾಂಕ್‌ಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಜೊತೆಗೆ D-SIB ಎಂದು ವರ್ಗೀಕರಿಸಲಾಗಿದೆ. ಪ್ರಸ್ತುತ ಅಪ್ಡೇಟ್ ಕಳೆದ ವರ್ಷ ಮಾರ್ಚ್ 31ರಂತೆ ಬ್ಯಾಂಕ್‌ಗಳಿಂದ ಸಂಗ್ರಹಿಸಿದ ಡೇಟಾವನ್ನು ಆಧರಿಸಿದೆ.
ಇದನ್ನೂ ಓದಿ: ಸರ್ಕಾರದ ವ್ಯವಹಾರಗಳನ್ನು ನಡೆಸಲು ಪೇಮೆಂಟ್ಸ್ ಬ್ಯಾಂಕ್ಗಳು, ಸಣ್ಣ ಹಣಕಾಸು ಬ್ಯಾಂಕ್ಗಳಿಗೆ ಆರ್‌ಬಿಐ ಅವಕಾಶ