AeroCon 2022-ಏರೋಕಾನ್ 2022: ಬೆಂಗಳೂರಿನಲ್ಲೇ ತಯಾರಿಸಿದ ಸಾಫ್ಟ್‌ವೇರ್ ಪ್ರದರ್ಶಿಸಲಿದೆ ರಿಲಯನ್ಸ್ ಜಿಯೋ ಅಂಗಸಂಸ್ಥೆ ಸಂಖ್ಯಾಸೂತ್ರ ಲ್ಯಾಬ್ಸ್
Sankhya Sutra Labs: ಅತ್ಯಾಧುನಿಕ ಕಂಪ್ಯುಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ ಸಾಫ್ಟ್‌ವೇರ್ ಮೂಲಕ ಸಂಖ್ಯಾಸೂತ್ರ ಸಂಸ್ಥೆಯು ಆತ್ಮನಿರ್ಭರ ಭಾರತದ ಧ್ಯೇಯವನ್ನು ಪ್ರೋತ್ಸಾಹಿಸಲಿದೆ. ಇದರ ಸಾಫ್ಟ್‌ವೇರ್ ಪ್ರಾಥಮಿಕವಾಗಿ ವಾಯುಯಾನ ಮತ್ತು ರಕ್ಷಣಾ ಸಲಕರಣೆಗಳಲ್ಲಿ ಬಳಕೆಯಾಗುತ್ತದೆ. ಅಲ್ಲದೆ, ವಾಹನ, ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಪ್ರಕ್ರಿಯೆ ಉದ್ಯಮಗಳಲ್ಲಿ, ಉತ್ಪನ್ನದ ವಿನ್ಯಾಸ ಮತ್ತು ಕಾರ್ಯನಿರ್ವಹಣೆಯಂತಹ ಹಲವು ಹಂತಗಳಲ್ಲೂ ಬಳಕೆಯಾಗುತ್ತದೆ.
ಬೆಂಗಳೂರು: ರಿಲಯನ್ಸ್ ಜಿಯೋ ಪ್ಲಾಟ್‌ಫಾರಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಬೆಂಗಳೂರು ಮೂಲದ ಸಂಖ್ಯಾಸೂತ್ರ ಲ್ಯಾಬ್ಸ್ ತನ್ನ ಉತ್ಪನ್ನಗಳು ಮತ್ತು ಸೌಲಭ್ಯಗಳನ್ನು ಬೆಂಗಳೂರಿನಲ್ಲಿ (International Aerospace Conference 2022) ಜೂನ್ 2-3 ರಂದು ನಡೆಯುತ್ತಿರುವ (AeroCon 2022) ಏರೋಕಾನ್ 2022 ರಲ್ಲಿ ಪ್ರದರ್ಶಿಸುತ್ತಿದೆ. ಆಟೊಮೊಬೈಲ್ ಇಂಜಿನಿಯರಿಂಗ್ ಸೊಸೈಟಿ ಆಯೋಜಿಸಲಿರುವ ಈ ಪ್ರೀಮಿಯರ್ ವೈಮಾನಿಕ ಸಮ್ಮೇಳನದಲ್ಲಿ ತನ್ನ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವ ಸಂಖ್ಯಾಸೂತ್ರ ಲ್ಯಾಬ್ಸ್ (Sankhya Sutra Labs), 2022 ಅಕ್ಟೋಬರ್‌ನಲ್ಲಿ ಪ್ರಮುಖ ಉತ್ಪನ್ನ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವೈಮಾನಿಕ ಮತ್ತು ರಕ್ಷಣಾ ಉದ್ಯಮಗಳಲ್ಲಿ ಬಳಸಲಾಗುವ ಅಪ್ಲಿಕೇಶನ್‌ಗಳು, ವಾಹನೋದ್ಯಮ, ಸೆಮಿಕಂಡಕ್ಟರ್ ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಪ್ರೋಸೆಸ್ ಇಂಡಸ್ಟ್ರಿಗಳಲ್ಲಿ ಬಳಸಲಾಗುವ ಅಪ್ಲಿಕೇಶನ್‌ಗಳನ್ನು ಈ ಸಂಸ್ಥೆ ಉತ್ಪಾದನೆ ಮಾಡುತ್ತದೆ.
ಅತ್ಯಾಧುನಿಕ ಕಂಪ್ಯುಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ ಸಾಫ್ಟ್‌ವೇರ್ ಮೂಲಕ ಸಂಖ್ಯಾಸೂತ್ರ ಸಂಸ್ಥೆಯು ಆತ್ಮನಿರ್ಭರ ಭಾರತದ ಧ್ಯೇಯವನ್ನು ಪ್ರೋತ್ಸಾಹಿಸಲಿದೆ. ಇದರ ಸಾಫ್ಟ್‌ವೇರ್ ಪ್ರಾಥಮಿಕವಾಗಿ ವಾಯುಯಾನ ಮತ್ತು ರಕ್ಷಣಾ ಸಲಕರಣೆಗಳಲ್ಲಿ ಬಳಕೆಯಾಗುತ್ತದೆ. ಅಲ್ಲದೆ, ವಾಹನ, ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಪ್ರಕ್ರಿಯೆ ಉದ್ಯಮಗಳಲ್ಲಿ, ಉತ್ಪನ್ನದ ವಿನ್ಯಾಸ ಮತ್ತು ಕಾರ್ಯನಿರ್ವಹಣೆಯಂತಹ ಹಲವು ಹಂತಗಳಲ್ಲೂ ಬಳಕೆಯಾಗುತ್ತದೆ.
ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಕುರಿತು ಮಾತನಾಡುವಾಗ ದೇಶದೊಳಗೇ ವಿವಿಧ ಹಾರ್ಡ್‌ವೇರ್ ಉತ್ಪಾದನೆ ಮಾಡುವ ಸಾಮರ್ಥ್ಯದ ಮೇಲೆ ಗಮನ ಹರಿಸುತ್ತೇವೆ. ಅದರೆ, ದೇಶದಲ್ಲೇ ವಿನ್ಯಾಸ ಪರಿಕರಗಳನ್ನು ರೂಪಿಸದಿದ್ದರೆ ಸ್ವಾವಲಂಬನೆ ಸಾಧ್ಯವಿಲ್ಲ. ಸಂಖ್ಯಾಸೂತ್ರದಲ್ಲಿ, ಭಾರತ ಮತ್ತು ವಿಶ್ವಕ್ಕಾಗಿ ಡೀಪ್ ಟೆಕ್ನಾಲಜಿಯನ್ನು ನಾವು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಸಂಖ್ಯಾಸೂತ್ರ ಲ್ಯಾಬ್ಸ್‌ನ ಸಿಇಒ ಡಾ. ಸುನೀಲ್ ಶೆರ್ಲೇಕರ್ ಹೇಳಿದ್ದಾರೆ.
ಟರ್ಬ್ಯುಲಂಟ್ ಬಗ್ಗೆ ನಿಖರವಾದ ಸಿಮ್ಯುಲೇಶನ್ ಅನ್ನು ವಾಯುಯಾನ ಮತ್ತು ರಕ್ಷಣಾ ಉಪಕರಣಗಳಲ್ಲಿ ಸಾಧಿಸುವುದು ಸವಾಲಿನ ಕೆಲಸವಾಗಿದ್ದು, ಹಲವು ಹಂತಗಳಲ್ಲಿ ವಿವಿಧ ಪ್ರಕ್ರಿಯೆಗಳನ್ನು ನಡೆಸಬೇಕಿರುತ್ತದೆ. ಕ್ಲಾಸಿಕಲ್ ಸಿಎಫ್‌ಡಿ ಟೂಲ್‌ಗಳನ್ನು ಬಳಸಿಕೊಂಡು ಈ ಸವಾಲನ್ನು ಎದುರಿಸಲಾಗುತ್ತದೆ. ಆದರೆ, ಸಂಖ್ಯಾಸೂತ್ರ ಲ್ಯಾಬ್ಸ್ ಇದರ ಬದಲಿಗೆ ಫಿಸಿಕ್ಸ್, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ಪರಿಕಲ್ಪನೆಗಳನ್ನು ಬಳಸಿಕೊಂಡು, ಸುಧಾರಿತ ಸಿಎಫ್‌ಡಿ ಟೂಲ್‌ಗಳನ್ನು ರೂಪಿಸಿದೆ. ಇದು ಅಂದಾಜು ಟರ್ಬುಲೆನ್ಸ್ ಮಾಡೆಲ್‌ಗಳನ್ನು ಬಳಸುವುದಿಲ್ಲ ಬದಲಿಗೆ ನಿಖರ ವಿಧಾನಗಳನ್ನು ಬಳಸುತ್ತದೆ.
“ನಿಖರ ಸಿಮ್ಯುಲೇಶನ್‌ಗಳಿಂದಾಗಿ ವೆಚ್ಚದಾಯಕ ಮತ್ತು ಸಮಯ ಬೇಡುವ ಪ್ರಯೋಗಗಳ ಅಗತ್ಯ ಇರುವುದಿಲ್ಲ. ಇದರಿಂದ ವಿಮಾನ ವಿನ್ಯಾಸ ವೇಗವಾಗುತ್ತದೆ ಮತ್ತು ಕಡಿಮೆ ವೆಚ್ಚದಲ್ಲಿ ಸಾಧ್ಯವಾಗುತ್ತದೆ. ಸಾಂಪ್ರದಾಯಿಕವಲ್ಲದ ಮತ್ತು ಸಂಪೂರ್ಣ ಹೊಸ ರೀತಿಯ ವಿನ್ಯಾಸವನ್ನು ಮಾಡಲು ಇದು ಅನುವು ಮಾಡುತ್ತದೆ” ಎಂದು ಸಂಖ್ಯಾಸೂತ್ರ ಲ್ಯಾಬ್ಸ್‌ನ ಉದ್ಯಮ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಡಾ. ವಿನಯ್ ಕರಿವಾಲಾ ಹೇಳಿದ್ದಾರೆ.